1. WhatsApp Business ಆ್ಯಪ್ ಡೌನ್ಲೋಡ್ ಮಾಡಿ, ನಂತರ ತೆರೆಯಿರಿ: Google Play Store ಮತ್ತು Apple App Storeನಲ್ಲಿ WhatsApp Business ಆ್ಯಪ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದು. ನಿಮ್ಮ ಹೋಮ್ಸ್ಕ್ರೀನ್ ಮೇಲಿನ WhatsApp Business ಐಕಾನ್ ಟ್ಯಾಪ್ ಮಾಡಿ.
2. ಸೇವಾ ನಿಯಮಗಳನ್ನು ಪರಿಶೀಲಿಸಿ: WhatsApp Business ನ ಸೇವಾ ನಿಯಮಗಳನ್ನು ಓದಿ. ನಂತರ ನಿಯಮಗಳನ್ನು ಸಮ್ಮತಿಸಲು, ಸಮ್ಮತಿಸಿದ್ದೇನೆ ಮತ್ತು ಮುಂದುವರೆಯಿರಿ ಅನ್ನು ಟ್ಯಾಪ್ ಮಾಡಿ.
3. ನೋಂದಾಯಿಸಿ: ಡ್ರಾಪ್-ಡೌನ್ ಪಟ್ಟಿಯಿಂದ ನಿಮ್ಮ ದೇಶವನ್ನು ಆಯ್ಕೆಮಾಡಿದರೆ ನಿಮ್ಮ ದೇಶದ ಕೋಡ್ ಸೇರಿಕೊಳ್ಳುತ್ತದೆ. ನಂತರ ನಿಮ್ಮ ಫೋನ್ ನಂಬರ್ ಅನ್ನು ಅಂತರರಾಷ್ಟ್ರೀಯ ಫೋನ್ ನಂಬರ್ ಫಾರ್ಮ್ಯಾಟ್ನಲ್ಲಿ ನಮೂದಿಸಿ. ಮುಗಿದಿದೆ ಅಥವಾ ಮುಂದೆ ಟ್ಯಾಪ್ ಮಾಡಿ, ನಂತರ ಓಕೆ ಟ್ಯಾಪ್ ಮಾಡಿದಾಗ ನಿಮಗೆ SMS ಅಥವಾ ಫೋನ್ ಕಾಲ್ ಮೂಲಕ 6 ಅಂಕಿಯ ನೋಂದಣಿ ಕೋಡ್ ಬರುತ್ತದೆ. ಈ 6 ಅಂಕಿಯ ಕೋಡ್ ನಮೂದಿಸಿದರೆ, ನೋಂದಣಿ ಪೂರ್ಣಗೊಳ್ಳುತ್ತದೆ. ನಿಮ್ಮ ಫೋನ್ ನಂಬರ್ ಅನ್ನು ನೋಂದಾಯಿಸುವುದು ಹೇಗೆ ಎಂದು ಈ ಲೇಖನ ದಲ್ಲಿ ತಿಳಿದುಕೊಳ್ಳಿ.
4. ಕಾಂಟ್ಯಾಕ್ಟ್ಗಳು ಮತ್ತು ಫೋಟೋಗಳಿಗೆ ಪ್ರವೇಶ ನೀಡಿ: ನಿಮ್ಮ ಫೋನ್ನ ಅಡ್ರೆಸ್ ಬುಕ್ನಲ್ಲಿರುವ ಕಾಂಟ್ಯಾಕ್ಟ್ಗಳನ್ನು WhatsApp Business ಗೆ ಸೇರಿಸಬಹುದು. ನಿಮ್ಮ ಫೋನ್ನ ಫೋಟೋಗಳು, ವೀಡಿಯೊಗಳು ಮತ್ತು ಫೈಲ್ಗಳಿಗೆ ಕೂಡ ನೀವು ಆಕ್ಸೆಸ್ ನೀಡಬಹುದು.
5. ಒಂದು ಖಾತೆ ರಚಿಸಿ: ನಿಮ್ಮ ವ್ಯವಹಾರದ ಹೆಸರನ್ನು ನಮೂದಿಸಿ, ವ್ಯವಹಾರದ ಪ್ರಕಾರವನ್ನು ಆಯ್ಕೆಮಾಡಿ ಮತ್ತು ಪ್ರೊಫೈಲ್ ಫೋಟೋವನ್ನು ಆಯ್ಕೆಮಾಡಿ.
6. ನಿಮ್ಮ ವ್ಯಾವಹಾರಿಕ ಪ್ರೊಫೈಲ್ ರಚಿಸಿ: ಎಕ್ಸ್ಪ್ಲೋರ್ > ವ್ಯಾವಹಾರಿಕ ಪ್ರೊಫೈಲ್ ಟ್ಯಾಪ್ ಮಾಡಿ. ವ್ಯವಹಾರದ ಪ್ರಮುಖ ಮಾಹಿತಿಗಳಾದ, ನಿಮ್ಮ ವ್ಯವಹಾರದ ವಿಳಾಸ, ವಿವರಣೆ, ವ್ಯವಹಾರದ ಸಮಯಗಳು ಮತ್ತು ಇತರ ವಿವರಗಳನ್ನು ಇಲ್ಲಿ ನೀವು ಸೇರಿಸಬಹುದು.
7. ಚಾಟ್ ಪ್ರಾರಂಭಿಸಿ. ನಿಮ್ಮ ವ್ಯಾವಹಾರಿಕ ಪ್ರೊಫೈಲ್ ಈಗ ಸೆಟಪ್ ಆಗಿದೆ. Tap ಅಥವಾ ಅನ್ನು ಟ್ಯಾಪ್ ಮಾಡಿ, ಬಳಿಕ ಮೆಸೇಜ್ ಕಳುಹಿಸಲು ಕಾಂಟ್ಯಾಕ್ಟ್ ಅನ್ನು ಹುಡುಕಿ ಅಥವಾ ಆಯ್ಕೆ ಮಾಡಿ. ಟೆಕ್ಸ್ಟ್ ಫೀಲ್ಡ್ನಲ್ಲಿ ಮೆಸೇಜ್ ಎಂಟರ್ ಮಾಡಿ. ಬಳಿಕ, ಅಥವಾ ಟ್ಯಾಪ್ ಮಾಡಿ.
ನಿಮ್ಮ ವ್ಯವಹಾರವನ್ನು ಪರಿಣಾಮಕಾರಿಯಾಗಿ ನಡೆಸುವುದಕ್ಕಾಗಿ ಸಹಾಯ ಮಾಡಲು WhatsApp Business ಆ್ಯಪ್ನಲ್ಲಿ ಹಲವು ಟೂಲ್ಗಳಿವೆ. ಈ ಟೂಲ್ಗಳನ್ನು ಎಕ್ಸ್ಪ್ಲೋರ್ ಮಾಡಲು, ನಿಮ್ಮ ಚಾಟ್ಸ್ ಸ್ಕ್ರೀನ್ಗೆ ಹೋಗಿ. Android ನಲ್ಲಿ ಇನ್ನಷ್ಟು ಆಯ್ಕೆಗಳು ಟ್ಯಾಪ್ ಮಾಡಿ ಅಥವಾ iPhone ನಲ್ಲಿ ಸೆಟ್ಟಿಂಗ್ಗಳು ಟ್ಯಾಪ್ ಮಾಡಿ. ನಂತರ, ವ್ಯವಹಾರ ಟೂಲ್ಸ್ ಟ್ಯಾಪ್ ಮಾಡಿ.