ನಿಮ್ಮ ಸಮುದಾಯದೊಂದಿಗೆ ಸಂಪರ್ಕದಲ್ಲಿರಿ
ನಿಮ್ಮೊಂದಿಗೆ ಖಾಸಗಿ WhatsApp ಚಾಟ್ ಪ್ರಾರಂಭಿಸಲು ಸಮುದಾಯದ ಸದಸ್ಯರು ಬಳಸಬಹುದಾದ ಸಣ್ಣ ಲಿಂಕ್ ರಚಿಸಿ. ಇಮೇಲ್, ನಿಮ್ಮ ವೆಬ್‌ಸೈಟ್, Facebook ಪೇಜ್ ಅಥವಾ ಆಗಾಗ್ಗೆ ಬಳಸುವ ಇತರ ಚಾನಲ್‌ಗಳ ಮೂಲಕ ಲಿಂಕ್ ಅನ್ನು ಶೇರ್ ಮಾಡಿ.
ತೀವ್ರವಾದ ಅನಿಶ್ಚಿತತೆ ಮತ್ತು ಒಬ್ಬಂಟಿತನದ ಈ ಸಂದರ್ಭದಲ್ಲಿ, ನಿಮ್ಮ ಸಮುದಾಯದೊಂದಿಗೆ WhatsApp ನಲ್ಲಿ ಸಂಪರ್ಕ ಸಾಧಿಸಬಹುದು—ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿರಲು ಅವರು ಇದೇ ಸಾಧನವನ್ನು ಬಳಸುತ್ತಿದ್ದಾರೆ.
ನಿಮ್ಮ ಗ್ರಾಹಕರನ್ನು ಸಂಪರ್ಕಿಸುವ ಸಂದರ್ಭದಲ್ಲಿ WhatsApp ಅನ್ನು ದಯವಿಟ್ಟು ಜವಾಬ್ದಾರಿಯುತವಾಗಿ ಬಳಸಿ. ನಿಮಗೆ ಗೊತ್ತಿರುವ ಬಳಕೆದಾರರು ಹಾಗೂ ನಿಮ್ಮಿಂದ ಸಂದೇಶಗಳನ್ನು ಸ್ವೀಕರಿಸಲು ಬಯಸುವವರೊಂದಿಗೆ ಮಾತ್ರ ಸಂವಹನ ನಡೆಸಿ. ನಿಮ್ಮ ಫೋನ್ ನಂಬರ್ ಅನ್ನು ಅವರ ವಿಳಾಸ ಪುಸ್ತಕದಲ್ಲಿ ಉಳಿಸುವಂತೆ ಗ್ರಾಹಕರಲ್ಲಿ ಕೇಳಿಕೊಳ್ಳಿ ಮತ್ತು ಗ್ರೂಪ್‌ಗಳಿಗೆ ಸ್ವಯಂಚಾಲಿತ ಅಥವಾ ಪ್ರಚಾರದ ಮೆಸೇಜ್‌ಗಳನ್ನು ಕಳುಹಿಸುವುದನ್ನು ತಪ್ಪಿಸಿ. ಈ ಸರಳವಾದ ಉತ್ತಮ ಅಭ್ಯಾಸಗಳನ್ನು ಅನುಸರಿಸದಿದ್ದರೆ ಇತರ ಬಳಕೆದಾರರು ದೂರಬಹುದು ಮತ್ತು ಖಾತೆಯನ್ನು ನಿಷೇಧಿಸಬಹುದು.
ಹಲವು ಪ್ರಶ್ನೆಗಳನ್ನು ಉತ್ತಮವಾಗಿ ನಿರ್ವಹಿಸಲು, ವ್ಯವಹಾರ ಪ್ರೊಫೈಲ್‌ನಲ್ಲಿ ಉಪಯಕ್ತ ಮಾಹಿತಿಯನ್ನು ನೀಡಲು ಮತ್ತು ನಿಮ್ಮ ಸೇವೆಗಳ ಬಗ್ಗೆ ವಿವರಗಳನ್ನು ಕ್ಯಾಟಲಾಗ್‌ನಲ್ಲಿ ಹಂಚಿಕೊಳ್ಳಲು, ಉಚಿತವಾಗಿ ಡೌನ್‌ಲೋಡ್ ಮಾಡಬಹುದಾದ WhatsApp Business ಆ್ಯಪ್ ಬಳಸಲು ನಾವು ಶಿಫಾರಸು ಮಾಡುತ್ತೇವೆ. WhatsApp Business ಆ್ಯಪ್ ಬಳಸುವುದು ಹೇಗೆ ಎಂಬುದರ ಕುರಿತ ಹಂತ-ಹಂತದ ಮಾರ್ಗದರ್ಶನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ . ನಿಮ್ಮ ಖಾತೆಯನ್ನು WhatsApp Messenger ನಿಂದ WhatsApp Business ಆ್ಯಪ್‌ಗೆ ಬದಲಾಯಿಸಲು ಇಲ್ಲಿ ಕ್ಲಿಕ್ ಮಾಡಿ.
ನಿಮ್ಮ ಫೋನ್‍ನಲ್ಲಿ ಡೌನ್‌ಲೋಡ್ ಮಾಡಿ
ನಿಮ್ಮೊಂದಿಗೆ ಖಾಸಗಿ WhatsApp ಚಾಟ್ ಪ್ರಾರಂಭಿಸಲು ಸಮುದಾಯದ ಸದಸ್ಯರು ಬಳಸಬಹುದಾದ ಸಣ್ಣ ಲಿಂಕ್ ರಚಿಸಿ. ಇಮೇಲ್, ನಿಮ್ಮ ವೆಬ್‌ಸೈಟ್, Facebook ಪೇಜ್ ಅಥವಾ ಆಗಾಗ್ಗೆ ಬಳಸುವ ಇತರ ಚಾನಲ್‌ಗಳ ಮೂಲಕ ಲಿಂಕ್ ಅನ್ನು ಶೇರ್ ಮಾಡಿ.
ನಿಮ್ಮವ್ಯಾವಹಾರಿಕ ಪ್ರೊಫೈಲ್ ಪೂರ್ತಿಗೊಳಿಸಿ ಮತ್ತು ಕಸ್ಟಮ್ ಅಭಿನಂದನೆ ಮೆಸೇಜ್ ಸೆಟಪ್ ಮಾಡಿ. ಇದರಿಂದ ಸಂಪನ್ಮೂಲಗಳು ಎಲ್ಲಿ ಸಿಗುತ್ತವೆ ಎಂಬುದು ಜನರಿಗೆ ತಿಳಿಯುತ್ತದೆ ಮತ್ತು ನಿಮ್ಮ ಸೇವೆಗಳ ಬಗ್ಗೆ ಹೆಚ್ಚಿನ ಮಾಹಿತಿ ಜನರಿಗೆ ತಿಳಿಯುತ್ತದೆ.
ಈ ಕಾರ್ಯನಿರತ ಸಂದರ್ಭದಲ್ಲಿ, ಸ್ವಯಂಚಾಲಿತ ಅಲಭ್ಯತೆ ಸಂದೇಶ ಬಳಸಿಕೊಂಡು ನಿಮ್ಮಿಂದ ಪ್ರತ್ಯುತ್ತರವನ್ನು ಯಾವಾಗ ಪಡೆಯಬಹುದು ಎಂಬುದನ್ನು ನಿಮ್ಮ ಸಮುದಾಯಕ್ಕೆ ತಿಳಿಸಿ.
ನಿಮ್ಮ ಸಮುದಾಯಕ್ಕೆ ಲಭ್ಯವಿರುವ ಸೇವೆಗಳ ಬಗ್ಗೆ ತರಬೇತಿ ನೀಡಿ. ನಿಮ್ಮ ವ್ಯಾವಹಾರಿಕ ಪ್ರೊಫೈಲ್ ಮೂಲಕ ಪಡೆಯಬಹುದಾದ ಸೇವಾ ವಿವರಣೆಯನ್ನು ನಿಮ್ಮ ಕ್ಯಾಟಲಾಗ್‌ನಲ್ಲಿ ಸೇರಿಸಿ.
ಸಮುದಾಯ ಸದಸ್ಯರ ಪ್ರಶ್ನೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ನೀವು ಆಗಾಗ್ಗೆ ಕಳುಹಿಸುವ ಮೆಸೇಜ್‌ಗಳನ್ನು ಉಳಿಸಿ ಮತ್ತು ಮರುಬಳಕೆ ಮಾಡಿ.
ವೈರಸ್ ಹರಡುವಿಕೆಯನ್ನು ಕಡಿಮೆಗೊಳಿಸಲು ನಿಮ್ಮ ಸಮುದಾಯವು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಪೂರ್ವಭಾವಿ ಮಾಹಿತಿ ಮತ್ತು ತರಬೇತಿ ನೀಡಿ. ಸ್ಟೇಟಸ್ ಅಪ್‌ಡೇಟ್ ನಲ್ಲಿ ಸಲಹೆಗಳನ್ನು ಪ್ರದರ್ಶಿಸಲು ಫೋಟೋಗಳು, ವೀಡಿಯೊ ಮತ್ತು ಪಠ್ಯವನ್ನು ಬಳಸಿ.
ದೂರದಿಂದಲೇ ನಿಮ್ಮ ತಂಡದೊಂದಿಗೆ ಸಹಕರಿಸಲು ಗ್ರೂಪ್‌ಗಳು ಮತ್ತುಗ್ರೂಪ್ ವೀಡಿಯೊ ಕಾಲ್‌ಗಳನ್ನು ಬಳಸಿ.
ನಿಮ್ಮ ಡೆಸ್ಕ್‌ಟಾಪ್‌ನಿಂದ ಹೆಚ್ಚಿನ ಸಂಖ್ಯೆಯ WhatsApp ಮೆಸೇಜ್‍ಗಳನ್ನು ತ್ವರಿತವಾಗಿ ಮತ್ತು ಸಮರ್ಥವಾಗಿ ನಿರ್ವಹಿಸಲು WhatsApp Web ಬಳಸಿ.
WhatsApp ಕೊರೋನಾವೈರಸ್ ಮಾಹಿತಿ ಕೇಂದ್ರಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದರೆ, ನಮ್ಮನ್ನು ಸಂಪರ್ಕಿಸಿ.