ದಾರುಲ್ ಬಯಾನ್ ಖಲಂದರಿಯಾ, ಮಲೆನಾಡು ಭಾಗದ ಅನಾಥ ಮತ್ತು ನಿರ್ಗತಿಕ ವಿಧ್ಯಾರ್ಥಿಗಳ ಆಶಾಕೇಂದ್ರವಾದ ಉನ್ನತ ಮಟ್ಟದ ಧಾರ್ಮಿಕ ಮತ್ತು ಲೌಕಿಕ ಕಲಿಕೆಯ ಶಿಕ್ಷಣ ಸಂಸ್ಥೆಯಾಗಿದೆ, ಇದು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಗ್ಗಸಗೋಡು ಎಂಬ ಚಕ್ಕಮಕ್ಕಿ ಗ್ರಾಮದಲ್ಲಿದೆ.
ಖಲಂದರಿಯಾವು ಶೈಖುನಾ ಅಲ್ ಹಾಜ್ ಎಸ್.ಎಮ್ ಹಂಝ ಉಸ್ತಾದರ ಹಲವಾರು ವರ್ಷದ ಕನಸಿನೊಂದಿಗೆ ಎಂ ಅಬ್ಬಾಸ್ ಹಾಜಿ ಚಕ್ಕಮಕ್ಕಿಯವರ ಆರ್ಥಿಕ ಸಹಾಯದೊಂದಿಗೆ ಜಾವಗಲ್ ಖಲಂದರ್ ಷಾಹ್ ವಲಿಯವರ ಆಶಿರ್ವಾದ ಹಾಗೂ ನಾಮದೊಂದಿಗೆ ಮತ್ತು ಶೌಖುನಾ ಮಿತ್ತಬೈಲ್ ಉಸ್ತಾದರ ನಿರ್ದೇಶನದೊಂದಿಗೆ 2000 ಇಸವಿಯಲ್ಲಿ ಲೋಕಾರ್ಪಣೆಯಾಯಿತು