ಫ್ರೀಡಂ ಎಂದರೆ ಸ್ವಾತಂತ್ರ್ಯ. ನಾವು ಇದಕ್ಕೆ ಬದ್ಧರು. ಜನರ ಬದುಕು, ಸ್ವಾತಂತ್ರ್ಯಕ್ಕೆ ನಾವು ಬದ್ಧರು. ಜನ ಸಾಮಾನ್ಯರು ನಮಗೆ ಮುಖ್ಯರೇ ಹೊರತು ಬೇರೆ ಯಾರೂ ಅಲ್ಲ. ಮಹಾತ್ಮಾ ಗಾಂಧಿ ಅವರು ಹೇಳಿದಂತೆ, ನಮ್ಮದು ಸತ್ಯದೆಡೆಗಿನ ಪಯಣ. ಸತ್ಯವೇ ನಮ್ಮ ಧ್ಯೇಯ, ಅದುವೇ ನಮ್ಮ ನಂಬಿಕೆ.
ನಾವು ಸತ್ಯವನ್ನು ಹೇಳುವಾಗ ಯಾರಿಗೂ ಹೆದರುವುದಿಲ್ಲ. ಯಾರನ್ನೂ ಹೆದರಿಸುವುದಿಲ್ಲ. ನಿಮ್ಮ ಪ್ರೀತಿಯ ಫ್ರೀಡಂ ಟೀವಿ ನಿಮ್ಮನ್ನು ತಲುಪಲು ಸಿದ್ಧವಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಸ್ಟುಡಿಯೋ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಜ್ಯದ ಜಿಲ್ಲೆ ಮತ್ತು ತಾಲೂಕುಗಳಿಂದ ಸುದ್ದಿ ನೀಡಲು ನಾವು ಅದ್ಭುತವಾದ ತಂಡವನ್ನು ಕಟ್ಟುತ್ತಿದ್ದೇವೆ. ರಾಜ್ಯದ ಮೂಲೆ ಮೂಲೆಯಿಂದ ವಾರ್ತೆಯನ್ನು ತಂದು ನಿಮಗೆ ತಲುಪಿಸುವುದು ನಮ್ಮ ಜವಾಬ್ದಾರಿ. ನಮಗೆ ಎಲ್ಲ ಸುದ್ದಿಯೂ ಮುಖ್ಯ.
ಫ್ರೀಡಂ ಟೀವಿ ಎಂದರೆ ವಸ್ತುನಿಷ್ಠ ವರದಿಗಾರಿಕೆ, ವೃತ್ತಿಪರ ಸಂಪಾದಕೀಯ ತಂಡ, ಜನಸಾಮಾನ್ಯರ ಪರ ಅಚಲ ನಿಲುವು.
ಫ್ರೀಡಂ ಟೀವಿ ಶಿಸ್ತುಬದ್ಧ ಮಾರುಕಟ್ಟೆ ವಿಭಾಗದೊಟ್ಟಿಗೆ ವೃತ್ತಿಪರ ಪತ್ರಕರ್ತರೇ ಕಟ್ಟುತ್ತಿರುವ ಮಾಧ್ಯಮ ಸಂಸ್ಥೆ. ಹರಸಿ-ಹಾರೈಸಿ, ಪ್ರೀತಿ ತೋರಿಸಿ.