1. ಆ್ಯಪ್ ಡೌನ್ಲೋಡ್ ಮಾಡಿ, ತೆರೆಯಿರಿ: Google Play Store ಅಥವಾ Apple App Store ಇಂದ WhatsApp Messenger ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆ್ಯಪ್ ತೆರೆಯಲು, ನಿಮ್ಮ ಹೋಮ್ಸ್ಕ್ರೀನ್ನಲ್ಲಿರುವ WhatsApp ಐಕಾನ್ ಟ್ಯಾಪ್ ಮಾಡಿ.
2. ಸೇವಾ ನಿಯಮಗಳನ್ನು ಪರಿಶೀಲಿಸಿ: ಸೇವಾ ನಿಯಮಗಳು ಮತ್ತು ಗೌಪ್ಯತಾ ನಿಯಮಗಳನ್ನು ಓದಿ. ನಂತರ ಸಮ್ಮತಿಸಿ ಮತ್ತು ಮುಂದುವರೆಯಿರಿ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನಿಯಮಗಳಿಗೆ ಸಮ್ಮತಿಸಿ.
3. ನೋಂದಾಯಿಸಿ: ಡ್ರಾಪ್-ಡೌನ್ ಪಟ್ಟಿಯಿಂದ ನಿಮ್ಮ ದೇಶವನ್ನು ಆಯ್ಕೆಮಾಡಿದರೆ ನಿಮ್ಮ ದೇಶದ ಕೋಡ್ ಸೇರಿಕೊಳ್ಳುತ್ತದೆ. ನಂತರ ನಿಮ್ಮ ಫೋನ್ ನಂಬರ್ ಅನ್ನು ಅಂತರರಾಷ್ಟ್ರೀಯ ಫೋನ್ ನಂಬರ್ ಫಾರ್ಮ್ಯಾಟ್ನಲ್ಲಿ ನಮೂದಿಸಿ. ಮುಗಿದಿದೆ ಅಥವಾ ಮುಂದೆ ಟ್ಯಾಪ್ ಮಾಡಿ, ನಂತರ ಓಕೆ ಟ್ಯಾಪ್ ಮಾಡಿದಾಗ ನಿಮಗೆ SMS ಅಥವಾ ಫೋನ್ ಕಾಲ್ ಮೂಲಕ 6 ಅಂಕಿಯ ನೋಂದಣಿ ಕೋಡ್ ಬರುತ್ತದೆ. ನೋಂದಣಿ ಪೂರ್ಣಗೊಳಿಸಲು, ಈ 6 ಅಂಕಿಯ ಕೋಡ್ ನಮೂದಿಸಿ. ನಿಮ್ಮ ಫೋನ್ ನಂಬರ್ ಅನ್ನು Android, iPhone, ಅಥವಾ KaiOS ನಲ್ಲಿ ಹೇಗೆ ನೋಂದಾಯಿಸುವುದು ಎಂದು ತಿಳಿಯಿರಿ.
4. ನಿಮ್ಮ ಪ್ರೊಫೈಲ್ ಸೆಟಪ್ ಮಾಡಿ: ನಿಮ್ಮ ಹೊಸ ಪ್ರೊಫೈಲ್ನಲ್ಲಿ ನಿಮ್ಮ ಹೆಸರನ್ನು ನಮೂದಿಸಿ. ನಂತರ ಮುಂದೆ ಟ್ಯಾಪ್ ಮಾಡಿ. ಪ್ರೊಫೈಲ್ ಫೋಟೋವನ್ನೂ ಕೂಡ ನೀವು ಸೇರಿಸಬಹುದು.
5. ಕಾಂಟ್ಯಾಕ್ಟ್ಗಳು ಮತ್ತು ಫೋಟೋಗಳಿಗೆ ಪ್ರವೇಶ ನೀಡಿ: ನಿಮ್ಮ ಫೋನ್ನ ಅಡ್ರೆಸ್ ಬುಕ್ನಲ್ಲಿರುವ ಕಾಂಟ್ಯಾಕ್ಟ್ಗಳನ್ನು WhatsApp ಗೆ ಸೇರಿಸಬಹುದು. ನಿಮ್ಮ ಫೋನ್ನ ಫೋಟೋಗಳು, ವೀಡಿಯೊಗಳು ಮತ್ತು ಫೈಲ್ಗಳಿಗೆ ಕೂಡ ನೀವು ಪ್ರವೇಶಾವಕಾಶ ನೀಡಬಹುದು.
6. ಚಾಟ್ ಪ್ರಾರಂಭಿಸಿ: ಅಥವಾ ಟ್ಯಾಪ್ ಮಾಡಿ. ಬಳಿಕ, ಕಾಂಟ್ಯಾಕ್ಟ್ ಅನ್ನು ಹುಡುಕಿ, ಪ್ರಾರಂಭಿಸಿ. ಟೆಕ್ಸ್ಟ್ ಫೀಲ್ಡ್ನಲ್ಲಿ ಮೆಸೇಜ್ ಎಂಟರ್ ಮಾಡಿ. ಫೋಟೋಗಳು ಅಥವಾ ವೀಡಿಯೊಗಳನ್ನು ಕಳುಹಿಸಲು, ಟೆಕ್ಸ್ಟ್ ಫೀಲ್ಡ್ನ ಪಕ್ಕದಲ್ಲಿರುವ ಅಥವಾ ಅನ್ನು ಟ್ಯಾಪ್ ಮಾಡಿ. ಹೊಸ ಪೋಟೋ ಅಥವಾ ವೀಡಿಯೊ ತೆಗೆದುಕೊಳ್ಳಲು ಕ್ಯಾಮರಾ ಆಯ್ಕೆ ಮಾಡಿ. ನಿಮ್ಮ ಫೋನ್ನಲ್ಲಿ ಈಗಾಗಲೇ ಇರುವ ಫೋಟೋ ಅಥವಾ ವೀಡಿಯೊವನ್ನು ಆಯ್ಕೆಮಾಡಲು ಗ್ಯಾಲರಿ ಅಥವಾ ಫೋಟೋ ಮತ್ತು ವೀಡಿಯೊ ಲೈಬ್ರರಿ ಆಯ್ಕೆಮಾಡಿ. ಬಳಿಕ, ಅಥವಾ ಟ್ಯಾಪ್ ಮಾಡಿ.
7. ಗ್ರೂಪ್ ರಚಿಸಿ: ನೀವು ಗರಿಷ್ಠ 256 ಸದಸ್ಯರಿರುವ ಗ್ರೂಪ್ ರಚಿಸಬಹುದು. ಅಥವಾ ಟ್ಯಾಪ್ ಮಾಡಿ, ಬಳಿಕ ಹೊಸ ಗ್ರೂಪ್ ಟ್ಯಾಪ್ ಮಾಡಿ. ಗ್ರೂಪ್ಗೆ ಸೇರಿಸಲು ಕಾಂಟ್ಯಾಕ್ಟ್ಗಳನ್ನು ಹುಡುಕಿ ಅಥವಾ ಆಯ್ಕೆಮಾಡಿ, ನಂತರ ಮುಂದೆ ಟ್ಯಾಪ್ ಮಾಡಿ. ಗ್ರೂಪ್ ವಿಷಯ ನಮೂದಿಸಿ ಹಾಗೂ ಟ್ಯಾಪ್ ಮಾಡಿ ಅಥವಾ ರಚಿಸಿ .
ಗೌಪ್ಯತೆ ಹಾಗೂ ಭದ್ರತೆ ಫೀಚರ್ಗಳನ್ನು ಕಸ್ಟಮೈಸ್ ಮಾಡಿ
ನಿಮ್ಮ ಗೌಪ್ಯತೆ ಹಾಗೂ ಭದ್ರತೆಯನ್ನು ಅರ್ಥ ಮಾಡಿಕೊಳ್ಳುವುದನ್ನು ಹಾಗೂ ಕಸ್ಟಮೈಸ್ ಮಾಡುವುದನ್ನು WhatsApp ಸಾಕಷ್ಟು ಸರಳಗೊಳಿಸುತ್ತದೆ. ನಮ್ಮ ಗೌಪ್ಯತೆ ಪುಟದಲ್ಲಿ ಇನ್ನಷ್ಟು ತಿಳಿಯಿರಿ.
ನೀವು ಸ್ವೀಕರಿಸುವ ಮಾಹಿತಿಯ ವಾಸ್ತವ ಪರಿಶೀಲನೆ ಮಾಡಿ
ನೀವು ಸ್ವೀಕರಿಸುವ ಮೆಸೇಜ್ ಸತ್ಯವೇ, ಸುಳ್ಳೇ ಎಂಬುದನ್ನು ಗಮನಿಸಿ. ಏಕೆಂದರೆ, ನಿಮಗೆ ಸಿಗುವ ಮಾಹಿತಿ ಎಲ್ಲವೂ ನಿಖರವಾಗಿರುವುದಿಲ್ಲ. ಸ್ವೀಕರಿಸಿದ ಮೆಸೇಜ್ ಅನ್ನು ಯಾರು ಕಳುಹಿಸಿದ್ದಾರೆ ಎಂಬುದು ನಿಮಗೆ ಗೊತ್ತಿಲ್ಲದಿದ್ದರೆ, ವಿಶ್ವಾಸಾರ್ಹ ವಾಸ್ತವ ಪರಿಶೀಲನೆಯ ಸಂಸ್ಥೆಗಳ ಮೂಲಕ ಮಾಹಿತಿಯನ್ನು ಮರುಪರಿಶೀಲನೆ ಮಾಡುವುದು ಸೂಕ್ತ. ಈ ಲೇಖನ ದಲ್ಲಿ ಸುಳ್ಳು ಮಾಹಿತಿ ಹರಡುವಿಕೆಯನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಇನ್ನಷ್ಟು ವಿವರ ತಿಳಿಯಿರಿ.
ಫಾರ್ವರ್ಡ್ ಮಾಡಿದ ಮೆಸೇಜ್ಗಳು
ಸುಳ್ಳು ಮಾಹಿತಿ ಹರಡುವಿಕೆಯನ್ನು ತಡೆಯಲು ಫಾರ್ವರ್ಡ್ ಮಾಡುವ ಮೆಸೇಜ್ಗಳ ಮೇಲೆ ನಾವು ಮಿತಿ ನಿಗದಿಪಡಿಸುತ್ತೇವೆ. ಫಾರ್ವರ್ಡ್ ಮಾಡಿದ ಮೆಸೇಜ್ಗಳನ್ನು ನೀವು ಸುಲಭವಾಗಿ ಗುರುತಿಸಬಹುದು. ಏಕೆಂದರೆ ಅವುಗಳು ಫಾರ್ವರ್ಡ್ ಮಾಡಿದ್ದು ಎಂಬ ಲೇಬಲ್ ಹೊಂದಿರುತ್ತವೆ. ಒಂದು ಮೆಸೇಜ್ ಅನ್ನು ಒಬ್ಬ ಬಳಕೆದಾರರಿಂದ ಮತ್ತೊಬ್ಬ ಬಳಕೆದಾರರಿಗೆ ಹಲವು ಬಾರಿ ಫಾರ್ವರ್ಡ್ ಮಾಡಿದಾಗ, ಮೆಸೇಜ್ ಜೊತೆಗೆ ಎರಡು ಬಾಣದ ಐಕಾನ್ ಕಾಣಿಸುತ್ತದೆ. ಈ ಲೇಖನ ದಲ್ಲಿ ಫಾರ್ವರ್ಡ್ ಮಾಡುವ ಮಿತಿಗಳ ಕುರಿತು ತಿಳಿಯಬಹುದು.