ನಿಮ್ಮ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಿ.
ನಿಮ್ಮೊಂದಿಗೆ WhatsApp ಚಾಟ್ ಪ್ರಾರಂಭಿಸಲು ಗ್ರಾಹಕರು ಬಳಸಬಹುದಾದ ಸಣ್ಣ ಲಿಂಕ್ ರಚಿಸಿ. ಇಮೇಲ್, ನಿಮ್ಮ ವೆಬ್‌ಸೈಟ್, Facebook ಪೇಜ್ ಅಥವಾ ಆಗಾಗ್ಗೆ ಬಳಸುವ ಇತರ ಚಾನಲ್‌ಗಳ ಮೂಲಕ ಲಿಂಕ್ ಅನ್ನು ಶೇರ್ ಮಾಡಿ.
ನೀವು ಸೇವೆ ಸಲ್ಲಿಸುತ್ತಿರುವ ಸಮುದಾಯಗಳ ಸದಸ್ಯರಾಗಿ, ಅನಿಶ್ಚಿತತೆ ಮತ್ತು ಪ್ರತ್ಯೇಕತೆಯ ಈ ಸಂದರ್ಭದಲ್ಲಿ ನಿಮ್ಮ ವ್ಯವಹಾರವನ್ನು ನಿರ್ವಹಿಸುವುದು ಸಾಮಾನ್ಯ ಸಮಯಕ್ಕಿಂತಲೂ ಹೆಚ್ಚು ಸವಾಲಿನಿಂದ ಕೂಡಿದೆ. WhatsApp ನಲ್ಲಿ ನಿಮ್ಮ ಗ್ರಾಹರೊಂದಿಗೆ ಸಂಪರ್ಕ ಸಾಧಿಸಿ—ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿರಲು ಅವರು ಇದೇ ಸಾಧನವನ್ನು ಬಳಸುತ್ತಿದ್ದಾರೆ.
ನಿಮ್ಮ ಗ್ರಾಹಕರನ್ನು ಸಂಪರ್ಕಿಸುವ ಸಂದರ್ಭದಲ್ಲಿ WhatsApp ಅನ್ನು ದಯವಿಟ್ಟು ಜವಾಬ್ದಾರಿಯುತವಾಗಿ ಬಳಸಿ. ನಿಮಗೆ ತಿಳಿದಿರುವ ಬಳಕೆದಾರರು ಹಾಗೂ ನಿಮ್ಮಿಂದ ಸಂದೇಶಗಳನ್ನು ಸ್ವೀಕರಿಸಲು ಬಯಸುವವರೊಂದಿಗೆ ಮಾತ್ರ ಸಂವಹನ ನಡೆಸಿ, ನಿಮ್ಮ ಫೋನ್ ನಂಬರ್ ಅನ್ನು ಅವರ ವಿಳಾಸ ಪುಸ್ತಕದಲ್ಲಿ ಉಳಿಸುವಂತೆ ಗ್ರಾಹಕರಲ್ಲಿ ಕೇಳಿಕೊಳ್ಳಿ ಮತ್ತು ಗ್ರೂಪ್‌ಗಳಿಗೆ ಸ್ವಯಂಚಾಲಿತ ಅಥವಾ ಪ್ರಚಾರದ ಮೆಸೇಜ್‌ಗಳನ್ನು ಕಳುಹಿಸುವುದನ್ನು ತಪ್ಪಿಸಿ. ಈ ಸರಳವಾದ ಉತ್ತಮ ಅಭ್ಯಾಸಗಳನ್ನು ಅನುಸರಿಸದೇ ಇರುವುದರಿಂದ ಇತರ ಬಳಕೆದಾರರು ದೂರಬಹುದು ಮತ್ತು ಖಾತೆಯನ್ನು ನಿಷೇಧಿಸಬಹುದು.
ಹಲವು ಪ್ರಶ್ನೆಗಳನ್ನು ಉತ್ತಮವಾಗಿ ನಿರ್ವಹಿಸಲು, ನಿಮ್ಮ ವ್ಯಾವಹಾರಿಕ ಪ್ರೊಫೈಲ್‌ನಲ್ಲಿ ಉಪಯಕ್ತ ಮಾಹಿತಿಯನ್ನು ವೈಶಿಷ್ಟ್ಯಗೊಳಿಸಲು, ಮತ್ತು ನಿಮ್ಮ ಸೇವೆಗಳ ಬಗ್ಗೆ ವಿವರಗಳನ್ನು ಕ್ಯಾಟಲಾಗ್‌ನಲ್ಲಿ ಹಂಚಿಕೊಳ್ಳಲು, ಉಚಿತವಾಗಿ ಡೌನ್‌ಲೋಡ್ ಮಾಡಬಹುದಾದ WhatsApp Business ಆ್ಯಪ್ ಬಳಸಲು ನಾವು ಶಿಫಾರಸು ಮಾಡುತ್ತೇವೆ. WhatsApp Business ಆ್ಯಪ್ ಬಳಸುವುದು ಹೇಗೆ ಎಂಬುದರ ಕುರಿತಾದ ಹಂತ-ಹಂತದ ಮಾರ್ಗದರ್ಶನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. ನಿಮ್ಮ ಖಾತೆಯನ್ನು WhatsApp Messenger ನಿಂದ WhatsApp Business ಆ್ಯಪ್‌ಗೆ ಬದಲಾಯಿಸಲು ಇಲ್ಲಿ ಕ್ಲಿಕ್ ಮಾಡಿ.
ನಿಮ್ಮ ಫೋನ್‍ನಲ್ಲಿ ಡೌನ್‌ಲೋಡ್ ಮಾಡಿ
ನಿಮ್ಮೊಂದಿಗೆ WhatsApp ಚಾಟ್ ಪ್ರಾರಂಭಿಸಲು ಗ್ರಾಹಕರು ಬಳಸಬಹುದಾದ ಸಣ್ಣ ಲಿಂಕ್ ರಚಿಸಿ. ಇಮೇಲ್, ನಿಮ್ಮ ವೆಬ್‌ಸೈಟ್, Facebook ಪೇಜ್ ಅಥವಾ ಆಗಾಗ್ಗೆ ಬಳಸುವ ಇತರ ಚಾನಲ್‌ಗಳ ಮೂಲಕ ಲಿಂಕ್ ಅನ್ನು ಶೇರ್ ಮಾಡಿ.
ನಿಮ್ಮ ವ್ಯವಹಾರದ ಸಮಯದಲ್ಲಿನ ಯಾವುದೇ ಬದಲಾವಣೆಗಳ ಬಗ್ಗೆ ನಿಮ್ಮ ಗ್ರಾಹಕರಿಗೆ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ವ್ಯವಹಾರವು ತೆರೆದಿರುವ ಸಮಯ ಮತ್ತು ದಿನಗಳನ್ನು ಪ್ರದರ್ಶಿಸಲು ನಿಮ್ಮ ವ್ಯಾವಹಾರಿಕ ಪ್ರೊಫೈಲ್ ಬಳಸಿ.
ಏನು ಲಭ್ಯವಿದೆ ಎಂಬುದನ್ನು ನೈಜ ಸಮಯದಲ್ಲಿ ನಿಮ್ಮ ಗ್ರಾಹಕರೊಂದಿಗೆ ಹಂಚಿಕೊಳ್ಳಿ. ನಿಮ್ಮ ಮುಖ್ಯ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ನಿಮ್ಮ ಕ್ಯಾಟಲಾಗ್ ಅಪ್‌ಡೇಟ್‌ಮಾಡಲು ಗ್ರೂಪ್‌ಗಳನ್ನು ಬಳಸಿ . ಇದರಿಂದ ಗ್ರಾಹಕರು ನಿಮ್ಮ ಸಂಗ್ರಹದಲ್ಲಿ ಏನಿದೆಯೆಂಬುದನ್ನು ಸುಲಭವಾಗಿ ನೋಡಬಹುದು.
ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರು ವೈಯಕ್ತಿಕವಾಗಿ ಪಡೆಯಲು ಬಳಸಿದ ಸೇವೆಯನ್ನು ಒದಗಿಸಲು ಎನ್‌ಕ್ರಿಪ್ಟ್ ಮಾಡಿದ ವೀಡಿಯೊ ಮತ್ತು ವಾಯ್ಸ್ ಕಾಲ್‌ಗಳನ್ನು ಬಳಸಿ.
ಜನಸಂಚಾರ ಮತ್ತು ಮಳಿಗೆಯಲ್ಲಿನ ಭೇಟಿಗಳು ಕಡಿಮೆಯಾದಂತೆ, ಮಳಿಗೆಯ ಪಿಕಪ್‌ಗಳು ಮತ್ತು ವಿತರಣೆಗಳು ಹೆಚ್ಚಾಗಬಹುದು. ನೀವು ಡೆಲಿವರಿ ವಿಳಾಸವನ್ನು ತಲುಪುತ್ತಿರುವಾಗ, WhatsApp ನಲ್ಲಿ ಲೈವ್ ಲೊಕೇಷನ್ ಸೌಲಭ್ಯವನ್ನು ಆನ್ ಮಾಡಿ. ಈ ಫೀಚರ್ ನಿಮ್ಮ ಲೊಕೇಷನ್ ಅನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳುತ್ತದೆ ಮತ್ತು ತ್ವರಿತ ಮತ್ತು ಸರಳ ವಿನಿಮಯವನ್ನು ಖಾತ್ರಿಗೊಳಿಸುತ್ತದೆ.
ಸಾಮಾನ್ಯವಾಗಿ ಗ್ರಾಹಕರು ಪ್ರತಿ ಬಾರಿ ನಿಮ್ಮ ಮಳಿಗೆಗೆ ಭೇಟಿ ನೀಡಲು ಉತ್ಸುಕರಾಗಿರುತ್ತಾರೆಯೇ? ಸ್ಟೇಟಸ್ ಅಪ್‌ಡೇಟ್ ಮೂಲಕ ಅವರಿಗೆ ವರ್ಚುವಲ್ ಟೂರ್ ನೀಡಿ.
ದೂರದಿಂದಲೇ ಸಹಕರಿಸಲು ಗ್ರೂಪ್‌ಗಳು ಮತ್ತು ಗ್ರೂಪ್ ವೀಡಿಯೊ ಕಾಲ್‌ಗಳನ್ನು ಬಳಸಿ.
WhatsApp ಕೊರೋನಾವೈರಸ್ ಮಾಹಿತಿ ಕೇಂದ್ರಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದರೆ, ನಮ್ಮನ್ನು ಸಂಪರ್ಕಿಸಿ.