ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta
Channel | 1.1K followers
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಆಸ್ಥಾನ ಪಂಡಿತರ ಅಡಿಯಲ್ಲಿ ದೀರ್ಘಕಾಲದವರೆಗೆ ನೇರವಾಗಿ ಪ್ರಶಿಕ್ಷಣವನ್ನು ಪಡೆದಂತಹ ಸಾಂಪ್ರದಾಯಿಕ ವಿದ್ವಾಂಸರು ಈ ಮಾಧ್ಯಮದ ಪ್ರಮುಖ ಮಾರ್ಗದರ್ಶಿ ದೀಪಗಳು. ಅಹಂ ಬ್ರಹ್ಮಾಸ್ಮಿಯ 50,000+ ಕುಟುಂಬವನ್ನು ಸೇರಿ, ಇದು ಸಾಮಾಜಿಕ ಮಾಧ್ಯಮದಾದ್ಯಂತ ಪ್ರಬಲವಾಗಿ ಅಸ್ಮಿತೆಯನ್ನು ಹೊಂದಿದೆ.
https://twitter.com/AhammBrahmaasmihttps://www.facebook.com/AhamBrahmaasmi.Orghttps://www.youtube.com/
ಜಗದ್ಗುರು ಶ್ರೀ ಆದಿ ಶಂಕರಾಚಾರ್ಯಭಗವತ್ಪಾದರು ಉಪನಿಷತ್ತುಗಳಲ್ಲಿ ಪ್ರತಿಪಾದಿಸಿರುವ ಅದ್ವೈತ ಸಿದ್ಧಾಂತದ ತತ್ವವನ್ನು ವಿವಿಧ ಪ್ರಕಾರಗಳಲ್ಲಿ ಆತ್ಮಸಾಕ್ಷಾತ್ಕಾರದ ಅನ್ವೇಷಣೆಯ ಮಾರ್ಗದಲ್ಲಿರುವವರಿಗಾಗಿ ದಯಪಾಲಿಸಿದ್ದಾರೆ. ಅಂತಹ ಅದ್ವೈತ ವೇದಾಂತ ಸಿದ್ಧಾಂತಗಳನ್ನು ಅನೇಕ ಶತಮಾನಗಳ ಕಾಲ ಅಸಂಖ್ಯಾತ ಆಚಾರ್ಯರು ತಮ್ಮ ಯೋಗದಾನಗಳಿಂದ ಪುಷ್ಟಿಗೊಳಿಸಿದ್ದಾರೆ. ಇಂತಹ ಅದ್ಭುತ ಅದ್ವೈತ ಸಾಹಿತ್ಯದ ವಿಚಾರಗಳನ್ನು ತಿಳಿಯಬೇಕೆಂದು ಕುತೂಹಲಗೊಂಡಿರುವವರನ್ನು ನೇರವಾಗಿ ತಲುಪಲು ನಿರ್ಮಿಸಿರುವ ಮಾಧ್ಯಮವೇ "ಅಹಂ ಬ್ರಹ್ಮಾಸ್ಮಿ".
ಜುಲೈ 2023ರಿಂದ, ಶೃಂಗೇರಿ ಮತ್ತು ಇತರ ಸ್ಥಳಗಳಲ್ಲಿ ಅನೇಕ ಭಾಷೆಗಳಲ್ಲಿ ಅದ್ವೈತ ವೇದಾಂತಗೋಷ್ಠಿಗಳನ್ನು ನಡೆಸಲು ನಾವು ಶ್ರೀ ಸನ್ನಿಧಾನಂಗಳವರ ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ನಿರಂತರವಾಗಿ ಪಡೆಯುತ್ತಿದ್ದೇವೆ.
ಸಂಪರ್ಕ: mail@ahambrahmaasmi.org