1. ನಿಮ್ಮ WhatsApp Messenger ಖಾತೆಯ ಬ್ಯಾಕಪ್ ರಚಿಸಿ: ನೀವು WhatsApp Messenger ಖಾತೆಯನ್ನು WhatsApp Business ಗೆ ವರ್ಗಾವಣೆ ಮಾಡುತ್ತಿದ್ದೀರಿ ಎಂದಾದರೆ, ಬ್ಯಾಕಪ್ ರಚಿಸುವಂತೆ ನಾವು ಶಿಫಾರಸು ಮಾಡುತ್ತೇವೆ. ಬ್ಯಾಕಪ್ ಮಾಡದಿದ್ದರೆ ನಿಮ್ಮ ಹಳೆಯ ಚಾಟ್ಗಳು ಅಳಿಸಿಹೋಗಬಹುದು. WhatsApp Messenger ತೆರೆಯಿರಿ. Android ನಲ್ಲಿ, ಟ್ಯಾಪ್ ಮಾಡಿ, ಬಳಿಕ ಸೆಟ್ಟಿಂಗ್ಗಳು ಟ್ಯಾಪ್ ಮಾಡಿ iPhone ನಲ್ಲಿ, ನಿಮ್ಮ ಚಾಟ್ಸ್ ಸ್ಕ್ರೀನ್ನಲ್ಲಿರುವ ಸೆಟ್ಟಿಂಗ್ಸ್ ಟ್ಯಾಪ್ ಮಾಡಿ. ಸೆಟ್ಟಿಂಗ್ಸ್ನಿಂದ, ಚಾಟ್ಗಳು ಟ್ಯಾಪ್ ಮಾಡಿ. ಬಳಿಕ ಚಾಟ್ ಬ್ಯಾಕಪ್, ನಂತರ ಬ್ಯಾಕಪ್ ಅಥವಾ ಈಗಲೇ ಬ್ಯಾಕಪ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. ನಿಮ್ಮ ಬ್ಯಾಕಪ್ ಪೂರ್ಣಗೊಂಡ ನಂತರ, ಮುಂದಿನ ಹಂತಕ್ಕೆ ಹೋಗಿ.
2. WhatsApp Business ಆ್ಯಪ್ ಡೌನ್ಲೋಡ್ ಮಾಡಿದ ನಂತರ ತೆರೆಯಿರಿ: Google Play Store ಮತ್ತು Apple App Storeನಲ್ಲಿ WhatsApp Business ಆ್ಯಪ್ ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಹೋಮ್ಸ್ಕ್ರೀನ್ ಮೇಲಿನ WhatsApp Business ಐಕಾನ್ ಟ್ಯಾಪ್ ಮಾಡಿ.
3. ಸೇವಾ ನಿಯಮಗಳನ್ನು ಪರಿಶೀಲಿಸಿ: WhatsApp Business ಸೇವಾ ನಿಯಮಗಳನ್ನು ಓದಿ. ನಂತರ ನಿಯಮಗಳನ್ನು ಸಮ್ಮತಿಸಲು ಒಪ್ಪಿದ್ದೇನೆ ಮತ್ತು ಮುಂದುವರೆಯಿರಿ ಎಂಬುದನ್ನು ಟ್ಯಾಪ್ ಮಾಡಿ.
4. ನೋಂದಾಯಿಸಿ: ನೀವು WhatsApp Messenger ನಲ್ಲಿ ಬಳಸುತ್ತಿರುವ ನಿಮ್ಮ ನಂಬರ್ ಅನ್ನು WhatsApp Business ಸ್ವಯಂಚಾಲಿತವಾಗಿ ಗುರುತಿಸುತ್ತದೆ. ಮುಂದುವರಿಸಲು, ನಿಮ್ಮ ವ್ಯವಹಾರದ ಜೊತೆಗಿನ ಆಯ್ಕೆಯನ್ನು ಟ್ಯಾಪ್ ಮಾಡಿ.
5. ನಿಮ್ಮ ಖಾತೆಯನ್ನು ವರ್ಗಾಯಿಸಿ: ಖಾತೆ ವರ್ಗಾವಣೆ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ WhatsApp Business ಆ್ಯಪ್ ಓಪನ್ ಆಗಿರಲಿ ಮತ್ತು ನಿಮ್ಮ ಫೋನ್ ಆನ್ ಆಗಿಯೇ ಇರುವಂತೆ ನೋಡಿಕೊಳ್ಳಿ. ಸ್ವಯಂಚಾಲಿತವಾಗಿ ವರ್ಗಾವಣೆ ಆಗುತ್ತಿರುವಾಗ ಬ್ಯಾಕಪ್ನಿಂದ ರಿಸ್ಟೋರ್ ಮಾಡಿ ಎಂದು ನಿಮ್ಮನ್ನು ಕೇಳಬಹುದು. ಮುಂದುವರೆಯಿರಿ ಅಥವಾ ರಿಸ್ಟೋರ್ ಟ್ಯಾಪ್ ಮಾಡಿ. ಬಳಿಕ, ಕೇಳಿದರೆ ಮುಂದೆ ಟ್ಯಾಪ್ ಮಾಡಿ.
6. ಕಾಂಟ್ಯಾಕ್ಟ್ಗಳು ಮತ್ತು ಫೋಟೋಗಳಿಗೆ ಪ್ರವೇಶ ನೀಡಿ: ನಿಮ್ಮ ಫೋನ್ನ ಅಡ್ರೆಸ್ ಬುಕ್ನಲ್ಲಿರುವ ಕಾಂಟ್ಯಾಕ್ಟ್ಗಳನ್ನು WhatsApp Business ಗೆ ಸೇರಿಸಬಹುದು. ನೀವು ನಿಮ್ಮ ಫೋನ್ನ ಫೋಟೋಗಳು, ವೀಡಿಯೊಗಳು ಮತ್ತು ಫೈಲ್ಗಳಿಗೆ ಕೂಡ ಪ್ರವೇಶ ನೀಡಬಹುದು.
7. ಖಾತೆ ರಚಿಸಿ: ನಿಮ್ಮ ವ್ಯವಹಾರದ ಹೆಸರನ್ನು ನಮೂದಿಸಿ, ವ್ಯವಹಾರದ ವಿಧವನ್ನು ಆಯ್ಕೆಮಾಡಿ ಮತ್ತು ಪ್ರೊಫೈಲ್ ಫೋಟೋವನ್ನು ಆಯ್ಕೆಮಾಡಿ.
8. ನಿಮ್ಮ ವ್ಯಾವಹಾರಿಕ ಪ್ರೊಫೈಲ್ ರಚಿಸಿ: ಎಕ್ಸ್ಪ್ಲೋರ್ > ವ್ಯಾವಹಾರಿಕ ಪ್ರೊಫೈಲ್ ಟ್ಯಾಪ್ ಮಾಡಿ. ವ್ಯವಹಾರದ ಪ್ರಮುಖ ಮಾಹಿತಿಗಳಾದ, ನಿಮ್ಮ ವ್ಯವಹಾರದ ವಿಳಾಸ, ವಿವರಣೆ, ವ್ಯವಹಾರದ ಸಮಯಗಳು ಮತ್ತು ಇತರ ವಿವರಗಳನ್ನು ಇಲ್ಲಿ ನೀವು ಸೇರಿಸಬಹುದು.
9. ಚಾಟ್ ಪ್ರಾರಂಭಿಸಿ. ನಿಮ್ಮ ವ್ಯಾವಹಾರಿಕ ಪ್ರೊಫೈಲ್ ಈಗ ಸೆಟಪ್ ಆಗಿದೆ. ಅಥವಾ ಅನ್ನು ಟ್ಯಾಪ್ ಮಾಡಿ, ಬಳಿಕ ಮೆಸೇಜ್ ಕಳುಹಿಸಲು ಕಾಂಟ್ಯಾಕ್ಟ್ ಅನ್ನು ಹುಡುಕಿ ಅಥವಾ ಆಯ್ಕೆ ಮಾಡಿ. ಟೆಕ್ಸ್ಟ್ ಫೀಲ್ಡ್ನಲ್ಲಿ ಮೆಸೇಜ್ ನಮೂದಿಸಿ. ಬಳಿಕ, ಅಥವಾ ಟ್ಯಾಪ್ ಮಾಡಿ.
ನಿಮ್ಮ ವ್ಯವಹಾರವನ್ನು ಪರಿಣಾಮಕಾರಿಯಾಗಿ ನಡೆಸುವುದಕ್ಕಾಗಿ ಸಹಾಯ ಮಾಡಲು WhatsApp Business ಆ್ಯಪ್ನಲ್ಲಿ ಹಲವು ಟೂಲ್ಗಳಿವೆ. ಈ ಟೂಲ್ಗಳನ್ನು ಎಕ್ಸ್ಪ್ಲೋರ್ ಮಾಡಲು, ನಿಮ್ಮ ಚಾಟ್ಗಳ ಸ್ಕ್ರೀನ್ಗೆ ಹೋಗಿ. Android ನಲ್ಲಿ ಇನ್ನಷ್ಟು ಆಯ್ಕೆಗಳು ಟ್ಯಾಪ್ ಮಾಡಿ ಅಥವಾ iPhone ನಲ್ಲಿ ಸೆಟ್ಟಿಂಗ್ಗಳು ಟ್ಯಾಪ್ ಮಾಡಿ. ನಂತರ, ವ್ಯವಹಾರ ಟೂಲ್ಸ್ ಟ್ಯಾಪ್ ಮಾಡಿ.