iOS ಮತ್ತು Android ಸಾಧನಗಳಾದ್ಯಂತ ವಿಶ್ವಾಸಾರ್ಹ ವಾಯ್ಸ್, ವೀಡಿಯೊ ಕಾಲಿಂಗ್ ಮತ್ತು ಖಾಸಗಿ ಮೆಸೇಜ್ ಕಳುಹಿಸುವಿಕೆಯ ಮೂಲಕ ನಿಮಗೆ ಮುಖ್ಯವಾದ ಜನರೊಂದಿಗೆ ಆತ್ಮೀಯವಾಗಿರಿ.
ವಾಯ್ಸ್ ಕಾಲ್‌ನೊಂದಿಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಭೇಟಿ ಮಾಡಿ ಅಥವಾ ಒಬ್ಬರಿಗೊಬ್ಬರು ಮತ್ತು ಗ್ರೂಪ್ ವೀಡಿಯೊ ಕಾಲ್‌ಗಳೊಂದಿಗೆ ಮುಖಾಮುಖಿಯಾಗಿ ಮಾತನಾಡಿ—ಅವು ಯಾವಾಗಲೂ ಉಚಿತ* ಮತ್ತು ಅನಿಯಮಿತವಾಗಿರುತ್ತವೆ.
*ನೀವು WiFi ಅಥವಾ ಡೇಟಾ ಪ್ಯಾಕೇಜ್ ಬಳಸಿ ಕಾಲ್ ಮಾಡಿದಾಗ
WhatsApp ಅನ್ನು 180 ಕ್ಕೂ ಹೆಚ್ಚು ದೇಶಗಳಲ್ಲಿ ಎರಡು ಬಿಲಿಯನ್‌ನಷ್ಟು ಜನರು ಬಳಸುತ್ತಾರೆ. ನೀವು ಯಾರನ್ನು ಸಂಪರ್ಕಿಸಬೇಕಾದರೂ, ಅವರು ಬಹುಶಃ WhatsApp ನಲ್ಲಿರುತ್ತಾರೆ.