ಆರೋಗ್ಯ ಸೇವೆ ವೃತ್ತಿಪರರು
ತೀವ್ರವಾದ ಅನಿಶ್ಚಿತತೆ ಮತ್ತು ಏಕಾಂಗಿತನದ ಈ ಸಂದರ್ಭದಲ್ಲಿ, WhatsApp ನಲ್ಲಿ ನಿಮ್ಮ ರೋಗಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ನೀವು ಸಂಪರ್ಕ ಸಾಧಿಸಬಹುದು—ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿರಲು ಅವರು ಇದೇ ವಿಧಾನ ಬಳಸುತ್ತಿದ್ದಾರೆ.
ನಿಮ್ಮ ಗ್ರಾಹಕರನ್ನು ಸಂಪರ್ಕಿಸುವ ಸಂದರ್ಭದಲ್ಲಿ WhatsApp ಅನ್ನು ದಯವಿಟ್ಟು ಜವಾಬ್ದಾರಿಯುತವಾಗಿ ಬಳಸಿ. ನಿಮಗೆ ತಿಳಿದಿರುವ ಬಳಕೆದಾರರು ಹಾಗೂ ನಿಮ್ಮಿಂದ ಸಂದೇಶಗಳನ್ನು ಸ್ವೀಕರಿಸಲು ಬಯಸುವವರೊಂದಿಗೆ ಮಾತ್ರ ಸಂವಹನ ನಡೆಸಿ, ನಿಮ್ಮ ಫೋನ್ ನಂಬರ್ ಅನ್ನು ಅವರ ವಿಳಾಸ ಪುಸ್ತಕದಲ್ಲಿ ಉಳಿಸುವಂತೆ ಗ್ರಾಹಕರಲ್ಲಿ ಕೇಳಿಕೊಳ್ಳಿ ಮತ್ತು ಗ್ರೂಪ್‌ಗಳಿಗೆ ಸ್ವಯಂಚಾಲಿತ ಅಥವಾ ಪ್ರಚಾರದ ಮೆಸೇಜ್‌ಗಳನ್ನು ಕಳುಹಿಸುವುದನ್ನು ತಪ್ಪಿಸಿ. ಈ ಸರಳವಾದ ಉತ್ತಮ ಅಭ್ಯಾಸಗಳನ್ನು ಅನುಸರಿಸದಿದ್ದರೆ ಇತರ ಬಳಕೆದಾರರು ದೂರಬಹುದು ಮತ್ತು ಖಾತೆಯನ್ನು ನಿಷೇಧಿಸಬಹುದು.
ಹಲವು ಪ್ರಶ್ನೆಗಳನ್ನು ಉತ್ತಮವಾಗಿ ನಿರ್ವಹಿಸಲು, ವ್ಯವಹಾರ ಸಮಯದ ಬಗ್ಗೆ ಸಹಾಯಕ ಮಾಹಿತಿಯನ್ನು ತಿಳಿಸಲು ಮತ್ತು ಆಗಾಗ್ಗೆ ಬಳಸುವ ಉತ್ತರಗಳನ್ನು ಸಂಗ್ರಹಿಸಲು, ಉಚಿತವಾಗಿ ಡೌನ್‌ಲೋಡ್ ಮಾಡಬಹುದಾದ WhatsApp Business ಆ್ಯಪ್ ಬಳಸಲು ನಾವು ಶಿಫಾರಸು ಮಾಡುತ್ತೇವೆ. WhatsApp Business ಆ್ಯಪ್ ಬಳಸುವುದು ಹೇಗೆ ಎಂಬುದರ ಕುರಿತಾದ ಹಂತ-ಹಂತದ ಮಾರ್ಗದರ್ಶನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. ನಿಮ್ಮ ಖಾತೆಯನ್ನು WhatsApp Messenger ನಿಂದ WhatsApp Business ಆ್ಯಪ್‌ಗೆ ಬದಲಾಯಿಸಲು ಇಲ್ಲಿ ಕ್ಲಿಕ್ ಮಾಡಿ.
ನಿಮ್ಮ ಫೋನ್‍ನಲ್ಲಿ ಡೌನ್‌ಲೋಡ್ ಮಾಡಿ
*ಆರೋಗ್ಯ ದತ್ತಾಂಶ ಗೌಪ್ಯತೆ ಮತ್ತು ಭದ್ರತಾ ಕಾನೂನುಗಳನ್ನು ಒಳಗೊಂಡಂತೆ WhatsApp ನ ಯಾವುದೇ ಬಳಕೆಯು ಅನ್ವಯವಾಗುವ ಕಾನೂನುಗಳಿಗೆ ಅನುಗುಣವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ WhatsApp ಬಳಕೆದಾರರ ಜವಾಬ್ದಾರಿಯಾಗಿರುತ್ತದೆ. WhatsApp ಆರೋಗ್ಯ ಸೇವೆಗಳನ್ನು ಆಯೋಜಿಸುವುದಿಲ್ಲ ಅಥವಾ ಪೂರೈಸುವುದಿಲ್ಲ, ಮತ್ತು ನಿಮ್ಮ ಆರೋಗ್ಯ ಕಾಳಜಿ ರೂಢಿಯೊಂದಿಗೆ WhatsApp ಸಂಯೋಜಿಸಲ್ಪಟ್ಟಿದೆ ಎಂದು ನೀವು ಪ್ರತಿನಿಧಿಸುವಂತಿಲ್ಲ. ರೋಗಿಗಳೊಂದಿಗಿನ ವೈಯಕ್ತಿಕ ಆರೋಗ್ಯ ಸಮಾಲೋಚನೆಗಳಿಗೆ ಅಥವಾ ಕ್ಷಿಪ್ರ ವೈದ್ಯಕೀಯ ಆರೈಕೆಯ ಅಗತ್ಯವಿರುವ ಪರಿಸ್ಥಿತಿಗಳಲ್ಲಿ ಚಿಕಿತ್ಸೆಗಾಗಿ WhatsApp ಪರ್ಯಾಯ ವ್ಯವಸ್ಥೆಯಲ್ಲ ಮತ್ತು ಇದನ್ನು ನಿಯಂತ್ರಿತ ವೈದ್ಯಕೀಯ ಸಾಧನವಾಗಿ ಬಳಸಬಾರದು.