ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ...