WhatsApp ಕಾನೂನು ಮಾಹಿತಿ
ನೀವು ಯುರೋಪಿಯನ್ ಪ್ರದೇಶ ದಲ್ಲಿ ವಾಸಿಸುತ್ತಿದ್ದರೆ, WhatsApp Ireland Limited ("WhatsApp," "ನಮ್ಮ," "ನಾವು," ಅಥವಾ "ನಮಗೆ") ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿ ಅಡಿಯಲ್ಲಿ ನಮ್ಮ ಸೇವೆಗಳನ್ನು ನಿಮಗೆ ಒದಗಿಸುತ್ತದೆ. ನೀವು ಯುರೋಪಿಯನ್ ಪ್ರದೇಶದ ಹೊರಗೆ ವಾಸಿಸುತ್ತಿದ್ದರೆ, ಸೇವೆಗಳನ್ನು ನಿಮಗೆ WhatsApp LLC ಮೂಲಕ ಒದಗಿಸಲಾಗುವುದು.
ನಾವು Facebook ಕಂಪನಿಗಳಲ್ಲಿ ಒಬ್ಬರಾಗಿದ್ದೇವೆ. ನಮ್ಮ ಗೌಪ್ಯತೆ ನೀತಿ ("ಗೌಪ್ಯತೆ ನೀತಿ") ನಮ್ಮ ಸೇವೆಗಳನ್ನು ಒದಗಿಸಲು ನಾವು ಪ್ರಕ್ರಿಯೆಗೊಳಿಸಿದ ಮಾಹಿತಿಯನ್ನು ಒಳಗೊಂಡಂತೆ ನಮ್ಮ ಡೇಟಾ ಅಭ್ಯಾಸಗಳನ್ನು ವಿವರಿಸಲು ಸಹಾಯ ಮಾಡುತ್ತದೆ.
ಉದಾಹರಣೆಗೆ, ನಮ್ಮ ಗೌಪ್ಯತೆ ನೀತಿಯು ನಾವು ಯಾವ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಇದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಿಳಿಸುತ್ತದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ನಾವು ತೆಗೆದುಕೊಳ್ಳುವ ಕ್ರಮಗಳನ್ನು ಸಹ ಇದು ವಿವರಿಸುತ್ತದೆ - ಅಂದರೆ ನಮ್ಮ ಸೇವೆಗಳನ್ನು ಅಭಿವೃಧ್ದಿ ಪಡೆಸಲು ನೀವು ಕಳುಹಿಸಿದ ಸಂದೇಶಗಳನ್ನು ನಾವು ಸಂಗ್ರಹಿಸುವುದಿಲ್ಲ ಮತ್ತು ನಮ್ಮ ಸೇವೆಗಳನ್ನು ಉಪಯೋಗಿಸಿಕೊಂಡು ನೀವು ಯಾರೊಂದಿಗೆ ಸಂವಹನ ನಡೆಸುತ್ತೀರಿ ಎಂಬುದರ ಮೇಲೆ ನಿಮಗೆ ನಿಯಂತ್ರಣವನ್ನು ನೀಡುತ್ತದೆ.
ನಿರ್ದಿಷ್ಟಪಡಿಸದ ಹೊರತು ಈ ಎಲ್ಲಾ ಗೌಪ್ಯತೆ ನೀತಿಯನ್ನು ನಮ್ಮ ಎಲ್ಲಾ ಸೇವೆಗಳಿಗೆ ಅನ್ವಯಿಸಲಾಗುತ್ತದೆ.
ದಯವಿಟ್ಟು WhatsApp ನ ಸೇವಾ ನಿಯಮಗಳನ್ನು ("ನಿಯಮಗಳು") ಸಹ ಓದಿ, ಅದು ಯಾವ ನಿಯಮಗಳ ಅಡಿಯಲ್ಲಿ ನೀವು ಸೇವೆಯನ್ನು ಬಳಸುತ್ತೀರಿ ಮತ್ತು ನಮ್ಮ ಸೇವೆಗಳನ್ನು ನಾವು ಒದಗಿಸುತ್ತೇವೆ ಎಂಬುದನ್ನು ವಿವರಿಸುತ್ತದೆ.
ಮೇಲಕ್ಕೆ ಹಿಂದಿರುಗಿ
ಪ್ರಮುಖ ನವೀಕರಣಗಳು
ನಿಮ್ಮ ಗೌಪ್ಯತೆಗೆ ಗೌರವವನ್ನು ನಮ್ಮ DNA ಯಲ್ಲಿ ಕೋಡ್ ಮಾಡಲಾಗಿರುತ್ತದೆ. ನಾವು WhatsApp ಅನ್ನು ಪ್ರಾರಂಭಿಸಿದಾಗಿನಿಂದ, ನಾವು ನಮ್ಮ ಸೇವೆಗಳನ್ನು ಬಲವಾದ ಗೌಪ್ಯತೆ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಿದ್ದೇವೆ. ನಮ್ಮ ನವೀಕರಿಸಿದ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿ ನಲ್ಲಿ ನೀವು ಇದನ್ನು ಕಾಣಬಹುದು:
- ನಿಮ್ಮ ಮಾಹಿತಿಯನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಹೆಚ್ಚುವರಿ ವಿವರಣೆ. ನಮ್ಮ ನವೀಕರಿಸಿದ ನಿಯಮಗಳು ಮತ್ತು ಗೌಪ್ಯತೆ ನೀತಿಯು ನಮ್ಮ ಪ್ರಕ್ರಿಯೆಗೊಳಿಸಲು ಕಾನೂನು ಆಧಾರ ಮತ್ತು ಗೌಪ್ಯತೆಗೆ ನಮ್ಮ ಬದ್ಧತೆ ಸೇರಿದಂತೆ, ನಿಮ್ಮ ಡೇಟಾವನ್ನು ನಾವು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.
- ವ್ಯವಹಾರಗಳೊಂದಿಗೆ ಉತ್ತಮ ಸಂವಹನ. ಅನೇಕ ವ್ಯವಹಾರಗಳು ತಮ್ಮ ಗ್ರಾಹಕರು ಮತ್ತು ಗ್ರಾಹಕರೊಂದಿಗೆ ಸಂವಹನ ನಡೆಸಲು WhatsApp ಅನ್ನು ಅವಲಂಬಿಸಿವೆ. WhatsApp ನಿಮ್ಮೊಂದಿಗೆ ಅವರ ಸಂವಹನಗಳನ್ನು ಸಂಗ್ರಹಿಸಲು ಮತ್ತು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡಲು ನಾವು Facebook ಅಥವಾ ಮೂರನೇ ವ್ಯಕ್ತಿಗಳನ್ನು ಬಳಸುವ ವ್ಯವಹಾರಗಳೊಂದಿಗೆ ಕೆಲಸ ಮಾಡುತ್ತೇವೆ.
ಮೇಲಕ್ಕೆ ಹಿಂದಿರುಗಿ
ನಾವು ಸಂಗ್ರಹಿಸುವ ಮಾಹಿತಿ
ನಮ್ಮ ಸೇವೆಗಳನ್ನು ನೀವು ಸ್ಥಾಪಿಸುವಾಗ, ಪ್ರವೇಶಿಸುವಾಗ ಅಥವಾ ಬಳಸುವಾಗ ಸೇರಿದಂತೆ ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಅಭಿವೃದ್ದಿ ಪಡಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರಾಟ ಮಾಡಲು WhatsApp ಕೆಲವು ಮಾಹಿತಿಯನ್ನು ಸ್ವೀಕರಿಸಬೇಕಾಗುತ್ತದೆ ಅಥವಾ ಸಂಗ್ರಹಿಸಬೇಕಿರುತ್ತದೆ. ನಮ್ಮ ಸೇವೆಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇರೆಗೆ ನಾವು ಸಂಗ್ರಹಿಸುವ ಮಾಹಿತಿಯ ಪ್ರಕಾರಗಳು ಅವಲಂಬಿಸಿರುತ್ತವೆ.
ನಮ್ಮ ಸೇವೆಗಳನ್ನು ತಲುಪಿಸಲು ನಮಗೆ ಕೆಲವು ಮಾಹಿತಿಯ ಅಗತ್ಯವಿದೆ ಮತ್ತು ಇದು ಇಲ್ಲದೆ ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ನಮ್ಮ ಸೇವೆಗಳನ್ನು ಬಳಸಲು ಖಾತೆಯನ್ನು ರಚಿಸಲು ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನೀವು ಒದಗಿಸಬೇಕು.
ನಮ್ಮ ಸೇವೆಗಳು ಐಚ್ಛಿಕ ವೈಶಿಷ್ಟ್ಯಗಳನ್ನು ಹೊಂದಿವೆ, ಅದನ್ನು ನೀವು ಬಳಸಿದರೆ, ಅಂತಹ ವೈಶಿಷ್ಟ್ಯಗಳನ್ನು ಒದಗಿಸಲು ಹೆಚ್ಚುವರಿ ಮಾಹಿತಿಯ ಸಂಗ್ರಹಣೆಯು ನಮಗೆ ಅಗತ್ಯವಾಗಿ ಬೇಕಾಗುವುದು. ಅಂತಹ ಸಂಗ್ರಹಣೆಯ ಬಗ್ಗೆ, ಹೇಗೆ ಸೂಕ್ತವೋ ಹಾಗೆ ನಿಮಗೆ ತಿಳಿಸಲಾಗುವುದು. ವೈಶಿಷ್ಟ್ಯವನ್ನು ಬಳಸಲು ಅಗತ್ಯವಾದ ಮಾಹಿತಿಯನ್ನು ಒದಗಿಸದಿರುವ ಆಯ್ಕೆಯನ್ನು ನೀವು ಆರಿಸಿದರೆ, ನಿಮಗೆ ಅಂತಹ ವೈಶಿಷ್ಟ್ಯವನ್ನು ಬಳಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ನಿಮ್ಮ ಸಾಧನದಿಂದ ನಿಮ್ಮ ಸ್ಥಳದ ಡೇಟಾವನ್ನು ಸಂಗ್ರಹಿಸಲು ನೀವು ನಮಗೆ ಅನುಮತಿ ನೀಡದಿದ್ದರೆ ನಿಮ್ಮ ಸಂಪರ್ಕಗಳೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. Android ಮತ್ತು iOS ಎರಡೂ ಸಾಧನಗಳಲ್ಲಿನ ನಿಮ್ಮ ಸೆಟ್ಟಿಂಗ್‌ಗಳ ಮೆನು ಮೂಲಕ ಅನುಮತಿಗಳನ್ನು ನಿರ್ವಹಣೆ ಮಾಡಬಹುದು.
ನೀವು ನೀಡುವ ಮಾಹಿತಿ
- ನಿಮ್ಮ ಖಾತೆಯ ಮಾಹಿತಿ WhatsApp ಖಾತೆಯನ್ನು ರಚಿಸಲು ನಿಮ್ಮ ಮೊಬೈಲ್ ಫೋನ್ ಸಂಖ್ಯೆ ಮತ್ತು ಮೂಲ ಮಾಹಿತಿಯನ್ನು (ನಿಮ್ಮ ಆಯ್ಕೆಯ ಪ್ರೊಫೈಲ್ ಹೆಸರನ್ನು ಒಳಗೊಂಡಂತೆ) ನೀವು ಒದಗಿಸಬೇಕು. ನೀವು ಈ ಮಾಹಿತಿಯನ್ನು ನಮಗೆ ಒದಗಿಸದಿದ್ದರೆ, ನಮ್ಮ ಸೇವೆಗಳನ್ನು ಬಳಸಲು ನಿಮಗೆ ಖಾತೆಯನ್ನು ರಚಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಖಾತೆಗೆ ಪ್ರೊಫೈಲ್ ಚಿತ್ರ ಮತ್ತು "ನಿಮ್ಮ ಕುರಿತು" ಮಾಹಿತಿಯಂತಹ ಇತರ ಮಾಹಿತಿಯನ್ನು ನೀವು ಸೇರಿಸಬಹುದು.
- ನಿಮ್ಮ ಸಂದೇಶಗಳು. ನಮ್ಮ ಸೇವೆಗಳನ್ನು ನಿಮಗೆ ಒದಗಿಸುವ ಸಾಮಾನ್ಯ ಸ್ತರದಲ್ಲಿ ನಾವು ನಿಮ್ಮ ಸಂದೇಶಗಳನ್ನು ಉಳಿಸಿಕೊಳ್ಳುವುದಿಲ್ಲ. ಬದಲಾಗಿ, ನಿಮ್ಮ ಸಂದೇಶಗಳನ್ನು ನಿಮ್ಮ ಸಾಧನದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಅವುಗಳನ್ನು ನಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುವುದಿಲ್ಲ. ನಿಮ್ಮ ಸಂದೇಶಗಳನ್ನು ತಲುಪಿಸಿದ ನಂತರ, ಅವುಗಳನ್ನು ನಮ್ಮ ಸರ್ವರ್‌ಗಳಿಂದ ಅಳಿಸಲಾಗುತ್ತದೆ. ಈ ಕೆಳಗಿನ ಸನ್ನಿವೇಶಗಳು ನಿಮ್ಮ ಸಂದೇಶಗಳನ್ನು ತಲುಪಿಸುವಾಗ ನಾವು ಸಂಗ್ರಹಿಸಬಹುದಾದ ಸಂದರ್ಭಗಳನ್ನು ವಿವರಿಸುತ್ತದೆ:
- ತಲುಪಿಸದಿರುವ ಸಂದೇಶಗಳು. ಸಂದೇಶವನ್ನು ತಕ್ಷಣವೇ ತಲುಪಿಸಲು ಸಾಧ್ಯವಾಗದಿದ್ದರೆ (ಉದಾಹರಣೆಗೆ, ಸ್ವೀಕರಿಸುವವರು ಆಫ್‌ಲೈನ್‌ನಲ್ಲಿದ್ದರೆ), ನಾವು ಅದನ್ನು ತಲುಪಿಸಲು ಪ್ರಯತ್ನಿಸುವಾಗ ಅದನ್ನು 30 ದಿನಗಳವರೆಗೆ ನಮ್ಮ ಸರ್ವರ್‌ಗಳಲ್ಲಿ ಎನ್‌ಕ್ರಿಪ್ಟ್ ರೂಪದಲ್ಲಿ ಇರಿಸುತ್ತೇವೆ. 30 ದಿನಗಳ ನಂತರ ಸಂದೇಶವನ್ನು ಇನ್ನೂ ತಲುಪಿಸದಿದ್ದರೆ, ನಾವು ಅದನ್ನು ಅಳಿಸುತ್ತೇವೆ.
- ಮೀಡಿಯಾ ಫಾರ್ವರ್ಡ್ ಮಾಡುವುದು. ಬಳಕೆದಾರರು ಸಂದೇಶದೊಳಗೆ ಮಾಧ್ಯಮವನ್ನು ಫಾರ್ವರ್ಡ್ ಮಾಡಿದಾಗ, ಹೆಚ್ಚುವರಿ ಫಾರ್ವರ್ಡ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡಲು ನಾವು ಆ ಮಾಧ್ಯಮವನ್ನು ನಮ್ಮ ಸರ್ವರ್‌ಗಳಲ್ಲಿ ತಾತ್ಕಾಲಿಕವಾಗಿ ಎನ್‌ಕ್ರಿಪ್ಟ್ ರೂಪದಲ್ಲಿ ಸಂಗ್ರಹಿಸುತ್ತೇವೆ.
- ನಾವು ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಸೇವೆಯನ್ನು ಒದಗಿಸುತ್ತೇವೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಎಂದರೆ ನಿಮ್ಮ ಸಂದೇಶಗಳನ್ನು ಮೂರನೇ ವ್ಯಕ್ತಿಯು ಓದುವುದರ ವಿರುಧ್ದವಾಗಿ ಅವುಗಳನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಎಂದು ಅರ್ಥ. ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಮತ್ತು ವ್ಯವಹಾರಗಳು ನಿಮ್ಮೊಂದಿಗೆ WhatsApp ನಲ್ಲಿ ಯಾವ ರೀತಿಯಲ್ಲಿ ಸಂವಹನವನ್ನು ನಡೆಸುತ್ತವೆ ಹೊಂದಿರುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
- ನಿಮ್ಮ ಸಂಪರ್ಕಗಳು. ನಮ್ಮ ಸೇವೆಗಳ ಬಳಕೆದಾರರು ಮತ್ತು ನಿಮ್ಮ ಇತರ ಸಂಪರ್ಕಗಳನ್ನು ಒಳಗೊಂಡಂತೆ ನಿಯಮಿತವಾಗಿ ನಿಮ್ಮ ವಿಳಾಸ ಪುಸ್ತಕದಲ್ಲಿನ ಫೋನ್ ಸಂಖ್ಯೆಗಳೊಂದಿಗೆ ನಿಮಗೆ ಅನ್ವಯವಾಗುವ ಕಾನೂನುಗಳ ಪ್ರಕಾರ ಅನುಮತಿಸಿದರೆ ನೀವು ಸಂಪರ್ಕ ಅಪ್‌ಲೋಡ್ ವೈಶಿಷ್ಟ್ಯವನ್ನು ಬಳಸಬಹುದು ಮತ್ತು ನಮಗೆ ಒದಗಿಸಬಹುದು. ನಿಮ್ಮ ಯಾವುದೇ ಸಂಪರ್ಕಗಳು ಇನ್ನೂ ನಮ್ಮ ಸೇವೆಗಳನ್ನು ಬಳಸುತ್ತಿಲ್ಲದಿದ್ದರೆ, ಆ ಸಂಪರ್ಕಗಳನ್ನು ನಮ್ಮಿಂದ ಗುರುತಿಸಲಾಗುವುದಿಲ್ಲ ಎಂದು ಖಚಿತಪಡಿಸುವ ರೀತಿಯಲ್ಲಿ ನಾವು ಈ ಮಾಹಿತಿಯನ್ನು ನಿಮಗಾಗಿ ನಿರ್ವಹಿಸುತ್ತೇವೆ. ನಮ್ಮ ಸಂಪರ್ಕ ಅಪ್‌ಲೋಡ್ ವೈಶಿಷ್ಟ್ಯದ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ. ನೀವು ಗುಂಪುಗಳು ಮತ್ತು ಪ್ರಸಾರ ಪಟ್ಟಿಗಳನ್ನು ರಚಿಸಬಹುದು, ಸೇರಬಹುದು ಅಥವಾ ಸೇರಿಸಬಹುದು ಮತ್ತು ಅಂತಹ ಗುಂಪುಗಳು ಮತ್ತು ಪಟ್ಟಿಗಳು ನಿಮ್ಮ ಖಾತೆಯ ಮಾಹಿತಿಯೊಂದಿಗೆ ಸಂಯೋಜಿಸಲ್ಪಡುತ್ತವೆ. ನಿಮ್ಮ ಗುಂಪುಗಳಿಗೆ ನೀವು ಹೆಸರನ್ನು ನೀಡಬಹುದು. ನೀವು ಗುಂಪು ಪ್ರೊಫೈಲ್ ಚಿತ್ರ ಅಥವಾ ವಿವರಣೆಯನ್ನು ಒದಗಿಸಬಹುದು.
- ಸ್ಥಿತಿಗತಿಗಳ ಮಾಹಿತಿ. ನಿಮ್ಮ ಖಾತೆಯ ಮೂಲಕ ನೀವು ನಿಮ್ಮ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಲು ಬಯಸಿದರೆ ಅದನ್ನು ಒದಗಿಸಬಹುದು. Android, iPhone ಅಥವಾ KaiOS ನಿಮ್ಮ ಸ್ಥಿತಿಗತಿಗಳನ್ನು ತಿಳಿಸುವುದು ಹೇಗೆಂಬುದರ ಕುರಿತು ತಿಳಿಯಿರಿ.
- ವಹಿವಾಟುಗಳು ಮತ್ತು ಪಾವತಿಗಳ ಡೇಟಾ. ನೀವು ನಮ್ಮ ಪಾವತಿ ಸೇವೆಗಳನ್ನು ಬಳಸುತ್ತಿದ್ದರೆ ಅಥವಾ ಖರೀದಿಗಳು ಅಥವಾ ಇತರ ಹಣಕಾಸು ವಹಿವಾಟುಗಳ ಉದ್ದೇಶಕ್ಕಾಗಿ ರೂಪಿಸಿರುವ ನಮ್ಮ ಸೇವೆಗಳನ್ನು ಬಳಸಿದರೆ, ಪಾವತಿ ಖಾತೆ ಮತ್ತು ವಹಿವಾಟಿನ ಮಾಹಿತಿ ಸೇರಿದಂತೆ ನಿಮ್ಮ ಕುರಿತು ಹೆಚ್ಚುವರಿ ಮಾಹಿತಿಯನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ಪಾವತಿ ಖಾತೆ ಮತ್ತು ವಹಿವಾಟಿನ ಮಾಹಿತಿಯು ವಹಿವಾಟನ್ನು ಪೂರ್ಣಗೊಳಿಸಲು ಅಗತ್ಯವಾದ ಮಾಹಿತಿಯನ್ನು ಒಳಗೊಂಡಿರುತ್ತದೆ (ಉದಾಹರಣೆಗೆ, ನಿಮ್ಮ ಪಾವತಿ ವಿಧಾನ, ಶಿಪ್ಪಿಂಗ್ ವಿವರಗಳು ಮತ್ತು ವಹಿವಾಟಿನ ಮೊತ್ತದ ಕುರಿತು ಮಾಹಿತಿ). ನಿಮ್ಮ ದೇಶ ಅಥವಾ ಪ್ರದೇಶದಲ್ಲಿ ಲಭ್ಯವಿರುವ ನಮ್ಮ ಪಾವತಿ ಸೇವೆಗಳನ್ನು ನೀವು ಬಳಸಿದರೆ, ನಮ್ಮ ಗೌಪ್ಯತೆ ಅಭ್ಯಾಸಗಳಿಗೆ ಪ್ರಕಾರ ಅನ್ವಯವಾಗುವ ಪಾವತಿ ಗೌಪ್ಯತೆಯ ನೀತಿಯಲ್ಲಿ ವಿವರಿಸಲಾಗಿದೆ.
- ಗ್ರಾಹಕ ಬೆಂಬಲ ಮತ್ತು ಇತರ ಸಂವಹನಗಳು. ನೀವು ಗ್ರಾಹಕರ ಬೆಂಬಲಕ್ಕಾಗಿ ನಮ್ಮನ್ನು ಸಂಪರ್ಕಿಸಿದಾಗ ಅಥವಾ ನಮ್ಮೊಂದಿಗೆ ಸಂವಹನ ಮಾಡುವಾಗ ನಿಮ್ಮ ಸಂದೇಶಗಳ ಪ್ರತಿಗಳು, ನೀವು ಸಹಾಯಕವೆಂದು ಪರಿಗಣಿಸುವ ಮತ್ತು ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ಎಂಬುದರ ಕುರಿತಾದ ಯಾವುದೇ ಇತರ ಮಾಹಿತಿ (ಉದಾ., ಇಮೇಲ್ ವಿಳಾಸ) ಸೇರಿದಂತೆ ನಮ್ಮ ಸೇವೆಗಳ ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ನೀವು ನಮಗೆ ಒದಗಿಸಬಹುದು. ಉದಾಹರಣೆಗೆ, ನಮ್ಮ ಅಪ್ಲಿಕೇಶನ್ ಕಾರ್ಯಕ್ಷಮತೆ ಅಥವಾ ಇತರ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಯೊಂದಿಗೆ ನೀವು ನಮಗೆ ಇಮೇಲ್ ಕಳುಹಿಸಬಹುದು.
ಸ್ವಯಂಚಾಲಿತವಾಗಿ ಸಂಗ್ರಹಿಸಿದ ಮಾಹಿತಿ
- ಬಳಕೆ ಮತ್ತು ಲಾಗ್ ಮಾಹಿತಿ. ಸೇವೆ-ಸಂಬಂಧಿತ, ಪರಿಶೀಲನಾತ್ಮಕವಾದ ಮತ್ತು ಕಾರ್ಯಕ್ಷಮತೆಯ ಮಾಹಿತಿಯಂತಹ ನಮ್ಮ ಸೇವೆಗಳಲ್ಲಿನ ನಿಮ್ಮ ಚಟುವಟಿಕೆಯ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಇದು ನಿಮ್ಮ ಚಟುವಟಿಕೆಯ ಬಗ್ಗೆ ಮಾಹಿತಿ (ನೀವು ನಮ್ಮ ಸೇವೆಗಳನ್ನು ಹೇಗೆ ಬಳಸುತ್ತೀರಿ, ನಿಮ್ಮ ಸೇವೆಗಳ ಸೆಟ್ಟಿಂಗ್‌ಗಳು, ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ಇತರರೊಂದಿಗೆ ಹೇಗೆ ಸಂವಹನ ನಡೆಸುತ್ತೀರಿ (ನೀವು ವ್ಯವಹಾರದೊಂದಿಗೆ ಸಂವಹನವನ್ನು ಯಾವಾಗ ನಡೆಸುತ್ತೀರಿ ಎಂಬುದನ್ನು ಒಳಗೊಂಡಂತೆ) ಮತ್ತು ನಿಮ್ಮ ಚಟುವಟಿಕೆಗಳು ಮತ್ತು ಸಂವಹನಗಳ ಸಮಯ, ಆವರ್ತನ ಮತ್ತು ಅವಧಿ ಸೇರಿದಂತೆ) , ಲಾಗ್ ಫೈಲ್‌ಗಳು ಮತ್ತು ಪರಿಶೀಲನೆಗಳು, ಕ್ರ್ಯಾಶ್, ವೆಬ್‌ಸೈಟ್ ಮತ್ತು ಕಾರ್ಯಕ್ಷಮತೆಯ ದಾಖಲೆಗಳು ಮತ್ತು ವರದಿಗಳನ್ನು ಒಳಗೊಂಡಿರುತ್ತದೆ. ನಮ್ಮ ಸೇವೆಗಳನ್ನು ಬಳಸಲು ನೀವು ನೋಂದಾಯಿಸಿದಾಗ ನೀಡಿದ ಮಾಹಿತಿಯನ್ನು ಸಹ ಇದು ಒಳಗೊಂಡಿರುತ್ತದೆ; ನಮ್ಮ ಸಂದೇಶ ಕಳುಹಿಸುವಿಕೆ, ಕರೆಗಳು, ಸ್ಥಿತಿಗತಿಗಳು, ಗುಂಪುಗಳು (ಗುಂಪಿನ ಹೆಸರು, ಗುಂಪು ಚಿತ್ರ, ಗುಂಪು ವಿವರಣೆಯನ್ನು ಒಳಗೊಂಡಂತೆ), ಪಾವತಿಗಳು ಅಥವಾ ವ್ಯವಹಾರ ವೈಶಿಷ್ಟ್ಯಗಳು; ಪ್ರೊಫೈಲ್ ಫೋಟೋ; "ಕುರಿತು" ಮಾಹಿತಿ; ನೀವು ಆನ್‌ಲೈನ್‌ನಲ್ಲಿರುವಿರಾ ಎಂಬ ಮಾಹಿತಿ; ನೀವು ಕೊನೆಯ ಬಾರಿಗೆ ನಮ್ಮ ಸೇವೆಗಳನ್ನು ಬಳಸಿರುವುದು (ನಿಮ್ಮ "ಕೊನೆಯದಾಗಿ ನೋಡಿದ") ಮತ್ತು ನಿಮ್ಮ "ಕುರಿತು" ಮಾಹಿತಿಯನ್ನು ನೀವು ಕೊನೆಯದಾಗಿ ನವೀಕರಿಸಿದ ಮಾಹಿತಿಗಳನ್ನು ಒಳಗೊಂಡಿರುತ್ತದೆ.
- ಸಾಧನ ಮತ್ತು ಸಂಪರ್ಕ ಮಾಹಿತಿ. ನೀವು ನಮ್ಮ ಸೇವೆಗಳನ್ನು ಸ್ಥಾಪಿಸುವಾಗ, ಪ್ರವೇಶಿಸುವಾಗ ಅಥವಾ ಬಳಸುವಾಗ ನಾವು ಸಾಧನ ಮತ್ತು ಸಂಪರ್ಕಗಳ ಕುರಿತಾದ-ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಹಾರ್ಡ್‌ವೇರ್ ಮಾದರಿ, ಆಪರೇಟಿಂಗ್ ಸಿಸ್ಟಮ್ ಮಾಹಿತಿ, ಬ್ಯಾಟರಿ ಮಟ್ಟ, ಸಿಗ್ನಲ್ ಸಾಮರ್ಥ್ಯ, ಅಪ್ಲಿಕೇಶನ್ ಆವೃತ್ತಿ, ಬ್ರೌಸರ್ ಮಾಹಿತಿ, ಮೊಬೈಲ್ ನೆಟ್‌ವರ್ಕ್, ಫೋನ್ ಸಂಖ್ಯೆ, ಮೊಬೈಲ್ ಆಪರೇಟರ್ ಅಥವಾ ISP ಸೇರಿದಂತೆ ಸಂಪರ್ಕ ಮಾಹಿತಿ, ಭಾಷೆ ಮತ್ತು ಸಮಯ ವಲಯ, IP ವಿಳಾಸ, ಸಾಧನ ಕಾರ್ಯಾಚರಣೆಗಳ ಮಾಹಿತಿ ಮತ್ತು ಗುರುತಿಸುವಿಕೆಗಳು (ಒಂದೇ ಸಾಧನ ಅಥವಾ ಖಾತೆಗೆ ಸಂಬಂಧಿಸಿದ Facebook ಕಂಪನಿ ಉತ್ಪನ್ನಗಳು ವಿಶಿಷ್ಟವಾದ ಗುರುತಿಸುವಿಕೆಗಳನ್ನು ಒಳಗೊಂಡಂತೆ). ಎಲ್ಲಾ ಮಾಹಿತಿಯನ್ನು ನಾವು ಪಡೆದುಕೊಳ್ಳುತ್ತೇವೆ.
- ಸ್ಥಳದ ಮಾಹಿತಿ. ನಿಮ್ಮ ಸಂಪರ್ಕಗಳೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ಅಥವಾ ಹತ್ತಿರದ ಸ್ಥಳಗಳನ್ನು ವೀಕ್ಷಿಸಲು ಅಥವಾ ಇತರರು ನಿಮ್ಮೊಂದಿಗೆ ಹಂಚಿಕೊಂಡಿರುವ ಸ್ಥಳಗಳನ್ನು ವೀಕ್ಷಿಸಲು ನೀವು ನಿರ್ಧರಿಸಿದಾಗ ಸ್ಥಳ-ಸಂಬಂಧಿತ ವೈಶಿಷ್ಟ್ಯಗಳನ್ನು ಬಳಸಲು ನೀವು ಆರಿಸಿದಾಗ ನಿಮ್ಮ ಅನುಮತಿಯೊಂದಿಗೆ ನಿಮ್ಮ ಸಾಧನದಿಂದ ನಿಖರವಾದ ಸ್ಥಳ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ. ಸ್ಥಳ-ಸಂಬಂಧಿತ ಮಾಹಿತಿಗೆ ಸಂಬಂಧಿಸಿದ ಕೆಲವು ಸೆಟ್ಟಿಂಗ್‌ಗಳಿವೆ, ಅದನ್ನು ನಿಮ್ಮ ಸಾಧನ ಸೆಟ್ಟಿಂಗ್‌ಗಳಲ್ಲಿ ಅಥವಾ ಸ್ಥಳ ಹಂಚಿಕೆಯಂತಹ ಅಪ್ಲಿಕೇಶನ್ ಸೆಟ್ಟಿಂಗ್‌ಗಳಲ್ಲಿ ನೀವು ಕಾಣಬಹುದು. ನಮ್ಮ ಸ್ಥಳ-ಸಂಬಂಧಿತ ವೈಶಿಷ್ಟ್ಯಗಳನ್ನು ನೀವು ಬಳಸದಿದ್ದರೂ ಸಹ, ನಿಮ್ಮ ಸಾಮಾನ್ಯ ಸ್ಥಳವನ್ನು (ಉದಾ., ನಗರ ಮತ್ತು ದೇಶ) ಅಂದಾಜು ಮಾಡಲು ನಾವು IP ವಿಳಾಸಗಳು ಮತ್ತು ಫೋನ್ ಸಂಖ್ಯೆ ಪ್ರದೇಶ ಸಂಕೇತಗಳಂತಹ ಇತರ ಮಾಹಿತಿಯನ್ನು ಬಳಸಿಕೊಳ್ಳುತ್ತೇವೆ. ನಿಮ್ಮ ಸ್ಥಳ ಮಾಹಿತಿಯನ್ನು ಡಯಾಗ್ನೋಸ್ಟಿಕ್ಸ್ ಮತ್ತು ಪರಿಶೀಲನೆಗಾಗಿ ಹಾಗೂ ದೋಷಗಳನ್ನು ನಿವಾರಿಸುವ ಉದ್ದೇಶಗಳಿಗಾಗಿ ಸಹ ನಾವು ಬಳಸುತ್ತೇವೆ.
- ಕುಕೀಸ್. ವೆಬ್ ಆಧಾರಿತ ನಮ್ಮ ಸೇವೆಗಳನ್ನು ಒದಗಿಸುವುದು, ನಿಮ್ಮ ಅನುಭವಗಳನ್ನು ಸುಧಾರಿಸುವುದು, ನಮ್ಮ ಸೇವೆಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ಕಸ್ಟಮೈಸ್ ಮಾಡುವುದು ಸೇರಿದಂತೆ ನಮ್ಮ ಸೇವೆಗಳನ್ನು ನಿರ್ವಹಿಸಲು ಮತ್ತು ಒದಗಿಸಲು ನಾವು ಕುಕೀಸ್ ಅನ್ನು ಬಳಸುತ್ತೇವೆ. ಉದಾಹರಣೆಗೆ, ವೆಬ್ ಮತ್ತು ಡೆಸ್ಕ್‌ಟಾಪ್ ಮತ್ತು ಇತರ ವೆಬ್ ಆಧಾರಿತ ಸೇವೆಗಳಿಗಾಗಿ ನಮ್ಮ ಸೇವೆಗಳನ್ನು ಒದಗಿಸಲು ನಾವು ಕುಕೀಸ್ ಅನ್ನು ಬಳಸುತ್ತೇವೆ. ನಮ್ಮ ಯಾವ ಸಹಾಯ ಕೇಂದ್ರ ಲೇಖನಗಳು ಹೆಚ್ಚು ಜನಪ್ರಿಯವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಸೇವೆಗಳಿಗೆ ಸಂಬಂಧಿಸಿದ ವಿಷಯವನ್ನು ನಿಮಗೆ ತೋರಿಸಲು ನಾವು ಕುಕೀಸ್ ಅನ್ನು ಬಳಸಬಹುದು. ಹೆಚ್ಚುವರಿಯಾಗಿ ನಾವು ನಿಮ್ಮ ಆಯ್ಕೆಗಳಲ್ಲಿ ನೆನೆಪಿನಲ್ಲಿಟ್ಟುಕೊಳ್ಳಲು, ಹೇಗೆಂದರೆ ನಿಮ್ಮ ಭಾಷೆಯ ಆಯ್ಕೆಯನ್ನು ನೆನೆಪಿನಲ್ಲಿಟ್ಟುಕೊಳ್ಳಲು, ಸುರಕ್ಷಿತವಾದ ಅನುಭವವನ್ನು ನೀಡಲು, ಅದರ ಹೊರತಾಗಿ ನಿಮಗಾಗಿ ಕಸ್ಟಮೈಸ್ಡ್ ಸೇವೆಯನ್ನು ನೀಡಲು ನಾವು ಕುಕೀಸ್ ಅನ್ನು ಬಳಸಬಹುದು. ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು ನಾವು ಕುಕೀಸ್ ಅನ್ನು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಮೂರನೇ ವ್ಯಕ್ತಿಯ ಮಾಹಿತಿ
- ನಿಮ್ಮ ಕುರಿತು ಬೇರೆಯವರು ನೀಡುವ ಮಾಹಿತಿ. ನಿಮ್ಮ ಕುರಿತು ಇತರ ಬಳಕೆದಾರರಿಂದ ನಾವು ಮಾಹಿತಿಯನ್ನು ಸ್ವೀಕರಿಸುತ್ತೇವೆ. ಉದಾಹರಣೆಗೆ, ನಿಮಗೆ ತಿಳಿದಿರುವ ಇತರ ಬಳಕೆದಾರರು ನಮ್ಮ ಸೇವೆಗಳನ್ನು ಬಳಸುವಾಗ, ಅವರು ನಿಮ್ಮ ಫೋನ್ ಸಂಖ್ಯೆ, ಹೆಸರು ಮತ್ತು ಇತರ ಮಾಹಿತಿಯನ್ನು (ಅವರ ಮೊಬೈಲ್ ವಿಳಾಸ ಪುಸ್ತಕದ ಮಾಹಿತಿಯಂತೆ) ನೀವು ಒದಗಿಸಿದಂತೆಯೇ ಒದಗಿಸಬಹುದು. ಅವರು ನಿಮಗೆ ಸಂದೇಶಗಳನ್ನು ಕಳುಹಿಸಬಹುದು, ನೀವು ಸೇರಿರುವ ಗುಂಪುಗಳಿಗೆ ಸಂದೇಶಗಳನ್ನು ಕಳುಹಿಸಬಹುದು ಅಥವಾ ನಿಮಗೆ ಕರೆ ಮಾಡಬಹುದು. ನಮಗೆ ಯಾವುದೇ ಡೇಟಾವನ್ನು ಒದಗಿಸುವ ಮೊದಲು ಈ ರೀತಿಯ ಪ್ರತಿಯೊಬ್ಬ ಬಳಕೆದಾರರು ನಿಮ್ಮ ಮಾಹಿತಿಯನ್ನು ಸಂಗ್ರಹಿಸಲು, ಬಳಸಲು ಮತ್ತು ಹಂಚಿಕೊಳ್ಳಲು ಕಾನೂನು ರೀತಿಯಲ್ಲಿ ಹಕ್ಕುಗಳನ್ನು ಹೊಂದಿರಬೇಕೆಂದು ನಾವು ಬಯಸುತ್ತೇವೆ.
ಸಾಮಾನ್ಯವಾಗಿ ಯಾವುದೇ ಬಳಕೆದಾರರು ನಿಮ್ಮ ಚಾಟ್‌ಗಳು ಅಥವಾ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸೆರೆಹಿಡಿಯಬಹುದು ಅಥವಾ ಅವರೊಂದಿಗೆ ಮಾತನಾಡುವಾಗ ನಿಮ್ಮ ಕರೆಗಳನ್ನು ರೆಕಾರ್ಡಿಂಗ್ ಮಾಡಬಹುದು ಮತ್ತು ಅವುಗಳನ್ನು WhatsApp ಮಾಡಬಹುದು ಅಥವಾ ಬೇರೆಯವರಿಗೆ ಕಳುಹಿಸಬಹುದು ಅಥವಾ ಅವುಗಳನ್ನು ಬೇರೆ ಪ್ಲ್ಯಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಬಹುದು ಎಂಬುದನ್ನು ನೀವು ನೆನಪಿನಲ್ಲಿಡಬೇಕು. - ಬಳಕೆದಾರರ ವರದಿಗಳು. ನೀವು ಇತರ ಬಳಕೆದಾರರಿಗೆ ವರದಿ ಮಾಡುವಂತೆಯೇ, ಇತರ ಬಳಕೆದಾರರು ಅಥವಾ ಮೂರನೇ ವ್ಯಕ್ತಿಗಳು ನಿಮ್ಮ ಸಂವಹನಗಳನ್ನು ಮತ್ತು ಅವರೊಂದಿಗೆ ಅಥವಾ ನಮ್ಮ ಸೇವೆಗಳಲ್ಲಿ ಇತರರೊಂದಿಗೆ ನಿಮ್ಮ ಸಂದೇಶಗಳನ್ನು ನಮಗೆ ವರದಿ ಮಾಡಲು ಆಯ್ಕೆ ಮಾಡಬಹುದು; ಉದಾಹರಣೆಗೆ, ನಮ್ಮ ನಿಯಮಗಳು ಅಥವಾ ನೀತಿಗಳ ಸಂಭವನೀಯ ಉಲ್ಲಂಘನೆಗಳನ್ನು ವರದಿ ಮಾಡಲು. ವರದಿಯನ್ನು ಮಾಡಿದಾಗ, ವರದಿ ಮಾಡುವ ಬಳಕೆದಾರರು ಮತ್ತು ಈಗಾಗಲೇ ವರದಿ ಮಾಡಿರುವ ಬಳಕೆದಾರರ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಬಳಕೆದಾರರು ವರದಿಯನ್ನು ಮಾಡಿದಾಗ ಏನಾಗುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು "ಸುಧಾರಿತ ಸುರಕ್ಷತೆ ಮತ್ತು ಭದ್ರತಾ ವೈಶಿಷ್ಟ್ಯಗಳು" ಇಲ್ಲಿ ನೋಡಿ.
- WhatsApp ಮೂಲಕ ವ್ಯವಹಾರಗಳು. ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ಬೇರೆಯವರ ಜೊತೆಗೆ ಮಾಡುವ ವ್ಯವಹಾರ ಸಂವಹನಗಳಿಂದ ನಿಮ್ಮ ಪರಸ್ಪರ ಪ್ರತಿಕ್ರಿಯೆಗಳ ಮಾಹಿತಿಯನ್ನು ನೀಡಬಹುದು. ನಮಗೆ ಯಾವುದೇ ಮಾಹಿತಿಯನ್ನು ಒದಗಿಸುವಾಗ ಈ ಪ್ರತಿಯೊಂದು ವ್ಯವಹಾರಗಳು ಅನ್ವಯವಾಗುವ ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ. ನೀವು WhatsApp ನಲ್ಲಿ ವ್ಯವಹಾರಿಕ ಸಂದೇಶ ಕಳುಹಿಸಿದಾಗ, ನೀವು ಹಂಚಿಕೊಳ್ಳುವ ವಿಷಯವು ಆ ವ್ಯವಹಾರದಲ್ಲಿರುವ ಹಲವಾರು ಜನರಿಗೆ ಗೋಚರಿಸಬಹುದು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು. ಹೆಚ್ಚುವರಿಯಾಗಿ, ಕೆಲವು ವ್ಯವಹಾರಗಳು ತಮ್ಮ ಗ್ರಾಹಕರೊಂದಿಗೆ ತಮ್ಮ ಸಂವಹನಗಳನ್ನು ನಿರ್ವಹಿಸಲು ಸಹಾಯ ಮಾಡಲು ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರೊಂದಿಗೆ (Facebook ಅನ್ನು ಒಳಗೊಂಡಿರಬಹುದು) ಕೆಲಸ ಮಾಡುತ್ತಿರಬಹುದು. ಉದಾಹರಣೆಗೆ, ವ್ಯವಹಾರವು ಅಂತಹ ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರನ್ನು ತಮ್ಮ ಸಂವಹನಗಳಿಗೆ ಕಳುಹಿಸಲು, ಸಂಗ್ರಹಿಸಲು, ಓದಲು, ನಿರ್ವಹಿಸಲು ಅಥವಾ ವ್ಯವಹಾರ ಪ್ರಕ್ರಿಯೆಗೊಳಿಸಲು ಪ್ರವೇಶವನ್ನು ನೀಡಬಹುದು.
ವ್ಯವಹಾರವು ನಿಮ್ಮ ಮಾಹಿತಿಯನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಮಾಹಿತಿಯನ್ನು ಮೂರನೇ-ವ್ಯಕ್ತಿಗಳು ಅಥವಾ Facebook ನೊಂದಿಗೆ ಹೇಗೆ ಹಂಚಿಕೊಳ್ಳಬಹುದು ಎಂಬುದು ಸೇರಿದಂತೆ ನೀವು ಆ ವ್ಯವಹಾರದ ಗೌಪ್ಯತೆ ನೀತಿಯನ್ನು ಪರಿಶೀಲಿಸಬೇಕು ಅಥವಾ ವ್ಯವಹಾರವನ್ನು ನೇರವಾಗಿ ಸಂಪರ್ಕಿಸಬೇಕು. - ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು. ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರುಕಟ್ಟೆಗೆ ಸಹಾಯ ಮಾಡಲು ನಾವು ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು ಮತ್ತು ಇತರ Facebook ಕಂಪನಿಗಳೊಂದಿಗೆ ಕಾರ್ಯ ನಿರ್ವಹಿಸುತ್ತೇವೆ. ಉದಾಹರಣೆಗೆ, ನಾವು ಅವರೊಂದಿಗೆ ನಮ್ಮ ಅಪ್ಲಿಕೇಶನ್‌ಗಳನ್ನು ವಿತರಿಸಲು; ನಮ್ಮ ತಾಂತ್ರಿಕ ಮತ್ತು ಭೌತಿಕ ಮೂಲಸೌಕರ್ಯ, ವಿತರಣೆ ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸಲು; ಎಂಜಿನಿಯರಿಂಗ್ ಬೆಂಬಲ ಒದಗಿಸಲು, ಸೈಬರ್ ಸುರಕ್ಷತೆ ಬೆಂಬಲ ಮತ್ತು ಕಾರ್ಯಾಚರಣೆಯ ಬೆಂಬಲವನ್ನು ಒದಗಿಸಲು; ಸ್ಥಳ, ನಕ್ಷೆ ಮತ್ತು ಸ್ಥಳಗಳ ಮಾಹಿತಿಯನ್ನು ಪೂರೈಸಲು; ಪಾವತಿಗಳನ್ನು ಪ್ರಕ್ರಿಯೆ ಮಾಡಲು; ಜನರು ನಮ್ಮ ಸೇವೆಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಲು; ನಮ್ಮ ಸೇವೆಗಳನ್ನು ಮಾರ್ಕೆಟ್ ಮಾಡಲು; ನಮ್ಮ ಸೇವೆಗಳನ್ನು ಬಳಸಿಕೊಂಡು ವ್ಯವಹಾರಗಳೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡಲು; ನಮಗೆ ಸಮೀಕ್ಷೆಗಳು ಮತ್ತು ಸಂಶೋಧನೆಗಳನ್ನು ನಡೆಸಲು; ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು; ಮತ್ತು ಗ್ರಾಹಕ ಸೇವೆಯ ಕುರಿತು ಸಹಾಯ ಮಾಡಲು ಕಾರ್ಯನಿರ್ವಹಿಸುತ್ತೇವೆ. ಈ ಕಂಪನಿಗಳು ಕೆಲವು ಸಂದರ್ಭಗಳಲ್ಲಿ ನಿಮ್ಮ ಕುರಿತಾದ ಮಾಹಿತಿಯನ್ನು ನಮಗೆ ಒದಗಿಸಬಹುದು; ಉದಾಹರಣೆಗೆ, ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆಹಚ್ಚಲು ಮತ್ತು ಸರಿಪಡಿಸಲು ನಮಗೆ ಸಹಾಯ ಮಾಡಲು ಆಪ್ ಸ್ಟೋರ್‌ಗಳು ನಮಗೆ ವರದಿಗಳನ್ನು ಒದಗಿಸಬಹುದು.
ಈ ಕೆಳಗಿನ "ನಾವು ಇತರ Facebook ಕಂಪನಿಗಳೊಂದಿಗೆ ಹೇಗೆ ಕಾರ್ಯ ನಿರ್ವಹಿಸುತ್ತೇವೆ" ಎಂಬ ವಿಭಾಗವು ಇತರ Facebook ಕಂಪನಿಗಳೊಂದಿಗೆ WhatsApp ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ಹಂಚಿಕೊಳ್ಳುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ನಾವು Facebook ಕಂಪನಿಗಳೊಂದಿಗೆ ಹೇಗೆ ಕಾರ್ಯ ನಿರ್ವಹಿಸುತ್ತೇವೆ ಎಂಬುದರ ಕುರಿತು ನಮ್ಮ ಸಹಾಯ ಕೇಂದ್ರದಲ್ಲಿ ಸಹ ನೀವು ಇನ್ನಷ್ಟು ತಿಳಿದುಕೊಳ್ಳಬಹುದು. - ಮೂರನೇ ವ್ಯಕ್ತಿಯ ಸೇವೆಗಳು. ಮೂರನೇ ವ್ಯಕ್ತಿಯ ಸೇವೆಗಳು ಮತ್ತು Facebook ಕಂಪನಿ ಉತ್ಪನ್ನಗಳು ಸಂಬಂಧಿಸಿದಂತೆ ನಮ್ಮ ಸೇವೆಗಳನ್ನು ಬಳಸಲು ನಾವು ನಿಮಗೆ ಅನುಮತಿಸುತ್ತೇವೆ. ಅಂತಹ ಮೂರನೇ ವ್ಯಕ್ತಿಯ ಸೇವೆಗಳು ಅಥವಾ Facebook ಕಂಪನಿ ಉತ್ಪನ್ನಗಳೊಂದಿಗೆ ನೀವು ನಮ್ಮ ಸೇವೆಗಳನ್ನು ಬಳಸಿದರೆ, ಅವರಿಂದ ನಿಮ್ಮ ಬಗ್ಗೆ ಮಾಹಿತಿಯನ್ನು ನಾವು ಸ್ವೀಕರಿಸಬಹುದು; ಉದಾಹರಣೆಗೆ, ನಮ್ಮ ಸೇವೆಗಳಲ್ಲಿನ ನಿಮ್ಮ WhatsApp ಸಂಪರ್ಕಗಳು, ಗುಂಪುಗಳು ಅಥವಾ ಪ್ರಸಾರ ಪಟ್ಟಿಗಳೊಂದಿಗೆ ಸುದ್ದಿ ಲೇಖನವನ್ನು ಹಂಚಿಕೊಳ್ಳಲು ನೀವು ಸುದ್ದಿ ಸೇವೆಯಲ್ಲಿನ WhatsApp ಹಂಚಿಕೆ ಬಟನ್ ಅನ್ನು ಬಳಸಿದರೆ ಅಥವಾ ಮೊಬೈಲ್ ಕ್ಯಾರಿಯರ್ ಅಥವಾ ಸಾಧನ ಪೂರೈಕೆದಾರರ ಪ್ರಚಾರದ ಮೂಲಕ ನಮ್ಮ ಸೇವೆಗಳನ್ನು ಉಪಯೋಗಿಸಿಕೊಳ್ಳಲು ಬಯಸಿದರೆ ಆಗ ನಿಮ್ಮ ಮಾಹಿತಿಯನ್ನು ನಾವು ಪಡೆಯಬಹುದು. ನೀವು ಮೂರನೇ ವ್ಯಕ್ತಿಯ ಸೇವೆಗಳನ್ನು ಅಥವಾ Facebook ಕಂಪನಿ ಉತ್ಪನ್ನಗಳನ್ನು ಬಳಸುವಾಗ, ಅವರ ಸ್ವಂತ ನಿಯಮಗಳು ಮತ್ತು ಗೌಪ್ಯತೆ ನೀತಿಗಳು ಆ ಸೇವೆಗಳು ಮತ್ತು ಉತ್ಪನ್ನಗಳ ಮೇಲಿನ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ಮೇಲಕ್ಕೆ ಹಿಂದಿರುಗಿ
ನಾವು ಮಾಹಿತಿಯನ್ನು ಹೇಗೆ ಬಳಸಿಕೊಳ್ಳುತ್ತೇವೆ
ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಅಭಿವೃದ್ದಿಪಡಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರಾಟ ಮಾಡಲು ನಾವು ಹೊಂದಿರುವ ಮಾಹಿತಿಯನ್ನು (ನೀವು ಮಾಡುವ ಆಯ್ಕೆಗಳು ಮತ್ತು ಅನ್ವಯಿಸುವ ಕಾನೂನಿಗೆ ಒಳಪಟ್ಟು) ನಾವು ಬಳಸುತ್ತೇವೆ. ಹೇಗೆ ಎಂಬುದನ್ನು ಇಲ್ಲಿ ನೋಡಿ:
- ನಮ್ಮ ಸೇವೆಗಳು. ಗ್ರಾಹಕರ ಬೆಂಬಲವನ್ನು ಒದಗಿಸುವುದು, ಖರೀದಿಗಳು ಅಥವಾ ವಹಿವಾಟುಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ನಮ್ಮ ಸೇವೆಗಳನ್ನು ನಿರ್ವಹಿಸಲು ಮತ್ತು ಒದಗಿಸಲು ನಾವು ಮಾಹಿತಿಯನ್ನು ಬಳಸುತ್ತೇವೆ ಮತ್ತು ನಮ್ಮ ಸೇವೆಗಳನ್ನು ಅಭಿವೃದ್ದಿಪಡಿಸಲು, ಸರಿಪಡಿಸುವುದು ಮತ್ತು ಕಸ್ಟಮೈಸ್ ಮಾಡಲು ಮಾಹಿತಿಯನ್ನು ಬಳಸುತ್ತೇವೆ. ನಮ್ಮ ಸೇವೆಗಳನ್ನು ಜನರು ಹೇಗೆ ಉಪಯೋಗಿಸುತ್ತಾರೆಂಬುದನ್ನು ಅರ್ಥಮಾಡಿಕೊಳ್ಳಲು; ನಮ್ಮ ಸೇವೆಗಳ ಮೌಲ್ಯಮಾಪನ ಮಾಡಲು ಮತ್ತು ಅಭಿವೃಧ್ದಿಪಡಿಸಲು; ಹೊಸ ಸೇವೆಗಳು ಮತ್ತು ವೈಶಿಷ್ಟ್ಯಗಳ ಸಂಶೋಧನೆ ಮಾಡಲು, ಅಭಿವೃದ್ದಿಗೊಳಿಸಲು ಮತ್ತು ಪರೀಕ್ಷಿಸಲು; ಮತ್ತು ದೋಷಗಳನ್ನು ಬಗೆಹರಿಸುವ ಚಟುವಟಿಕೆಗಳನ್ನು ಮಾಡಲು ಸಹ ನಾವು ಹೊಂದಿರುವ ಮಾಹಿತಿಯನ್ನು ಬಳಸುತ್ತೇವೆ. ನೀವು ನಮ್ಮನ್ನು ಸಂಪರ್ಕಿಸಿದಾಗ ನಿಮಗೆ ಪ್ರತಿಕ್ರಿಯಿಸಲು ಸಹ ನಿಮ್ಮ ಮಾಹಿತಿಯನ್ನು ನಾವು ಬಳಸುತ್ತೇವೆ.
- ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆ. ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆ ನಮ್ಮ ಸೇವೆಗಳ ಅಂತರ್ನಿಮಿತ ಭಾಗವಾಗಿದೆ. ನಮ್ಮಲ್ಲಿರುವ ಮಾಹಿತಿಯನ್ನು ಹಲವಾರು ಖಾತೆಗಳನ್ನು ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ನೋಡಲು ಮಾಹಿತಿಯನ್ನು ಉಪಯೋಗಿಸುತ್ತೇವೆ; ಹಾನಿಕಾರಕ ನಡತೆಗಳ ವಿರುದ್ದ ಹೋರಾಡುತ್ತೇವೆ; ಕೆಟ್ಟ ಅನುಭವಗಳ ವಿರುದ್ದ ಹಾಗೂ ಸ್ಪ್ಯಾಮ್ ವಿರುಧ್ದ ನಮ್ಮ ಬಳಕೆದಾರರನ್ನು ರಕ್ಷಿಸುತ್ತೇವೆ; ಮತ್ತು ಸುರಕ್ಷತೆಯನ್ನು ಪ್ರೋತ್ಸಾಹಿಸಲು, ಸುಭ್ರತೆಯನ್ನು ಮತ್ತು ಸಮಗ್ರತೆಯನ್ನು ಸೇವೆಗಳನ್ನು ನೀಡುವಾಗ ಮತ್ತು ಆನಂತರವೂ ಅನುಮಾನಾಸ್ಪದವಾದ ಚಟುವಟಿಕೆಗಳನ್ನು ಅಥವಾ ನಿಯಮಗಳು ಮತ್ತು ಪಾಲಿಸಿಗಳ ಉಲ್ಲಂಘನೆಯನ್ನು ತಡೆಯಲು ಮತ್ತು ನಮ್ಮ ಸೇವೆಯನ್ನು ಕಾನೂನುಬಧ್ದವಾಗಿ ಉಪಯೋಗಿಸಲಾಗುತ್ತಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಮಾಹಿತಿಯನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕೆಳಗಿನ "ಕಾನೂನು, ನಮ್ಮ ಹಕ್ಕುಗಳು ಮತ್ತು ರಕ್ಷಣೆ" ವಿಭಾಗವನ್ನು ನೋಡಿ.
- ನಮ್ಮ ಸೇವೆಗಳು ಮತ್ತು Facebook ಕಂಪನಿಗಳ ಕುರಿತು ಸಂವಹನಗಳು. ನಮ್ಮ ಸೇವೆಗಳ ಕುರಿತು ನಿಮ್ಮೊಡನೆ ಸಂವಹನ ಮಾಡಲು ಮತ್ತು ನಿಮಗೆ ನಮ್ಮ ನಿಯಮಗಳು ಮತ್ತು ನೀತಿಗಳು ಹಾಗೂ ಮತ್ತಿತರ ಪ್ರಮುಖ ನವೀಕರಣಗಳ ಕುರಿತು ತಿಳಿಸಲು ನಾವು ಹೊಂದಿರುವ ಮಾಹಿತಿಯನ್ನು ಉಪಯೋಗಿಸಿಕೊಳ್ಳುತ್ತೇವೆ. ನಮ್ಮ ಸೇವೆಗಳಿಗೆ ಮತ್ತು Facebook ಕಂಪನಿಗಳ ಸೇವೆಗಳಿಗೆ ನಾವು ಮಾರುಕಟ್ಟೆಯನ್ನು ಒದಗಿಸಬಹುದು. ಹೆಚ್ಚಿನ ಮಾಹಿತಿಗಾಗಿ "ನಿಮ್ಮ ಹಕ್ಕುಗಳನ್ನು ನೀವು ಹೇಗೆ ಚಲಾಯಿಸುತ್ತೀರಿ" ವಿಭಾಗವನ್ನು ದಯವಿಟ್ಟು ವೀಕ್ಷಿಸಿ.
- ಯಾವುದೇ ಮೂರನೇ ವ್ಯಕ್ತಿಯ ಬ್ಯಾನರ್ ಜಾಹೀರಾತುಗಳಿಗೆ ಅವಕಾಶವಿಲ್ಲ. ನಾವು ಈಗಲೂ ಮೂರನೇ ವ್ಯಕ್ತಿಯ ಬ್ಯಾನರ್ ಜಾಹೀರಾತುಗಳಿಗೆ ನಮ್ಮ ಸೇವೆಗಳಲ್ಲಿ ಅವಕಾಶ ನೀಡುವುದಿಲ್ಲ. ಅವುಗಳನ್ನು ಪರಿಚಯಿಸುವ ಉದ್ದೇಶ ನಮಗಿಲ್ಲ, ಆದರೆ ನಾವು ಎಂದಾದರೂ ಅವಕಾಶ ನೀಡಿದರೆ, ನಾವು ಈ ಬಗೆಗೆ ಇರುವ ಗೌಪ್ಯತೆ ನೀತಿಯನ್ನು ನವೀಕರಿಸುತ್ತೇವೆ.
- ವ್ಯವಹಾರ ಸಂವಹನಗಳು. WhatsApp ನ ಕ್ಯಾಟಲಾಗ್ಸ್ ಫಾರ್ ಬಿಸಿನೆಸ್ ಉಪಯೋಗಿಸಿಕೊಂಡು ನಿಮಗೆ ಹಾಗೂ ಮೂರನೇ ವ್ಯಕ್ತಿಗಳಿಗೆ, ಅಂದರೆ ವ್ಯವಹಾರಗಳಲ್ಲಿ ಸಂವಹನ ನಡೆಸಲು ಪರಸ್ಪರ ಪ್ರತಿಕ್ರಿಯೆಗೊಳಿಸಲು ನಮ್ಮ ಸೇವೆಗಳನ್ನು ಪರಸ್ಪರ ಪಡೆಯಲು ನಾವು ನಿಮಗೆ ಅನುಮತಿಸುತ್ತೇವೆ. ಅಲ್ಲಿ ನೀವು ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಬ್ರೌಸ್ ಮಾಡಬಹುದು ಮತ್ತು ಆರ್ಡರ್‌ಗಳನ್ನು ನೀಡಬಹುದು. ವ್ಯವಹಾರಗಳು ನಿಮಗೆ ವಹಿವಾಟು, ನೇಮಕಾತಿ ಮತ್ತು ಶಿಪ್ಪಿಂಗ್ ಅಧಿಸೂಚನೆಗಳು; ಉತ್ಪನ್ನ ಮತ್ತು ಸೇವಾ ನವೀಕರಣಗಳು; ಮತ್ತು ಮಾರ್ಕೆಟಿಂಗ್ ಕುರಿತು ಕಳುಹಿಸಬಹುದು. ಉದಾಹರಣೆಗೆ, ಮುಂಬರುವ ಪ್ರಯಾಣಕ್ಕಾಗಿ ನೀವು ಫ್ಲೈಟ್ ಸ್ಥಿತಿ ಮಾಹಿತಿ, ನೀವು ಖರೀದಿಯ ವಸ್ತುವಿನ ಯಾವುದಾದರೂ ರಶೀದಿ ಅಥವಾ ವಿತರಣೆಯನ್ನು ಮಾಡಿದಾಗ ಅಧಿಸೂಚನೆಯನ್ನು ನೀವು ಸ್ವೀಕರಿಸಬಹುದು. ನೀವು ವ್ಯವಹಾರದಿಂದ ಈ ರೀತಿಯ ಸಂದೇಶಗಳನ್ನು ಸ್ವೀಕರಿಸಿದಾಗ ಅದು ನಿಮಗೆ ಆಸಕ್ತಿದಾಯಕವಾಗಿದೆ ಎಂದೆನಿಸುವ ಕೊಡುಗೆಗಳನ್ನು ಹೊಂದಿರಬಹುದು. ನಿಮ್ಮ ಎಲ್ಲಾ ಸಂದೇಶಗಳಂತೆ ನೀವು ಸ್ಪ್ಯಾಮ್ ಅನುಭವವನ್ನು ಪಡೆಯುವುದನ್ನು ನಾವು ಬಯಸುವುದಿಲ್ಲ; ನೀವು ಈ ಸಂವಹನಗಳನ್ನು ನಿರ್ವಹಿಸಬಹುದು ಮತ್ತು ನಿಮ್ಮ ಆಯ್ಕೆಗಳನ್ನು ನಾವು ಗೌರವಿಸುತ್ತೇವೆ.
- ಮೆಸೇಜಿಂಗ್ ಮೆಟಾಡೇಟಾ. ಮೆಸೇಜಿಂಗ್ ಮೆಟಾಡೇಟಾ ನಿಮ್ಮ ಸಂದೇಶಗಳು ಅಥವಾ ಕರೆಗಳನ್ನು ತಲುಪಿಸಲು ನಾವು ಪ್ರಕ್ರಿಯೆಗೊಳಿಸುವ ಮಾಹಿತಿಯನ್ನು ಒಳಗೊಂಡಿದೆ ಮತ್ತು ಇದು ನಿಮ್ಮ ಬಳಕೆದಾರ ID ಮತ್ತು ನೀವು ಸಂದೇಶವನ್ನು ಕಳುಹಿಸುವ ಸಮಯದಂತಹ ಮಾಹಿತಿಯನ್ನು ಒಳಗೊಂಡಿದೆ. ಸಂವಹನವನ್ನು ರವಾನಿಸಲು, ನಮ್ಮ ಸೇವೆಗಳನ್ನು ನಿರ್ವಹಿಸಲು (ಸಾಮಾನ್ಯ ಸಂಚಾರ ನಿರ್ವಹಣೆ ಮತ್ತು ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ವೈಫಲ್ಯಗಳ ಪರಿಹಾರ ಸೇರಿದಂತೆ), ನಮ್ಮ ಸೇವೆಗಳ ಸುರಕ್ಷತೆ ಮತ್ತು ಸುಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಮೆಸೇಜಿಂಗ್ ಮೆಟಾಡೇಟಾವನ್ನು ಬಳಸುತ್ತೇವೆ (ಇವುಗಳಲ್ಲಿ ಲಭ್ಯತೆ, ಅಧಿಕೃತವಾಗಿರುವಿಕೆ, ಸಮಗ್ರತೆ ಮತ್ತು ವಿಶ್ವಸನೀಯತೆ, ವಿಶೇಷವಾಗಿ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ, ತನಿಖೆ ಮತ್ತು ಸುರಕ್ಷತೆಗೆ ಅಡ್ಡಿಯಾದ ಸಂದರ್ಭದಲ್ಲಿ ಮಧ್ಯಸ್ಥಿಕೆ, ಸ್ಪ್ಯಾಮ್, ಸೂಕ್ಷ್ಮತೆಗಳು, ಮಾಲ್‌ವೇರ್ ಮತ್ತು ಅನಧಿಕೃತ ಉಪಯೋಗ ಅಥವಾ ಸೇವೆಗಳಿಗೆ ಪ್ರವೇಶ ಪಡೆಯುವುದು ಮುಂತಾದವು ಸೇರಿವೆ), ಬಿಲ್ಲಿಂಗ್‌ನಲ್ಲಿ (ಎಲ್ಲಿ ಅನ್ವಯವಾಗುವುದೋ ಅಲ್ಲಿ) ಮತ್ತು ಇವೆಲ್ಲದರವುಗಳಲ್ಲಿ ಎಲ್ಲಿ ಅನ್ವಯವಾಗುವುದೋ ಅಲ್ಲಿ ಕಾನೂನುಬದ್ಧವಾಗಿ ಹೊಂದಾಣಿಕೆ ಮಾಡಿಕೊಳ್ಳುವುದು.
ಮೇಲಕ್ಕೆ ಹಿಂದಿರುಗಿ
ನಾವು ಮತ್ತು ನೀವು ಹಂಚಿಕೊಳ್ಳುವ ಮಾಹಿತಿ
ನಮ್ಮ ಸೇವೆಗಳನ್ನು ನೀವು ಬಳಸುವಾಗ ಮತ್ತು ಸಂವಹನ ಮಾಡುವಾಗ ನಿಮ್ಮ ಮಾಹಿತಿಯನ್ನು ನೀವು ಹಂಚಿಕೊಳ್ಳುತ್ತೀರಿ ಮತ್ತು ನಾವು ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರಾಟ ಮಾಡಲು ನಮಗೆ ಸಹಾಯ ಆಗುವಂತಹ ನಿಮ್ಮ ಮಾಹಿತಿಯನ್ನು ನಾವು ಹಂಚಿಕೊಳ್ಳುತ್ತೇವೆ.
- ನೀವು ಸಂವಹನ ಮಾಡಲು ಆಯ್ಕೆ ಮಾಡಿದವರಿಗೆ ನಿಮ್ಮ ಮಾಹಿತಿಯನ್ನು ಕಳುಹಿಸಿ. ನಮ್ಮ ಸೇವೆಗಳನ್ನು ಉಪಯೋಗಿಸಿಕೊಂಡು ಸಂವಹನ ಮಾಡಿದಾಗ ನೀವು ನಿಮ್ಮ ಮಾಹಿತಿಯನ್ನು (ಸಂದೇಶಗಳನ್ನೊಳಗೊಂಡಂತೆ) ಹಂಚಿಕೊಳ್ಳುವಿರಿ.
- ನಿಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ ಮಾಹಿತಿ. ನಿಮ್ಮ ಫೋನ್ ಸಂಖ್ಯೆ, ಪ್ರೊಫೈಲ್ ಹೆಸರು ಮತ್ತು ಪೋಟೋ, "ಕುರಿತು" ಮಾಹಿತಿ, ಕೊನೆಯದಾಗಿ ನೋಡಿದ್ದರ ಕುರಿತಾಗಿ ಮಾಹಿತಿ ಮತ್ತು ಸಂದೇಶದ ಸ್ವೀಕೃತಿಗಳು ನಮ್ಮ ಸೇವೆಗಳನ್ನು ಬಳಸುವ ಎಲ್ಲರಿಗೂ ಲಭ್ಯವಾಗುತ್ತದೆ, ಹಾಗಾದರೂ, ನೀವು ಸಂವಹನ ನಡೆಸುವ ವ್ಯವಹಾರಗಳನ್ನು ಒಳಗೊಂಡಂತೆ ಇತರ ಬಳಕೆದಾರರಿಗೆ ಲಭ್ಯವಿರುವ ಕೆಲವು ಮಾಹಿತಿಯನ್ನು ನಿರ್ವಹಿಸಲು ನಿಮ್ಮ ಸೇವೆಗಳ ಸೆಟ್ಟಿಂಗ್‌ಗಳನ್ನು ನೀವು ಕಾನ್ಫಿಗರ್ ಮಾಡಬಹುದು.
- ನಿಮ್ಮ ಸಂಪರ್ಕಗಳು ಮತ್ತು ಇತರರು. ವ್ಯವಹಾರ ಒಳಗೊಂಡಂತೆ, ನೀವು ಯಾರ ಜೊತೆಗೆ ಸಂಪರ್ಕ ಹೊಂದುವಿರೋ ಅಂತಹ ಬಳಕೆದಾರರು ನಿಮ್ಮ ಮಾಹಿತಿಯನ್ನು (ನಿಮ್ಮ ಫೋನ್ ನಂಬರ್ ಒಳಗೊಂಡಂತೆ ಅಥವಾ ಸಂದೇಶಗಳನ್ನು) ಮರುಹಂಚಿಕೆಯನ್ನು ನಮ್ಮ ಸೇವೆಯನ್ನು ಉಪಯೋಗಿಸಿಕೊಂಡು/ಉಪಯೋಗಿಸಿಕೊಳ್ಳದೆಯೇ ಮಾಡಿಕೊಳ್ಳಬಹುದು. ನಮ್ಮ ಸೇವೆಯ ಸೆಟ್ಟಿಂಗ್‌ಗಳನ್ನು ಉಪಯೋಗಿಸಿಕೊಂಡು ನೀವು ಯಾರೊಡನೆ ಸಂವಹನ ಮಾಡುವಿರೂ ಅವರೊಡನೆ ಕೆಲವು ಮಾಹಿತಿಯನ್ನು ಮಾತ್ರ ಹಂಚಿಕೊಂಡು ಉಳಿದ ಮಾಹಿತಿಯನ್ನು "ಬ್ಲಾಕ್" ವೈಶಿಷ್ಟ್ಯವನ್ನು ಉಪಯೋಗಿಸಿಕೊಂಡು ತಡೆಹಿಡಿಯಬಹುದು, ನಿರ್ವಹಣೆ ಮಾಡಬಹುದು.
- WhatsApp ಮೂಲಕ ವ್ಯವಹಾರಗಳು. ನಾವು ವ್ಯವಹಾರಗಳಿಗೆ ನಿರ್ದಿಷ್ಟ ಸೇವೆಗಳನ್ನು ಮತ್ತು ವೈಶಿಷ್ಟ್ಯಗಳನ್ನು ಒದಗಿಸುತ್ತೇವೆ ಹೇಗೆಂದರೆ ನಾವು ನಮ್ಮ ಸೇವೆಗಳನ್ನು ಉಪಯೋಗಿಸಿಕೊಳ್ಳುವವರಿಗೆ ಅದರ ಕುರಿತಾಗಿ ಮೆಟ್ರಿಕ್ಸ್‌ಗಳನ್ನು ಒದಗಿಸುತ್ತೇವೆ.
- ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು. ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರುಕಟ್ಟೆಗೆ ಸಹಾಯ ಮಾಡಲು ನಾವು ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು ಮತ್ತು ಇತರ Facebook ಕಂಪನಿಗಳೊಂದಿಗೆ ಕಾರ್ಯ ನಿರ್ವಹಿಸುತ್ತೇವೆ. ತಾಂತ್ರಿಕ ಮೂಲಸೌಕರ್ಯ ಒದಗಿಸುವಿಕೆ, ವಿತರಣೆ ಮತ್ತು ಇತರ ವ್ಯವಸ್ಥೆ; ನಮ್ಮ ಸೇವೆಗಳ ಕುರಿತು ಪ್ರಚಾರ ಮಾಡುವಿಕೆ; ನಮಗಾಗಿ ಸಮೀಕ್ಷೆ ಮತ್ತು ಸಂಶೋಧನೆಯನ್ನು ನಡೆಸುವಿಕೆ; ಬಳಕೆದಾರರ ಮತ್ತು ಇತರರ ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆಯನ್ನು ರಕ್ಷಿಸುವಿಕೆ; ಮತ್ತು ಗ್ರಾಹಕರ ಸೇವೆಗೆ ಸಹಾಯ ಮಾಡುವಿಕೆಯಂತಹ ನಮ್ಮ ಸೇವೆಗಳನ್ನು ಬೆಂಬಲಿಸಲು ನಾವು ಈ ಕಂಪನಿಗಳೊಂದಿಗೆ ಕಾರ್ಯ ನಿರ್ವಹಿಸುತ್ತೇವೆ. ನಾವು ಮಾಹಿತಿಯನ್ನು ಮೂರನೇ ವ್ಯಕ್ತಿ ಸೇವಾ ಪೂರೈಕೆದಾರರು ಮತ್ತು ಇತರ Facebook ನ ಕಂಪನಿಗಳೊಂದಿಗೆ ನಿಮ್ಮ ಮಾಹಿತಿಯನ್ನು ಈ ಸಾಮರ್ಥ್ಯದಲ್ಲಿ ಹಂಚಿಕೊಂಡಾಗ ಅವರು ನಿಮ್ಮ ಮಾಹಿತಿಯನ್ನು ನಮ್ಮ ಪರವಾಗಿ ನಾವು ನೀಡಿದ ಸೂಚನೆಗಳಿಗೆ ಮತ್ತು ನಿಯಮಗಳಿಗೆ ಅನುಸಾರವಾಗಿ ಕೆಲಸ ಮಾಡುವ ಅಗತ್ಯವಿರುತ್ತದೆ. Facebook ಕಂಪನಿಗಳು ಹೇಗೆ ನಮಗೆ ನಮ್ಮ ಕೆಲಸವನ್ನು ನಿರ್ವಹಿಸಲು ಸೇವೆಯನ್ನು ಒದಗಿಸಲು ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು "ನಾವು ಹೇಗೆ Facebook ಕಂಪನಿಗಳ ಜೊತೆಗೆ ಕಾರ್ಯ ನಿರ್ವಹಿಸುುತ್ತೇವೆ" ಕೆಳಗೆ ನೀಡಲಾಗಿದೆ, ನೋಡಿ. Facebook ಕಂಪನಿಗಳೊಂದಿಗೆ ನಾವು ಹೇಗೆ ಕಾರ್ಯನಿರ್ವಹಿಸುುತ್ತೇವೆ ಎಂಬುದರ ಬಗ್ಗೆ ನಮ್ಮ ಸಹಾಯ ಕೇಂದ್ರದಲ್ಲಿ ನಾವು ಇನ್ನಷ್ಟು ಕಲಿಯಬಹುದು.
- ಮೂರನೇ ವ್ಯಕ್ತಿಯ ಸೇವೆಗಳು. ನೀವು ಅಥವಾ ಇತರರು ನಮ್ಮ ಸೇವೆಗಳೊಂದಿಗೆ ಸಂಯೋಜಿಸಲ್ಪಟ್ಟ ಮೂರನೇ ವ್ಯಕ್ತಿಯ ಸೇವೆಗಳನ್ನು ಅಥವಾ ಇತರ Facebook ಕಂಪನಿ ಉತ್ಪನ್ನಗಳು ಬಳಸುವಾಗ, ಆ ಮೂರನೇ ವ್ಯಕ್ತಿಯ ಸೇವೆಗಳು ನೀವು ಅಥವಾ ಇತರರು ಅವರೊಂದಿಗೆ ಏನು ಹಂಚಿಕೊಳ್ಳುತ್ತೀರಿ ಎಂಬುದರ ಕುರಿತು ಮಾಹಿತಿಯನ್ನು ಪಡೆಯಬಹುದು. ಉದಾಹರಣೆಗೆ, ನಮ್ಮ ಸೇವೆಗಳೊಂದಿಗೆ (iCloud ಅಥವಾ Google Drive ನಂತಹ) ಸಂಯೋಜಿಸಲ್ಪಟ್ಟ ಡೇಟಾ ಬ್ಯಾಕಪ್ ಸೇವೆಯನ್ನು ನೀವು ಬಳಸಿದರೆ, ನೀವು ಅವರೊಂದಿಗೆ ಹಂಚಿಕೊಳ್ಳುವ ನಿಮ್ಮ WhatsApp ಸಂದೇಶಗಳಂತಹ ಮಾಹಿತಿಯನ್ನು ಅವರು ಸ್ವೀಕರಿಸುತ್ತಾರೆ. ಒಂದು ವೇಳೆ ನೀವು ಮೂರನೇ ವ್ಯಕ್ತಿಯ ಜೊತೆಗೆ ಪರಸ್ಪರ ಸೇವೆಯನ್ನು ಪಡೆದಾಗ ಅಥವಾ ನಮ್ಮ ಸೇವೆಯ ಜೊತೆಗೆ ಲಿಂಕ್ ಮಾಡಲಾದ Facebook ಕಂಪನಿಯ ಉತ್ಪನ್ನಗಳನ್ನು ಬಳಸಿದಾಗ, ಹೇಗೆಂದರೆ ಮೂರನೇ ವ್ಯಕ್ತಿಯ ವೇದಿಕೆಯನ್ನು ಉಪಯೋಗಿಸಿ, ನೀವು ಅಪ್ಲಿಕೇಶನ್‌ನಲ್ಲಿನ ಪ್ಲೇಯರ್ ಉಪಯೋಗಿಸಿ ವಿಷಯಗಳನ್ನು ನೋಡಿದಾಗ ನಿಮ್ಮ ಬಗೆಗಿನ ಮಾಹಿತಿ ಅಂದರೆ ನಿಮ್ಮ IP ವಿಳಾಸ ಮತ್ತು ನೀವು WhatsApp ಬಳಕೆದಾರರೆಂದು ಅಥವಾ Facebook ಕಂಪನಿಯ ಉತ್ಪನ್ನಗಳನ್ನು ಉಪಯೋಗಿಸುವಿರೆಂಬ ಮಾಹಿತಿಯು ಮೂರನೇ ವ್ಯಕ್ತಿಗಳಿಗೆ ಒದಗಿಸಲಾಗುವುದು. ನೀವು ಮೂರನೇ ವ್ಯಕ್ತಿಯ ಸೇವೆಗಳನ್ನು ಅಥವಾ ಇತರ Facebook ಕಂಪನಿ ಉತ್ಪನ್ನಗಳನ್ನು ಬಳಸುವಾಗ, ಅವರ ಸ್ವಂತ ನಿಯಮಗಳು ಮತ್ತು ಗೌಪ್ಯತೆ ನೀತಿಗಳು ಆ ಸೇವೆಗಳು ಮತ್ತು ಉತ್ಪನ್ನಗಳ ಮೇಲಿನ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ಮೇಲಕ್ಕೆ ಹಿಂದಿರುಗಿ
ಇತರ Facebook ಕಂಪನಿಗಳೊಂದಿಗೆ ನಾವು ಹೇಗೆ ಕಾರ್ಯನಿರ್ವಹಿಸುತ್ತೇವೆ?
Facebook ಕಂಪನಿಗಳ ಒಂದು ಭಾಗವಾಗಿ, WhatsApp ತಾನು ಪಡೆದ ಮಾಹಿತಿಯನ್ನು ಇತರ Facebook ಕಂಪನಿಗಳ ಜೊತೆಗೆ ಹಂಚಿಕೊಳ್ಳುತ್ತದೆ, ಸುರಕ್ಷತೆ, ಸುಭದ್ರತೆ ಮತ್ತು ಸಮಗ್ರತೆಯನ್ನು ತನ್ನೆಲ್ಲಾ Facebook ಕಂಪನಿಯ ಉತ್ಪನ್ನಗಳ ಜೊತೆಗೆ ಹಂಚಿಕೊಳ್ಳುತ್ತದೆ, ಉದಾ., ಸ್ಪ್ಯಾಮ್ ವಿರುದ್ದ ಹೋರಾಡಲು, ಬೆದರಿಕೆಗಳ, ದುರುಪಯೋಗದ ಅಥವಾ ಅನಧಿಕೃತ ಚಟುವಟಿಕೆಗಳನ್ನು ತಡೆಯಲು ಉಪಯೋಗಿಸಿಕೊಳ್ಲುತ್ತದೆ.
ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರುಕಟ್ಟೆಗೆ ಸಹಾಯ ಮಾಡಲು ನಮ್ಮ ಪರವಾಗಿ ಕಾರ್ಯನಿರ್ವಹಿಸುವ ಇತರ Facebook ಕಂಪನಿಗಳೊಂದಿಗೆ WhatsApp ಸಹ ಕಾರ್ಯನಿರ್ವಹಿಸುತ್ತದೆ ಮತ್ತು ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ಇದು ಮೂಲಸೌಕರ್ಯ, ತಂತ್ರಜ್ಞಾನ ಮತ್ತು ವ್ಯವಸ್ಥೆಗಳ ಅವಕಾಶಗಳನ್ನು ಒಳಗೊಂಡಿದೆ, ಉದಾ. ಪ್ರಪಂಚದಾದ್ಯಂತ ನಿಮಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ಸಂದೇಶ ಕಳುಹಿಸುವಿಕೆ ಮತ್ತು ಕರೆಗಳನ್ನು ಒದಗಿಸುವುದಕ್ಕಾಗಿ; ಮೂಲಸೌಕರ್ಯ ಮತ್ತು ವಿತರಣಾ ವ್ಯವಸ್ಥೆಗಳನ್ನು ಸುಧಾರಿಸಲು; ನಮ್ಮ ಸೇವೆಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು; ವ್ಯವಹಾರಗಳೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಒಂದು ಮಾರ್ಗವನ್ನು ಒದಗಿಸಲು ನಮಗೆ ಸಹಾಯ ಮಾಡುವುದು; ಮತ್ತು ಸುರಕ್ಷಿತ ವ್ಯವಸ್ಥೆಗಳು ಇದರಲ್ಲಿ ಒಳಗೊಂಡಿವೆ. ನಾವು Facebook ಕಂಪನಿಗಳಿಂದ ಸೇವೆಗಳನ್ನು ಸ್ವೀಕರಿಸಿದಾಗ, ನಾವು ಅವರೊಂದಿಗೆ ಹಂಚಿಕೊಳ್ಳುವ ಮಾಹಿತಿಯನ್ನು WhatsApp ಪರವಾಗಿ ಮತ್ತು ನಮ್ಮ ಸೂಚನೆಗಳಿಗೆ ಅನುಗುಣವಾಗಿ ಬಳಸಲಾಗುತ್ತದೆ. WhatsApp ಹಂಚಿಕೊಳ್ಳುವ ಯಾವುದೇ ಮಾಹಿತಿಯನ್ನು ಈ ಆಧಾರದ ಮೇಲೆ Facebook ಕಂಪನಿಗಳು ತಮ್ಮ ಸ್ವಂತದ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದಿಲ್ಲ.
ನಾವು ಇನ್ನೂ ಹೆಚ್ಚಿನ ಮಾಹಿತಿಯನ್ನು ನಮ್ಮ ಸಹಾಯ ಕೇಂದ್ರ ಗಳಲ್ಲಿ ನೀಡಿದ್ದೇವೆ ಅಲ್ಲಿ Facebook ಕಂಪನಿಗಳು ಜೊತೆಗೆ WhatsApp ಹೇಗೆ ಕಾರ್ಯ ನಿರ್ವಹಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಮೇಲಕ್ಕೆ ಹಿಂದಿರುಗಿ
ಡೇಟಾ ಪ್ರಕ್ರಿಯೆಗೊಳಿಸುವುದಕ್ಕೆ ನಮ್ಮ ಕಾನೂನು ಆಧಾರ
ಅನ್ವಯಿಸುವ ಡೇಟಾ ರಕ್ಷಣೆಯ ಕಾನೂನಿನ ಪ್ರಕಾರ, ಡೇಟಾವನ್ನು ಪ್ರಕ್ರಿಯೆಗೊಳಿಸಲು ಕಂಪನಿಗಳು ಕಾನೂನು ಆಧಾರವನ್ನು ಹೊಂದಿರಬೇಕು. ಈ ಗೌಪ್ಯತೆ ನೀತಿಯಲ್ಲಿ ವಿವರಿಸಿದ ವಿವಿಧ ಉದ್ದೇಶಗಳಿಗಾಗಿ ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸಲು ನಾವು ವಿಭಿನ್ನ ಕಾನೂನು ನೆಲೆಗಳನ್ನು ಅವಲಂಬಿಸಿದ್ದೇವೆ. ಈ ಕೆಳಗೆ ವಿವರಿಸಿದಂತೆ, ಸಂದರ್ಭಕ್ಕೆ ಅನುಸಾರವಾಗಿ ಒಂದೇ ಉದ್ದೇಶಕ್ಕಾಗಿ ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸುವಾಗ ನಾವು ವಿಭಿನ್ನ ಕಾನೂನು ನೆಲೆಗಳನ್ನು ಅವಲಂಬಿಸಬಹುದು. ಕೆಳಗೆ ನೀಡಲಾದ ಪ್ರತಿಯೊಂದು ಕಾನೂನು ಆಧಾರಗಳಿಗೂ ಸಹ, ನಾವು ಪ್ರಕ್ರಿಯೆಗೊಳಿಸುವ ಉದ್ದೇಶವನ್ನು ವಿವರಿಸುತ್ತೇವೆ (ನಾವು ನಿಮ್ಮ ಮಾಹಿತಿಯನ್ನು ಏಕೆ ಪ್ರಕ್ರಿಯೆಗೊಳಿಸುತ್ತೇವೆ) ಮತ್ತು ನಮ್ಮ ಪ್ರಕ್ರಿಯೆಗೊಳಿಸುವ ಕಾರ್ಯಾಚರಣೆಯು (ಹೇಗೆ ನಿಮ್ಮ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತವೆ, ಉದಾ: ನಾವು ನಿಮ್ಮಿಂದ ಪಡೆದ ಮಾಹಿತಿಯನ್ನು ನಿಮ್ಮ ಖಾತೆಯನ್ನು ರಚಿಸಲು ಬಳಸುತ್ತೇವೆ). ಪ್ರತಿಯೊಂದು ಉದ್ದೇಶಕ್ಕಾಗಿ ನಾವು ಪ್ರಕ್ರಿಯೆಗೊಳಿಸುವ ನಿಮ್ಮ ಮಾಹಿತಿಯ ವರ್ಗಗಳನ್ನು ಸಹ ನಾವು ಪಟ್ಟಿ ಮಾಡುತ್ತೇವೆ.
ನಾವು ಯಾವ ಕಾನೂನು ಆಧಾರದ ಮೇಲೆ ಬಳಸುತ್ತೇವೆ ಎನ್ನುವುದನ್ನು ಅವಲಂಬಿಸಿ ನಿಮಗೆ ಲಭ್ಯವಿರುವ ನಿರ್ದಿಷ್ಟ ಹಕ್ಕುಗಳನ್ನು ನೀವು ಹೊಂದಿರುತ್ತೀರಿ ಎಂಬುದನ್ನು ನಾವು ಈ ಕೆಳಗೆ ವಿವರಿಸಿದ್ದೇವೆ. ಯಾವ ಕಾನೂನು ಯಾವ ಆಧಾರದ ಮೇಲೆ ಅನ್ವಯಿಸುತ್ತದೆ ಅದು ಹೇಗಾದರೂ ಇರಲಿ ನೀವು ಅದನ್ನು ತಿಳಿದಿರಲೇಬೇಕು, ನಿಮ್ಮ ಡೇಟಾವನ್ನು ಪ್ರವೇಶಿಸಲು, ತಿದ್ದುಪಡಿ ಮಾಡಲು ಮತ್ತು ಅಳಿಸುವಿಕೆಯನ್ನು ವಿನಂತಿಸಲು ಯಾವಾಗಲೂ ಹಕ್ಕನ್ನು ಹೊಂದಿರುತ್ತೀರಿ. ನಿಮ್ಮ ಹಕ್ಕುಗಳನ್ನು ಚಲಾಯಿಸಲು, ಕೆಳಗಿನ "ನಿಮ್ಮ ಹಕ್ಕುಗಳನ್ನು ನೀವು ಹೇಗೆ ಚಲಾಯಿಸುತ್ತೀರಿ" ವಿಭಾಗವನ್ನು ನೋಡಿ.
"ನಾವು ಸಂಗ್ರಹಿಸುವ ಮಾಹಿತಿ" ವಿಭಾಗದಲ್ಲಿ ವಿವರಿಸಿದ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ, ಬಳಸುತ್ತೇವೆ ಮತ್ತು ಹಂಚಿಕೊಳ್ಳುತ್ತೇವೆ:
- ನಮ್ಮ ನಿಯಮಗಳ "ನಮ್ಮ ಸೇವೆಗಳು" ವಿಭಾಗದಲ್ಲಿ ವಿವರಿಸಲಾದ ಸಂದೇಶ ಮತ್ತು ಸಂವಹನ ಸೇವೆಗಳನ್ನು ನಿರ್ವಹಿಸಲು ಮತ್ತು ಒದಗಿಸಲು ಅಗತ್ಯವಿದೆ. ಇಲ್ಲಿ ಇನ್ನಷ್ಟು ತಿಳಿಯಿರಿ;
- ನಿಮ್ಮ ಒಪ್ಪಿಗೆಯನ್ನು ನೀವು ನೀಡಿದ್ದರೆ, ನೀವು ಯಾವ ಸಮಯದಲ್ಲಾದರೂ ಹಿಂತೆಗೆದುಕೊಳ್ಳಬಹುದು (ಅನ್ವಯವಾಗುವಂತೆ ಕಾನೂನುಬದ್ಧವಾಗಿ ಸಮ್ಮತಿ ಅಗತ್ಯವಿರುವ ಸ್ಥಳ ಸೇರಿದಂತೆ). ಇಲ್ಲಿ ಇನ್ನಷ್ಟು ತಿಳಿಯಿರಿ;
- ಕಾನೂನು ಜಾರಿಗೊಳಿಸುವಿಕೆಯಿಂದ ಕಾನೂನು ವಿನಂತಿಯನ್ನು ನಾವು ಪ್ರತಿಕ್ರಿಯೆಗೊಳಿಸಬೇಕಾದಾಗ ಕಾನೂನುಬದ್ಧ ಕಟ್ಟುಪಾಡುಗಳನ್ನು ಅನುಸರಿಸಲು ಮಾಹಿತಿಯ ಪೂರೈಕೆ ಅಗತ್ಯವಾಗಿರುತ್ತದೆ. ಇಲ್ಲಿ ಇನ್ನಷ್ಟು ತಿಳಿಯಿರಿ;
- ಯಾವಾಗ ಬೇಕಾದರೂ ಮತ್ತು ಅಗತ್ಯವಿದ್ದಾಗ, ನಿಮ್ಮ ಪ್ರಮುಖ ಹಿತಾಸಕ್ತಿಗಳನ್ನು ರಕ್ಷಿಸಲು ಅಥವಾ ನಿಮ್ಮ ಜೀವಕ್ಕೆ ಅಥವಾ ಬೇರೊಬ್ಬರಿಗೆ ಅಪಾಯವಿರುವ ತುರ್ತು ಪರಿಸ್ಥಿತಿಯಂತಹ ಇತರರ ಹಿತಾಸಕ್ತಿಗಳನ್ನು ರಕ್ಷಿಸಲು ಮಾಹಿತಿಯ ಅಗತ್ಯವಿದೆ. ಇಲ್ಲಿ ಇನ್ನಷ್ಟು ತಿಳಿಯಿರಿ;
- ನಿಮ್ಮ ಆಸಕ್ತಿಗಳು ಅಥವಾ ಮೂಲಭೂತ ಹಕ್ಕುಗಳು ಮತ್ತು ವೈಯಕ್ತಿಕ ಡೇಟಾದ ರಕ್ಷಣೆಗೆ ಅಗತ್ಯವಿರುವ ಸ್ವಾತಂತ್ರ್ಯಗಳ ಮೂಲಕ ಅಂತಹ ಆಸಕ್ತಿಗಳನ್ನು ಅತಿಕ್ರಮಿಸದ ಹೊರತು, ನಮ್ಮ ಬಳಕೆದಾರರಿಗೆ ಮತ್ತು ಪಾಲುದಾರರಿಗೆ ನವೀನ, ಸಂಬಂಧಿತ, ಸುರಕ್ಷಿತ ಮತ್ತು ಲಾಭದಾಯಕ ಸೇವೆಯನ್ನು ಒದಗಿಸುವಲ್ಲಿನ ನಮ್ಮ ಆಸಕ್ತಿಗಳು ಸೇರಿದಂತೆ, ನಮ್ಮ (ಅಥವಾ ಇತರರ) ಕಾನೂನುಬದ್ಧ ಆಸಕ್ತಿಗಳ ಅಗತ್ಯವಿದೆ. ಉದಾ: ನಮ್ಮ ಸೇವೆಗಳನ್ನು ಹಾನಿಕಾರಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಳಸುವುದನ್ನು ತಡೆಯಲು. ಇಲ್ಲಿ ಇನ್ನಷ್ಟು ತಿಳಿಯಿರಿ;
- ಎಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸುವ ಅಗತ್ಯವಿದೆಯೋ ಅಲ್ಲಿ. ಇಲ್ಲಿ ಇನ್ನಷ್ಟು ತಿಳಿಯಿರಿ.
ನಿಮ್ಮ ಡೇಟಾವನ್ನು ನಾವು ಪ್ರಕ್ರಿಯೆಗೊಳಿಸುವ ವಿಧಾನಗಳು ಮತ್ತು ಉದ್ದೇಶಗಳು ಮತ್ತು ಹಾಗೆ ಮಾಡಲು ನಮ್ಮ ಕಾನೂನು ನೆಲೆಗಳ ಬಗ್ಗೆ ನೀವು ಇಲ್ಲಿ ಇನ್ನಷ್ಟು ಕಲಿಯಬಹುದು.
ಮೇಲಕ್ಕೆ ಹಿಂದಿರುಗಿ
ನಿಮ್ಮ ಮಾಹಿತಿಯನ್ನು ನಾವು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ
ನಿಯಮಗಳಿಗೆ ಅನುಗುಣವಾಗಿ ಸೇವೆಗಳನ್ನು ಒದಗಿಸುವುದು
ನಿಮ್ಮ ಕುರಿತು ನಾವು ಹೊಂದಿರುವ ಡೇಟಾವನ್ನು ("ನಾವು ಸಂಗ್ರಹಿಸುವ ಮಾಹಿತಿ" ವಿಭಾಗದಲ್ಲಿ ವಿವರಿಸಿದಂತೆ) ನಿಮ್ಮೊಂದಿಗೆ ಇರುವ ನಮ್ಮ ಒಪ್ಪಂದವನ್ನು (ನಿಯಮಗಳು) ನಿರ್ವಹಿಸಲು ಅಗತ್ಯವಿರುವಂತೆ ನಾವು ಪ್ರಕ್ರಿಯೆಗೊಳಿಸುತ್ತೇವೆ. ನಾವು ಪ್ರಕ್ರಿಯೆಗೊಳಿಸುವ ಡೇಟಾದ ವರ್ಗಗಳು ನೀವು ಒದಗಿಸಲು ಆಯ್ಕೆ ಮಾಡಿದ ಡೇಟಾ ಮತ್ತು ನಮ್ಮ ಸೇವೆಗಳನ್ನು ನೀವು ಬಳಸುವ ವಿಧಾನವನ್ನು ಅವಲಂಬಿಸಿರುತ್ತದೆ (ಇದು ನಾವು ಸಂಗ್ರಹಿಸಿದ ಮಾಹಿತಿಯನ್ನು ಸ್ವಯಂಚಾಲಿತವಾಗಿ ನಿರ್ಧರಿಸುತ್ತದೆ). ನಮ್ಮ ಒಪ್ಪಂದದ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಪ್ರಕಿಯೆಗೊಳಿಸುವಿಕೆ ಉದ್ದೇಶಗಳು:
ನಿಮ್ಮ ಡೇಟಾವನ್ನು ನಾವು ಏಕೆ ಮತ್ತು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ:
- ನಮ್ಮ ನಿಯಮಗಳ "ನಮ್ಮ ಸೇವೆಗಳು" ವಿಭಾಗದಲ್ಲಿ ವಿವರಿಸಿದಂತೆ ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಕಸ್ಟಮೈಸ್ ಮಾಡಲು ಮತ್ತು ಬೆಂಬಲಿಸಲು ವ್ಯವಹಾರಗಳು ಸೇರಿದಂತೆ ಇತರ WhatsApp ಬಳಕೆದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಸಂವಹನ ಮಾಡಲು ನಿಮಗೆ ಮಾರ್ಗಗಳನ್ನು ಒದಗಿಸಲಾಗುತ್ತದೆ. WhatsApp ಖಾತೆಯನ್ನು ರಚಿಸಲು ನಿಮ್ಮಿಂದ ಮಾಹಿತಿಯನ್ನು ಸಂಗ್ರಹಿಸುವುದು, WhatsApp ಮೂಲಕ ತಲುಪಬಹುದಾದ ವ್ಯವಹಾರಗಳೊಂದಿಗೆ ನಿಮ್ಮನ್ನು ಸಂಪರ್ಕಿಸುವುದು, ನಮ್ಮ ಸೇವೆಗಳನ್ನು ನೀವು ಬಳಸುವ ರೀತಿಯನ್ನು ವಿಶ್ಲೇಷಿಸುವುದು, ಸಮಸ್ಯೆಗೆ ಪ್ರತಿಕ್ರಿಯೆಯಾಗಿ ಗ್ರಾಹಕರ ಬೆಂಬಲವನ್ನು ಒದಗಿಸುವುದು ಅಥವಾ ನಿಮ್ಮ ಖಾತೆಯನ್ನು ಮುಚ್ಚಲು ನೀವು ಆಯ್ಕೆಮಾಡಿದರೆ ನಿಮ್ಮ ಡೇಟಾವನ್ನು ಅಳಿಸುವುದು ಇದರಲ್ಲಿ ಒಳಗೊಂಡಿದೆ.
- ಸಂವಹನದ ಪ್ರಸಾರಕ್ಕಾಗಿ ನಾವು ಮೆಸೇಜಿಂಗ್ ಮೆಟಾಡೇಟಾವನ್ನು ಬಳಸುತ್ತೇವೆ; ಸಾಮಾನ್ಯ ಸಂಚಾರ ನಿರ್ವಹಣೆ ಮತ್ತು ವೈಫಲ್ಯಗಳ ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ಪರಿಹಾರ ಸೇರಿದಂತೆ ಸೇವೆಗಳ ಕಾರ್ಯಾಚರಣೆಗೆ ಬಳಸುತ್ತೇವೆ; ಮತ್ತು ಅನ್ವಯವಾಗುವಲ್ಲಿ ಬಿಲ್ಲಿಂಗ್‌ಗಾಗಿ ನಾವು ಬಳಸಿಕೊಳ್ಳುತ್ತೇವೆ.
- ಅನೇಕ ಖಾತೆಗಳನ್ನು ಬಳಸುವ ಸ್ಪ್ಯಾಮರ್‌ಗಳ ಮೇಲೆ ಕ್ರಮ ತೆಗೆದುಕೊಳ್ಳುವ ಮೂಲಕ ನಮ್ಮ ಸೇವೆಗಳ ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು. ನಮ್ಮ ಸೇವೆಗಳನ್ನು ಕಾನೂನುಬಾಹಿರವಾಗಿ ಬಳಸದಂತೆ ತಡೆಯಲು ನೀವು ಖಾತೆಯನ್ನು ರಚಿಸಿದಾಗ ಅಥವಾ ನಿಮ್ಮ ಖಾತೆಗೆ ಸಂಬಂಧಿಸಿದಂತೆ ಅನುಮಾನಾಸ್ಪದ ಚಟುವಟಿಕೆಯನ್ನು ವಿಶ್ಲೇಷಿಸುವಾಗ ನೀವು ಒದಗಿಸಿದ ಮಾಹಿತಿಯನ್ನು ಪರಿಶೀಲಿಸುವುದು ಇದರಲ್ಲಿ ಒಳಗೊಂಡಿರಬಹುದು.
- ನಮ್ಮ ಸೇವೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಮೆಸೇಜಿಂಗ್ ಮೆಟಾಡೇಟಾವನ್ನು ಬಳಸುತ್ತೇವೆ, ಅದರಲ್ಲಿ ಅವುಗಳ ಲಭ್ಯತೆ, ಸತ್ಯಾಸತ್ಯತೆ, ಸಮಗ್ರತೆ ಮತ್ತು ಗೌಪ್ಯತೆ ಮತ್ತು ನಿರ್ದಿಷ್ಟವಾಗಿ ಸುರಕ್ಷತಾ ಘಟನೆಗಳು, ದುರ್ಬಲತೆಗಳು, ಮಾಲ್‌ವೇರ್ ಮತ್ತು ಋಣಾತ್ಮಕ ಪರಿಣಾಮ ಬೀರುವ ಅಂಶಗಳ ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ಪರಿಹಾರವನ್ನು ಒಳಗೊಂಡಿದೆ, ಅಂದರೆ ಸ್ಪ್ಯಾಮ್‌ನಂತಹ ನಮ್ಮ ಸೇವೆಗಳ ಲಭ್ಯತೆ ಅಥವಾ ಸೇವೆಗಳು ಅಥವಾ ಬಳಕೆದಾರ ಸಾಧನಗಳಿಗೆ ಅನಧಿಕೃತ ಪ್ರವೇಶ ಅಥವಾ ಬಳಕೆ ಸಕ್ರಿಯಗೊಳಿಸುವುದನ್ನು ಒಳಗೊಂಡಿದೆ. ಇನ್ನಷ್ಟು ತಿಳಿಯಲು, WhatsApp ಸುರಕ್ಷತೆ ಪುಟಕ್ಕೆ ಭೇಟಿ ನೀಡಿ.
- "ನಮ್ಮ ಜಾಗತಿಕ ಕಾರ್ಯಾಚರಣೆಗಳು" ಅಡಿಯಲ್ಲಿ ವಿವರಿಸಿದಂತೆ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳು ಅಥವಾ ಪ್ರಾಂತ್ಯಗಳು ಸೇರಿದಂತೆ ಮೂರನೇ ದೇಶಗಳಲ್ಲಿ ನಿಮ್ಮ ಡೇಟಾವನ್ನು ವರ್ಗಾಯಿಸಲು, ರವಾನಿಸಲು, ಸಂಗ್ರಹಿಸಲು ಅಥವಾ ಪ್ರಕ್ರಿಯೆಗೊಳಿಸಲು.
- ಸೇವೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಿಮ್ಮೊಂದಿಗೆ ಸಂವಹನ ನಡೆಸಲು, ನವೀಕರಣದ ಕುರಿತು ಅಧಿಸೂಚನೆಯನ್ನು ನಿಮಗೆ ಕಳುಹಿಸುವುದು ಅಥವಾ ನೀವು ನಮ್ಮನ್ನು ಸಂಪರ್ಕಿಸಿದಾಗ ನಿಮಗೆ ಪ್ರತಿಕ್ರಿಯೆ ನೀಡಲು.
- ಬಳಸಿದ ಡೇಟಾ ವರ್ಗಗಳು: ನಾವು ಈ ಉದ್ದೇಶಕ್ಕಾಗಿ ಈ ಗೌಪ್ಯತೆ ನೀತಿಯ "ನೀವು ಒದಗಿಸುವ ಮಾಹಿತಿ" ವಿಭಾಗದಲ್ಲಿ ವಿವರಿಸಿದ ಮಾಹಿತಿಯನ್ನು ಬಳಸುತ್ತೇವೆ.
ಈ ರೀತಿಯ ಪ್ರತಿಯೊಂದು ಉದ್ದೇಶಗಳನ್ನು "ನಾವು ಮಾಹಿತಿಯನ್ನು ಹೇಗೆ ಬಳಸುತ್ತೇವೆ" ಮತ್ತು "ನಮ್ಮ ಜಾಗತಿಕ ಕಾರ್ಯಾಚರಣೆಗಳು" ವಿಭಾಗದ ಅಡಿಯಲ್ಲಿ ವಿವರವಾಗಿ ವಿವರಿಸಲಾಗಿದೆ. ನಾವು GDPR ಅಡಿಯಲ್ಲಿ ನಿಮ್ಮೊಂದಿಗೆ ಇರುವ ನಮ್ಮ ಒಪ್ಪಂದದ ಸಂಬಂಧವನ್ನು ನಿರ್ವಹಿಸಲು ಅಗತ್ಯವಿರುವ ನೀವು ನಮಗೆ ಒದಗಿಸಿರುವ ಡೇಟಾವನ್ನು ಪ್ರಕ್ರಿಯೆಗೊಳಿಸಿದಾಗ ನಿಮ್ಮ ಡೇಟಾವನ್ನು ಪೋರ್ಟ್ ಮಾಡುವ ಹಕ್ಕನ್ನು ನೀವು ಹೊಂದಿರುತ್ತೀರಿ. ನಿಮ್ಮ ಹಕ್ಕುಗಳನ್ನು ಚಲಾಯಿಸಲು, ಗೌಪ್ಯತೆ ನೀತಿಯ ವಿಭಾಗದ "ನಿಮ್ಮ ಹಕ್ಕುಗಳನ್ನು ನೀವು ಹೇಗೆ ಚಲಾಯಿಸುತ್ತೀರಿ" ಎಂಬ ವಿಭಾಗಕ್ಕೆ ಭೇಟಿ ನೀಡಿ.
ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸುವಾಗ ಕೆಲವು ನಿದರ್ಶನಗಳಲ್ಲಿ ನಾವು ಅವಲಂಬಿಸಿರುವ ಇತರ ಕಾನೂನು ಆಧಾರಗಳನ್ನು ಕೆಳಗೆ ನೀಡಲಾಗಿದೆ:
ನಿಮ್ಮ ಸಮ್ಮತಿ
ನೀವು ಹಾಗೆ ಮಾಡಲು ನಿಮ್ಮ ಒಪ್ಪಿಗೆಯನ್ನು ನಮಗೆ ನೀಡಿದಾಗ ಕೆಳಗೆ ವಿವರಿಸಿದ ಉದ್ದೇಶಗಳಿಗಾಗಿ ನಾವು ಡೇಟಾವನ್ನು ಪ್ರಕ್ರಿಯೆಗೊಳಿಸುತ್ತೇವೆ. ನಾವು ನಿಮ್ಮ ಒಪ್ಪಿಗೆಯ ಮೇಲೆ ಆಧಾರವಾಗಿರುತ್ತೇವೆ:
ನಿಮ್ಮ ಡೇಟಾವನ್ನು ನಾವು ಏಕೆ ಮತ್ತು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ:
ಮಾಹಿತಿಯನ್ನು ಸಂಗ್ರಹಿಸಲು ಮತ್ತು ಬಳಸಲು ನೀವು ಸಕ್ರಿಯಗೊಳಿಸಿದ ಸಾಧನ ಆಧಾರಿತ ಸೆಟ್ಟಿಂಗ್‌ಗಳ ಮೂಲಕ ಸ್ವೀಕರಿಸಲು ನೀವು ಅನುಮತಿಸುತ್ತೀರಿ (ಉದಾಹರಣೆಗೆ ನಿಮ್ಮ ಸ್ಥಳ, ಕ್ಯಾಮರಾ ಅಥವಾ ಫೋಟೋಗಳಿಗೆ ಪ್ರವೇಶ), ಇದರಿಂದ ನೀವು ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿದಾಗ ವಿವರಿಸಿದ ಸೇವೆಗಳನ್ನು ನಾವು ಒದಗಿಸಬಹುದು; ಉದಾಹರಣೆಗೆ, ನಿಮ್ಮ ಸಂಪರ್ಕದೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ಅಥವಾ ನಿಮ್ಮ ಕ್ಯಾಮರಾ ಅಥವಾ ಫೋಟೋ ಗ್ಯಾಲರಿಗೆ ಪ್ರವೇಶಿಸಲು ನಮ್ಮ ಸ್ಥಳ ವೈಶಿಷ್ಟ್ಯಗಳನ್ನು ನೀವು ಬಳಸುತ್ತಿದ್ದರೆ ನಿಮ್ಮ ಸಂಪರ್ಕಗಳೊಂದಿಗೆ ಫೋಟೋಗ್ರಾಫ್‌ಗಳು ಅಥವಾ ಮಾಧ್ಯಮವನ್ನು ಹಂಚಿಕೊಳ್ಳಲು ನೀವು ಆಯ್ಕೆಮಾಡಿದರೆ ನಿಮ್ಮ ಸಾಧನದ ನಿಖರವಾದ ಸ್ಥಳ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.
- ಬಳಸಿದ ಡೇಟಾ ವರ್ಗಗಳು: ಈ ಉದ್ದೇಶಕ್ಕಾಗಿ ನಾವು ಸಾಧನ ಮಾಹಿತಿಯನ್ನು (ಸಾಧನದಿಂದ ಡೇಟಾ ಉದಾಹರಣೆಗೆ ನಿಮ್ಮ ಸ್ಥಳ, ಫೋಟೋಗಳು ಮತ್ತು ಮಾಧ್ಯಮ) ಬಳಸುತ್ತೇವೆ.
ನಿಮ್ಮ ಸಮ್ಮತಿಯ ಆಧಾರದ ಮೇಲೆ ನಾವು ಡೇಟಾವನ್ನು ಪ್ರಕ್ರಿಯೆಗೊಳಿಸಿದಾಗ ಸಮ್ಮತಿಯನ್ನು ಹಿಂಪಡೆಯುವ ಮೊದಲು ಅಂತಹ ಸಮ್ಮತಿಯ ಆಧಾರದ ಮೇಲೆ ಪ್ರಕ್ರಿಯೆಯ ಕಾನೂನುಬದ್ಧತೆಯ ಮೇಲೆ ಯಾವುದೇ ಪರಿಣಾಮ ಬೀರದೆ ನಿಮ್ಮ ಸಮ್ಮತಿಯನ್ನು ಹಿಂಪಡೆಯುವ ಹಕ್ಕನ್ನು ನೀವು ಹೊಂದಿರುತ್ತೀರಿ. ನೀವು ನಮಗೆ ಒದಗಿಸುವ ಮತ್ತು ನಿಮ್ಮ ಸಮ್ಮತಿಯ ಆಧಾರದ ಮೇಲೆ ನಾವು ಪ್ರಕ್ರಿಯೆಗೊಳಿಸಬಹುದಾದ ಡೇಟಾವನ್ನು ಪೋರ್ಟ್ ಮಾಡುವ ಹಕ್ಕನ್ನು ಸಹ ನೀವು ಹೊಂದಿರುತ್ತೀರಿ. ನಿಮ್ಮ ಹಕ್ಕುಗಳನ್ನು ಚಲಾಯಿಸಲು, ನಿಮ್ಮ ಸಾಧನ-ಆಧಾರಿತ ಸೆಟ್ಟಿಂಗ್‌ಗಳು ನಿಮ್ಮ ಅಪ್ಲಿಕೇಶನ್ ಸ್ಥಳ ನಿಯಂತ್ರಣದಂತಹ ನಿಮ್ಮ ಅಪ್ಲಿಕೇಶನ್-ಆಧಾರಿತ ಸೆಟ್ಟಿಂಗ್‌ಗಳು ಮತ್ತು ಈ ಗೌಪ್ಯತೆ ನೀತಿಯ "ನಿಮ್ಮ ಹಕ್ಕುಗಳನ್ನು ನೀವು ಹೇಗೆ ಚಲಾಯಿಸುತ್ತೀರಿ" ಎಂಬ ವಿಭಾಗಕ್ಕೆ ಭೇಟಿ ನೀಡಿ.
ಕಾನೂನು ನಿಬಂಧನೆಗಳೊಂದಿಗೆ ಅನುಸರಣೆ
ನಿಮ್ಮ ಡೇಟಾವನ್ನು ನಾವು ಏಕೆ ಮತ್ತು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ:
ನಿಮ್ಮ ಹೆಸರು, ಪ್ರೊಫೈಲ್ ಚಿತ್ರ ಅಥವಾ IP ವಿಳಾಸದಂತಹ ತನಿಖೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಲು ಕಾನೂನು ಜಾರಿ ಮಾಡಲಾದ ಆದೇಶದಂತಹ ಕೆಲವು ಮಾಹಿತಿಗೆ ಮಾನ್ಯ ಕಾನೂನುಗಳ ಪ್ರಕಾರ ವಿನಾಯಿತಿಯಿದ್ದರೆ, ಉದಾಹರಣೆಗೆ ನಾವು ಕಾನೂನು ಬಾಧ್ಯತೆಯನ್ನು ಅನುಸರಿಸುವಾಗ ಮಾಹಿತಿಯನ್ನು ಪ್ರಕ್ರಿಯೆಗೊಳಿಸಲು ಮಾನ್ಯವಾದ ಕಾನೂನು ವಿನಂತಿ. ನಾವು ಕಾನೂನು ಬಾಧ್ಯತೆಯ ಅನುಗುಣವಾಗಿ ಡೇಟಾವನ್ನು ಬಹಿರಂಗಪಡಿಸುತ್ತೇವೆ.
ನಿಮ್ಮ ಅಥವಾ ಇನ್ನೊಬ್ಬ ವ್ಯಕ್ತಿಯ ಪ್ರಮುಖ ಆಸಕ್ತಿಗಳ ರಕ್ಷಣೆ
ನಿಮ್ಮ ಡೇಟಾವನ್ನು ನಾವು ಏಕೆ ಮತ್ತು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ:
ನಿಮ್ಮ ಪ್ರಮುಖ ಆಸಕ್ತಿಗಳನ್ನು ಅಥವಾ ಇನ್ನೊಬ್ಬ ವ್ಯಕ್ತಿಯ ಹಿತಾಸಕ್ತಿಗಳನ್ನು ರಕ್ಷಿಸಲು ಡೇಟಾವನ್ನು ಪ್ರಕ್ರಿಯೆಗೊಳಿಸಲು ಮಾಹಿತಿಯನ್ನು ಬಳಸುತ್ತೇವೆ. ನಾವು ಅವಲಂಬಿಸುವ ಈ ಪ್ರಕ್ರಿಯೆಯ ಪ್ರಮುಖ ಆಸಕ್ತಿಗಳು ನಿಮ್ಮ ಜೀವನದ ರಕ್ಷಣೆ ಅಥವಾ ದೈಹಿಕ ಸಮಗ್ರತೆ ಅಥವಾ ಇತರೆಯನ್ನು ಒಳಗೊಂಡಿರುತ್ತವೆ ಮತ್ತು ಹಾನಿಕಾರಕ ನಡವಳಿಕೆಯನ್ನು ತಡೆಯಲು ಮತ್ತು ಸುರಕ್ಷತೆ ಮತ್ತು ಭದ್ರತೆಯನ್ನು ಪ್ರಚಾರ ಮಾಡಲು ನಾವು ಅದನ್ನು ಅವಲಂಬಿಸಿರುತ್ತೇವೆ, ಉದಾಹರಣೆಗೆ, ಹಾನಿಕಾರಕ ನಡವಳಿಕೆಯ ವರದಿಗಳನ್ನು ನಾವು ತನಿಖೆ ಮಾಡುತ್ತಿರುವಾಗ ಅಥವಾ ಯಾರಿಗಾದರೂ ಸಹಾಯ ಅಗತ್ಯವಿರುವಾಗ ಈ ಮಾಹಿತಿಯನ್ನು ಅವಲಂಬಿಸುತ್ತೇವೆ. ಇದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾನೂನು ಜಾರಿಗೊಳಿಸುವಿಕೆಯ ಡೇಟಾವನ್ನು ಒದಗಿಸುವ ಮೂಲಕ ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆಯ ಪ್ರಚಾರವನ್ನು ಒಳಗೊಂಡಿರಬಹುದು ಅದನ್ನು ಅಲ್ಲಿ ವಿನಂತಿಸಲಾಗಿದೆ ಮತ್ತು ವ್ಯಕ್ತಿಯ ಜೀವ ಅಥವಾ ಸುರಕ್ಷತೆಯನ್ನು ರಕ್ಷಿಸಲು ಇದು ಅಗತ್ಯವಾಗಿರುತ್ತದೆ ಉದಾಹರಣೆಗೆ ಹಾನಿಕಾರಕ ನಡವಳಿಕೆಯ ಅಪಾಯವಿದೆ ಎನಿಸಿದರೆ, ಆಕ್ರಮಣ ಅಥವಾ ವ್ಯಕ್ತಿಯ ಸುರಕ್ಷತೆಗೆ ಅಪಾಯವಿರುವಾಗ.
ಕಾನೂನುಬದ್ಧ ಹಿತಾಸಕ್ತಿಗಳು
ನಮ್ಮ ಕಾನೂನುಬದ್ಧ ಆಸಕ್ತಿಗಳು ಅಥವಾ ಮೂರನೇ ವ್ಯಕ್ತಿಯ ಕಾನೂನುಬದ್ಧ ಆಸಕ್ತಿಗಳನ್ನು ನಿಮ್ಮ ಆಸಕ್ತಿಗಳಿಂದ ಅಥವಾ ಮೂಲಭೂತ ಹಕ್ಕುಗಳಿಂದ ಮತ್ತು ಸ್ವಾತಂತ್ರ್ಯಗಳಿಂದ ಮೀರಿಸಲಾಗಿರುವುದಿಲ್ಲ: ಹಾಗೂ ನಾವು ಅದರ ಮೇಲೆ ಆಧಾರವಾಗಿರುತ್ತೇವೆ.
ನಿಮ್ಮ ಡೇಟಾವನ್ನು ನಾವು ಏಕೆ ಮತ್ತು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ:
ನಾವು ನಿಯಂತ್ರಕದಂತೆ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತಿರುವಲ್ಲಿ ಮಾಪನ, ವಿಶ್ಲೇಷಣೆ ಮತ್ತು ಇತರ ವ್ಯಾಪಾರ ಸೇವೆಗಳನ್ನು ಒದಗಿಸುವುದಕ್ಕಾಗಿ ವರ್ತಿಸುತ್ತೇವೆ.
- ಆಧಾರವಾಗಿರುವಂತಹ ಕಾನೂನುಬದ್ಧ ಹಿತಾಸಕ್ತಿಗಳು:
- ವ್ಯವಹಾರಗಳು ಮತ್ತು ಇತರ ಪಾಲುದಾರರಿಗೆ ನಿಖರವಾದ ಮತ್ತು ವಿಶ್ವಾಸಾರ್ಹ ಒಟ್ಟುಗೂಡಿಸಿದ ವರದಿಯನ್ನು ಒದಗಿಸಲು ನಿಖರವಾದ ಬೆಲೆ ಮತ್ತು ಕಾರ್ಯಕ್ಷಮತೆಯ ಅಂಕಿಅಂಶಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ಸೇವೆಗಳನ್ನು ಬಳಸಿಕೊಂಡು ನಮ್ಮ ಪಾಲುದಾರರು ತಿಳಿದಿರುವ ಮೌಲ್ಯವನ್ನು ಪ್ರದರ್ಶಿಸಲು; ಮತ್ತು
- ವ್ಯವಹಾರಗಳು ಮತ್ತು ಇತರ ಪಾಲುದಾರರ ಹಿತಾಸಕ್ತಿಗಳಲ್ಲಿ ಅವರ ಗ್ರಾಹಕರನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ವ್ಯವಹಾರಗಳನ್ನು ಸುಧಾರಿಸಲು ಮತ್ತು ನಮ್ಮ ಬೆಲೆ ಮಾದರಿಗಳನ್ನು ಮೌಲ್ಯೀಕರಿಸಲು ಮತ್ತು ಅವರ ಸೇವೆಗಳು ಮತ್ತು ಸಂದೇಶಗಳ ಪರಿಣಾಮಕಾರಿತ್ವ ಮತ್ತು ವಿತರಣೆಯನ್ನು ಮೌಲ್ಯಮಾಪನ ಮಾಡಲು ಮತ್ತು ನಮ್ಮ ಸೇವೆಗಳಲ್ಲಿ ಜನರು ಅವರೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
- ಬಳಸಿದ ಡೇಟಾ ವರ್ಗಗಳು: ನಾವು ಈ ಉದ್ದೇಶಕ್ಕಾಗಿ ಈ ಗೌಪ್ಯತೆ ನೀತಿಯ "ನೀವು ಒದಗಿಸುವ ಮಾಹಿತಿ," "ಸ್ವಯಂಚಾಲಿತವಾಗಿ ಸಂಗ್ರಹಿಸಲಾದ ಮಾಹಿತಿ," ಮತ್ತು "ಮೂರನೇ-ವ್ಯಕ್ತಿಯ ಮಾಹಿತಿ" ವಿಭಾಗಗಳಲ್ಲಿ ವಿವರಿಸಲಾದ ಮಾಹಿತಿಯನ್ನು ಬಳಸುತ್ತೇವೆ.
ನಿಮಗೆ ಮಾರ್ಕೆಟಿಂಗ್ ಸಂವಹನಗಳನ್ನು ಒದಗಿಸುವುದಕ್ಕಾಗಿ.
ಕಾನೂನು ಜಾರಿಗೊಳಿಸುವಿಕೆ ಸೇರಿದಂತೆ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಕಾನೂನು ವಿನಂತಿಗಳಿಗೆ ಪ್ರತಿಕ್ರಿಯಿಸಲು. ಹೆಚ್ಚಿನ ಮಾಹಿತಿಗಾಗಿ ನಮ್ಮ ಕಾನೂನು, ನಮ್ಮ ಹಕ್ಕುಗಳು ಮತ್ತು ರಕ್ಷಣೆ ಅಡಿಯಲ್ಲಿ ಬರುವ ನಮ್ಮ ಗೌಪ್ಯತೆ ನೀತಿಯನ್ನು ನೋಡಿ.
- ಆಧಾರವಾಗಿರುವಂತಹ ಕಾನೂನುಬದ್ಧ ಹಿತಾಸಕ್ತಿಗಳು:
- ವಂಚನೆಯನ್ನು ತಡೆಗಟ್ಟಲು ಮತ್ತು ಪರಿಹರಿಸಲು, Facebook ಕಂಪನಿ ಉತ್ಪನ್ನಗಳು ಅನಧಿಕೃತ ಬಳಕೆ, ನಮ್ಮ ನಿಯಮಗಳು ಮತ್ತು ನೀತಿಗಳ ಉಲ್ಲಂಘನೆ ಅಥವಾ ಇತರ ಹಾನಿಕಾರಕ ಅಥವಾ ಕಾನೂನುಬಾಹಿರ ಚಟುವಟಿಕೆ ತಡೆಯಲು ಬಳಸುತ್ತೇವೆ.
- ನಮ್ಮನ್ನು ರಕ್ಷಿಸಿಕೊಳ್ಳಲು (ನಮ್ಮ ಹಕ್ಕುಗಳು, ಆಸ್ತಿ ಅಥವಾ ಉತ್ಪನ್ನಗಳನ್ನು ಒಳಗೊಂಡಂತೆ), ನಮ್ಮ ಬಳಕೆದಾರರು ಅಥವಾ ಇತರರು, ತನಿಖೆ ಅಥವಾ ನಿಯಂತ್ರಕ ವಿಚಾರಣೆಯ ಭಾಗವಾಗಿ ಸೇರಿದಂತೆ; ಅಥವಾ ಸಾವು ಅಥವಾ ಸನ್ನಿಹಿತ ದೈಹಿಕ ಹಾನಿಯನ್ನು ತಡೆಯಲು ಮಾಹಿತಿಯ ಉಪಯೋಗವನ್ನು ಮಾಡುತ್ತೇವೆ.
- ಬಳಸಿದ ಡೇಟಾ ವರ್ಗಗಳು: ನಾವು ಈ ಉದ್ದೇಶಕ್ಕಾಗಿ ಈ ಗೌಪ್ಯತೆ ನೀತಿಯು "ನೀವು ಒದಗಿಸುವ ಮಾಹಿತಿ," "ಸ್ವಯಂಚಾಲಿತವಾಗಿ ಸಂಗ್ರಹಿಸಲಾದ ಮಾಹಿತಿ," ಮತ್ತು "ಮೂರನೇ-ವ್ಯಕ್ತಿಯ ಮಾಹಿತಿ" ವಿಭಾಗಗಳಲ್ಲಿ ವಿವರಿಸಿದ ಮಾಹಿತಿಯನ್ನು ಬಳಸುತ್ತೇವೆ.
ಸುರಕ್ಷತೆ ಮತ್ತು ಸುಭದ್ರತೆ ಮತ್ತು ಸಮಗ್ರತೆಯನ್ನು ಉತ್ತೇಜಿಸಲು Facebook ಕಂಪನಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು. ಹೆಚ್ಚಿನ ಮಾಹಿತಿಗಾಗಿ "ನಾವು ಇತರ Facebook ಕಂಪನಿಗಳೊಂದಿಗೆ ಹೇಗೆ ಕೆಲಸ ಮಾಡುತ್ತೇವೆ" ಎಂಬುದನ್ನು ಸಹ ನೋಡಿ.
ಇಂತಹ ಪ್ರಕ್ರಿಯೆಗೊಳಿಸುವಿಕೆಯ ಕುರಿತು ಅಕ್ಷೇಪಣೆ ಮತ್ತು ನಿರ್ಬಂಧವನ್ನು ಕೇಳಲು ನೀವು ಹಕ್ಕನ್ನು ಹೊಂದಿರುತ್ತೀರಿ; "ನಿಮ್ಮ ಹಕ್ಕುಗಳನ್ನು ಹೇಗೆ ಚಲಾಯಿಸಬಹುದು ಎಂಬುದನ್ನು ತಿಳಿದುಕೊಳ್ಳಲು", ಗೌಪ್ಯತೆ ನೀತಿಯ ವಿಭಾಗಕ್ಕೆ ಭೇಟಿ ನೀಡಿ.
ಸಾರ್ವಜನಿಕ ಹಿತಾಸಕ್ತಿಯಿಂದ ಕಾರ್ಯಗಳನ್ನು ನಿರ್ವಹಿಸಲಾಗಿದೆ
ನಿಮ್ಮ ಡೇಟಾವನ್ನು ನಾವು ಏಕೆ ಮತ್ತು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ:
"ನಾವು ಮಾಹಿತಿಯನ್ನು ಹೇಗೆ ಬಳಸುತ್ತೇವೆ" ವಿಭಾಗದ ಅಡಿಯಲ್ಲಿ ಹೆಚ್ಚು ವಿವರವಾಗಿ ವಿವರಿಸಿದಂತೆ ಸಂಶೋಧನೆ ಕೈಗೊಳ್ಳಲು ಮತ್ತು ಸುರಕ್ಷತೆ, ಸುಭದ್ರತೆ ಮತ್ತು ಸಮಗ್ರತೆಯನ್ನು ಉತ್ತೇಜಿಸಲು, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಇದು ಅವಶ್ಯಕವಾಗಿದೆ, ಅನ್ವಯವಾಗುವ ಕಾನೂನಿನಿಂದ ಮತ್ತಷ್ಟು ನಿರ್ದಿಷ್ಟಪಡಿಸಲಾಗಿದೆ (ಉದಾ. ಯುರೋಪಿಯನ್ ಯೂನಿಯನ್ ಕಾನೂನಿನಲ್ಲಿ).
ನಾವು ಈ ಆಧಾರದ ಮೇಲೆ ಪ್ರಕ್ರಿಯೆಯನ್ನು ಕೈಗೊಳ್ಳುವಾಗ ಸೂಕ್ತವಾಗಿದೆ, ಪಾರದರ್ಶಕವಾಗಿದೆ ಎಂಬುದನ್ನು ಖಚಿತಪಡಿಸುವುದಕ್ಕೆ ಅಗತ್ಯವಾದ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ.
ನಾವು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಕಾರ್ಯನಿರ್ವಹಿಸಲು ಅಗತ್ಯವಿರುವಂತೆ ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸಿದಾಗ, ನಮ್ಮ ಪ್ರಕ್ರಿಯೆಗೆ ಆಕ್ಷೇಪಣೆ ಮಾಡುವ ಮತ್ತು ನಿರ್ಬಂಧಿಸುವ ಹಕ್ಕನ್ನು ನೀವು ಹೊಂದಿರುತ್ತೀರಿ. ನಿಮ್ಮ ಹಕ್ಕುಗಳನ್ನು ಚಲಾಯಿಸಲು, ಗೌಪ್ಯತೆ ನೀತಿಯ "ನಿಮ್ಮ ಹಕ್ಕುಗಳನ್ನು ನೀವು ಹೇಗೆ ಚಲಾಯಿಸುತ್ತೀರಿ" ವಿಭಾಗಕ್ಕೆ ಹೋಗಿ.
ಮೇಲಕ್ಕೆ ಹಿಂದಿರುಗಿ
ನಿಮ್ಮ ಹಕ್ಕುಗಳನ್ನು ನೀವು ಹೇಗೆ ಚಲಾಯಿಸುವಿರಿ?
ಅನ್ವಯವಾಗುವ ಮಾಹಿತಿ ಸಂರಕ್ಷಣಾ ಕಾನೂನಿನಡಿಯಲ್ಲಿ, ನಿಮ್ಮ ಮಾಹಿತಿಯನ್ನು ಪ್ರವೇಶಿಸಲು, ಸರಿಪಡಿಸಲು, ಪೋರ್ಟ್ ಮಾಡಲು ಮತ್ತು ಅಳಿಸಲು ನಿಮಗೆ ಹಕ್ಕಿದೆ, ಜೊತೆಗೆ ನಿಮ್ಮ ಮಾಹಿತಿಯನ್ನು ಕೆಲವು ಪ್ರಕ್ರಿಯೆಗಳಿಗೆ ನಿರ್ಬಂಧಿಸುವ ಮತ್ತು ಆಕ್ಷೇಪಿಸುವ ಹಕ್ಕಿದೆ.
ನೇರ ಮಾರುಕಟ್ಟೆಗಾಗಿ ನಿಮ್ಮ ಮಾಹಿತಿಯನ್ನು ನಾವು ಪ್ರಕ್ರಿಯೆಗೊಳಿಸುವುದನ್ನು ಆಕ್ಷೇಪಿಸುವ ಹಕ್ಕನ್ನು ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ನಾವು ಕಾರ್ಯವನ್ನು ನಿರ್ವಹಿಸುತ್ತಿರುವಾಗ ನಿಮ್ಮ ಮಾಹಿತಿಯನ್ನು ಉಪಯೋಗಿಸುವ ನಮ್ಮ ಪ್ರಕ್ರಿಯೆಗೆ ಆಕ್ಷೇಪಿಸುವ ಹಕ್ಕನ್ನು ಇದು ಒಳಗೊಂಡಿದೆ ಅಥವಾ ನಮ್ಮ ಕಾನೂನುಬದ್ಧ ಹಿತಾಸಕ್ತಿಗಳನ್ನು ಅಥವಾ ಮೂರನೇ ವ್ಯಕ್ತಿಯ ಹಿತಾಸಕ್ತಿಗಳನ್ನು ಅನುಸರಿಸುತ್ತದೆ. ಆಕ್ಷೇಪಣೆಯನ್ನು ನಿರ್ಣಯಿಸುವಾಗ ನಾವು ಇಲ್ಲಿ ವ್ಯಕ್ತ ಪಡಿಸುವ ಹಲವಾರು ಅಂಶಗಳನ್ನು ಪರಿಗಣಿಸುತ್ತೇವೆ: ನಮ್ಮ ಬಳಕೆದಾರರ ಸಮಂಜಸ ನಿರೀಕ್ಷೆಗಳು; ನಿಮಗೆ, ನಮಗೆ ಮತ್ತು ಇತರ ಬಳಕೆದಾರರು ಅಥವಾ ಮೂರನೇ ವ್ಯಕ್ತಿಗಳಿಗೆ ಅನುಕೂಲಗಳು ಮತ್ತು ಅಪಾಯಗಳ; ಮತ್ತು ಅದೇ ಉದ್ದೇಶವನ್ನು ಸಾಧಿಸಲು ಲಭ್ಯವಿರುವ ಇತರ ವಿಧಾನಗಳಾದ ಕಡಿಮೆ ಆಕ್ರಮಣಶೀಲತೆ ಮತ್ತು ಅಸಮರ್ಪಕ ಪ್ರಯತ್ನದ ಅಗತ್ಯವಿಲ್ಲದಿರುವ ಇತರ ಲಭ್ಯವಿರುವ ಮಾದರಿಗಳನ್ನು ಪರಿಗಣಿಸಲಾಗುತ್ತದೆ. ನಿಮ್ಮ ಆಕ್ಷೇಪಣೆಯನ್ನು ಎತ್ತಿ ಹಿಡಿಯಲಾಗುತ್ತದೆ ಮತ್ತು ಪ್ರಕ್ರಿಯೆಯು ಬಲವಾದ ಕಾನೂನುಬದ್ಧ ರೀತಿಯದ್ದಾಗಿದ್ದು ಅಥವಾ ಕಾನೂನು ಕಾರಣಗಳಿಗೆ ಅಗತ್ಯವಿಲ್ಲದ ಹೊರತು ನಿಮ್ಮ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವುದನ್ನು ನಾವು ತಡೆಹಿಡಿಯುತ್ತೇವೆ.
ನಿಮ್ಮ ಮಾಹಿತಿಯನ್ನು ನಾವು ಪ್ರಕ್ರಿಯೆಗೊಳಿಸುವುದಕ್ಕೆ ಆಕ್ಷೇಪಿಸಬಹುದು ನಿಮಗಿರುವ ನಿರ್ಬಂಧಿಸುವ ಆಯ್ಕೆಗಳ ಕುರಿತಾಗಿ ಹಾಗೂ ನಾವು ನಿಮ್ಮ ಮಾಹಿತಿಯನ್ನು ಯಾವ ರೀತಿಯಲ್ಲಿ ಉಪಯೋಗಿಸಬಹುದು ಎಂಬುದನ್ನು ಇಲ್ಲಿ ನೋಡಿ. ನೇರ ಮಾರ್ಕೆಟಿಂಗ್‌ಗಾಗಿ ನಾವು ನಿಮ್ಮ ಮಾಹಿತಿಯನ್ನು ಎಲ್ಲಿ ಬಳಸುತ್ತೇವೆ, ಅಂತಹ ಸಂವಹನಗಳಲ್ಲಿ ಅನ್‌ಸಬ್‌ಸ್ಕ್ರೈಬ್ ಲಿಂಕ್ ಬಳಸಿ ಅಥವಾ ನಮ್ಮ ಅಪ್ಲಿಕೇಶನ್‌ನಲ್ಲಿರುವ "ಬ್ಲಾಕ್" ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗಲೂ ಭವಿಷ್ಯದ ನೇರ ಮಾರ್ಕೆಟಿಂಗ್ ಸಂದೇಶಗಳನ್ನು ಆಕ್ಷೇಪಣೆ ಒಡ್ಡಬಹುದು ಮತ್ತು ಅದರಿಂದ ಹೊರಗುಳಿಯಬಹುದು.
ನಮ್ಮ ಇನ್-ಆಪ್ ವಿನಂತಿ ಖಾತೆ ಮಾಹಿತಿ ವೈಶಿಷ್ಟ್ಯವನ್ನು ಬಳಸಿಕೊಂಡು ನಿಮ್ಮ ಮಾಹಿತಿಯನ್ನು ನೀವು ಪ್ರವೇಶಿಸಬಹುದು ಅಥವಾ ಪೋರ್ಟ್ ಮಾಡಬಹುದು (ಸೆಟ್ಟಿಂಗ್‌ಗಳು > ಖಾತೆ ಅಡಿಯಲ್ಲಿ ಲಭ್ಯವಿದೆ). "ನಿಮ್ಮ ಮಾಹಿತಿಯನ್ನು ನಿರ್ವಹಿಸುವುದು ಮತ್ತು ಉಳಿಸಿಕೊಳ್ಳುವುದು" ವಿಭಾಗದಲ್ಲಿ ವಿವರಿಸಿದಂತೆ ಅಪ್ಲಿಕೇಶನ್‌ನಲ್ಲಿ ನೇರವಾಗಿ ನಿಮ್ಮ ಮಾಹಿತಿಯನ್ನು ಸರಿಪಡಿಸಲು, ನವೀಕರಿಸಲು ಮತ್ತು ಅಳಿಸಲು ನೀವು ಪರಿಕರಗಳನ್ನು ಉಪಯೋಗಿಸಬಹುದು.
ನಿಮ್ಮ ಒಪ್ಪಿಗೆಯ ಆಧಾರದ ಮೇಲೆ ನಾವು ಮಾಹಿತಿಯನ್ನು ಪ್ರಕ್ರಿಯೆಗೊಳಿಸಿದಾಗ, ಒಪ್ಪಿಗೆಯನ್ನು ಹಿಂಪಡೆಯುವ ಮೊದಲು ಅಂತಹ ಒಪ್ಪಿಗೆಯ ಆಧಾರದ ಮೇಲೆ ಪ್ರಕ್ರಿಯೆಯು ಕಾನೂನುಬದ್ಧತೆಗೆ ಧಕ್ಕೆಯಾಗದಂತೆ ಯಾವುದೇ ಸಮಯದಲ್ಲಿ ನಿಮ್ಮ ಒಪ್ಪಿಗೆಯನ್ನು ಹಿಂಪಡೆಯಲು ನಿಮಗೆ ಹಕ್ಕಿದೆ. ನಿಮ್ಮ ಒಪ್ಪಿಗೆಯನ್ನು ಹಿಂಪಡೆಯಲು, ನಿಮ್ಮ ಸಾಧನ ಆಧಾರಿತ ಅಥವಾ ಅಪ್ಲಿಕೇಶನ್‌ನಲ್ಲಿನ ಇನ್-ಆಪ್ ಸೆಟ್ಟಿಂಗ್‌ಗಳಿಗೆ ಭೇಟಿ ನೀಡಿ.
WhatsApp ನ ಪ್ರಮುಖ ಮೇಲ್ವಿಚಾರಣಾ ಪ್ರಾಧಿಕಾರ, ಐರಿಷ್ ಮಾಹಿತಿ ಸಂರಕ್ಷಣಾ ಆಯೋಗ ಅಥವಾ ಇತರ ಯಾವುದೇ ಸಮರ್ಥ ಡೇಟಾ ಸಂರಕ್ಷಣಾ ಮೇಲ್ವಿಚಾರಣಾ ಪ್ರಾಧಿಕಾರಕ್ಕೆ ದೂರು ನೀಡಲು ನಿಮಗೆ ಹಕ್ಕಿದೆ.
ಮೇಲಕ್ಕೆ ಹಿಂದಿರುಗಿ
ನಿಮ್ಮ ಮಾಹಿತಿಯನ್ನು ನಿರ್ವಹಿಸುವುದು ಮತ್ತು ಉಳಿಸಿಕೊಳ್ಳುವುದು
ಈ ಗೌಪ್ಯತೆ ನೀತಿಯಲ್ಲಿ ಗುರುತಿಸಲಾದ ಉದ್ದೇಶಗಳಿಗಾಗಿ ನಮ್ಮ ಸೇವೆಗಳನ್ನು ಒದಗಿಸುವುದು ಅಥವಾ ಕಾನೂನುಬದ್ಧ ಕಟ್ಟುಪಾಡುಗಳನ್ನು ಪಾಲಿಸುವುದು, ನಮ್ಮ ನಿಯಮಗಳ ಜಾರಿಗೊಳಿಸುವುದು ಮತ್ತು ಉಲ್ಲಂಘನೆಯನ್ನು ತಡೆಗಟ್ಟುವುದು ಅಥವಾ ನಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳುವುದು ಅಥವಾ ರಕ್ಷಿಸುವುದು, ನಾವು ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು, ಆಸ್ತಿ ಮತ್ತು ಬಳಕೆದಾರರು ಸೇರಿದಂತೆ ಅಗತ್ಯವಿರುವವರೆಗೆ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಶೇಖರಣಾ ಅವಧಿಗಳನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ, ಅದು ಮಾಹಿತಿಯ ಸ್ವರೂಪ, ಅದನ್ನು ಏಕೆ ಸಂಗ್ರಹಿಸಲಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸಲಾಗುತ್ತದೆ ಸಂಬಂಧಿತ ಕಾನೂನು ಅಥವಾ ಕಾರ್ಯಾಚರಣೆಯ ಧಾರಣ ಅಗತ್ಯಗಳು ಮತ್ತು ಕಾನೂನು ಬಾಧ್ಯತೆಗಳಂತಹ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಕಾನೂನು ಕಟ್ಟುಪಾಡುಗಳು ಮತ್ತು ಸಮಸ್ಯೆಗಳು. ಉದಾಹರಣೆಗೆ ನಾವು ಡೇಟಾವನ್ನು ಉಳಿಸಿಕೊಳ್ಳಲು ಕಾನೂನು ಭಾದ್ಯತೆಯನ್ನು ಹೊಂದಿರುವಾಗ ನಮ್ಮ ನಿಯಮಗಳ ಉಲ್ಲಂಘನೆಯನ್ನು ಜಾರಿಗೊಳಿಸಲು ಮತ್ತು ತಡೆಗಟ್ಟಲು ಅಥವಾ ಅಗತ್ಯವಿದ್ದರೆ ಹಕ್ಕುಗಳು, ಆಸ್ತಿ ಮತ್ತು ಬಳಕೆದಾರರನ್ನು ರಕ್ಷಿಸಲು ನಾವು ಕಾನೂನು ಕಾರಣಗಳಿಗಾಗಿ ನಿಮ್ಮ ಮಾಹಿತಿಯನ್ನು ಸಹ ಉಳಿಸಿಕೊಳ್ಳುತ್ತೇವೆ. ನಮ್ಮ "ಕಾನೂನು, ನಮ್ಮ ಹಕ್ಕುಗಳು ಮತ್ತು ರಕ್ಷಣೆ" ವಿಭಾಗವು ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.
ಕಾರ್ಯಾಚರಣೆಗಳಿಗಾಗಿ ಹಿಡಿದಿಟ್ಟುಕೊಳ್ಳುವ ಅಗತ್ಯಗಳು. ಉದಾಹರಣೆಗೆ, ನಮ್ಮ ಸೇವೆಗಳನ್ನು ಒದಗಿಸುವಾಗ ನಾವು ನಿಮ್ಮ ಸಂದೇಶಗಳನ್ನು ಉಳಿಸಿಕೊಳ್ಳುವುದಿಲ್ಲ (ಮೇಲೆ ತಿಳಿಸಲಾದ ಸೀಮಿತ ಸಂದರ್ಭಗಳನ್ನು ಹೊರತುಪಡಿಸಿ) ಮತ್ತು ನಿಮ್ಮ ಸಂದೇಶಗಳನ್ನು ತಲುಪಿಸಿದ ನಂತರ ಅವುಗಳನ್ನು ನಮ್ಮ ಸರ್ವರ್‌ಗಳಿಂದ ಅಳಿಸಲಾಗುತ್ತದೆ. ಸಂದೇಶವನ್ನು ತಕ್ಷಣವೇ ತಲುಪಿಸಲು ಸಾಧ್ಯವಾಗದಿದ್ದರೆ (ಉದಾಹರಣೆಗೆ, ಸ್ವೀಕರಿಸುವವರು ಆಫ್‌ಲೈನ್‌ನಲ್ಲಿದ್ದರೆ), ನಾವು ಅದನ್ನು ತಲುಪಿಸಲು ಪ್ರಯತ್ನಿಸುವಾಗ ಅದನ್ನು 30 ದಿನಗಳವರೆಗೆ ನಮ್ಮ ಸರ್ವರ್‌ಗಳಲ್ಲಿ ಎನ್‌ಕ್ರಿಪ್ಟ್ ರೂಪದಲ್ಲಿ ಇಡುತ್ತೇವೆ ನಂತರ ಅವುಗಳನ್ನು ಅಳಿಸುತ್ತೇವೆ.
ಮೆಸೇಜಿಂಗ್ ಮೆಟಾಡೇಟಾವನ್ನು ಅಳಿಸುವುದು. ಸಂವಹನವನ್ನು ರವಾನಿಸಲು, ನಮ್ಮ ಸೇವೆಗಳನ್ನು ನಿರ್ವಹಿಸಲು, ನಮ್ಮ ಸೇವೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು, ಬಿಲ್ಲಿಂಗ್‌ಗಾಗಿ (ಅನ್ವಯವಾಗುವಲ್ಲಿ) ಅಥವಾ ಅನ್ವಯವಾಗುವ ಕಾನೂನಿನಡಿಯಲ್ಲಿ ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಇನ್ನು ಮುಂದೆ ಅಗತ್ಯವಿಲ್ಲವೆಂದೆನಿಸಿದಾಗ ಮೆಸೇಜಿಂಗ್ ಮೆಟಾಡೇಟಾವನ್ನು ಅಳಿಸಲಾಗುತ್ತದೆ ಅಥವಾ ಅನಾಮಧೇಯಗೊಳಿಸಲಾಗುತ್ತದೆ.
ನಿಮ್ಮ ಮಾಹಿತಿಯನ್ನು ಮತ್ತಷ್ಟು ನಿರ್ವಹಿಸಲು, ಬದಲಾಯಿಸಲು, ಮಿತಿಗೊಳಿಸಲು ಅಥವಾ ಅಳಿಸಲು ನೀವು ಬಯಸಿದರೆ, ನೀವು ಅದನ್ನು ಈ ಕೆಳಗಿನ ಪರಿಕರಗಳ ಮೂಲಕ ಮಾಡಬಹುದು:
- ಸೇವೆಗಳ ಸೆಟ್ಟಿಂಗ್‌ಗಳು. ಇತರ ಬಳಕೆದಾರರಿಗೆ ಲಭ್ಯವಿರುವ ಕೆಲವು ಮಾಹಿತಿಯನ್ನು ನಿರ್ವಹಿಸಲು ನಿಮ್ಮ ಸೇವೆಗಳ ಸೆಟ್ಟಿಂಗ್‌ಗಳನ್ನು ನೀವು ಬದಲಾಯಿಸಬಹುದು. ನಿಮ್ಮ ಸಂಪರ್ಕಗಳು, ಗುಂಪುಗಳು ಮತ್ತು ಪ್ರಸಾರ ಪಟ್ಟಿಗಳನ್ನು ನೀವು ನಿರ್ವಹಿಸಬಹುದು, ಅಥವಾ ನಮ್ಮ ಸೇವೆಗಳಲ್ಲಿ ನೀವು ಯಾರೊಂದಿಗೆ ಸಂವಹನ ನಡೆಸುತ್ತೀರಿ ಎಂಬುದನ್ನು ನಿರ್ವಹಿಸಲು ನಮ್ಮ "ಬ್ಲಾಕ್" ವೈಶಿಷ್ಟ್ಯವನ್ನು ಬಳಸಬಹುದು.
- ನಿಮ್ಮ ಮೊಬೈಲ್ ಫೋನ್ ಸಂಖ್ಯೆ, ಪ್ರೊಫೈಲ್ ಹೆಸರು ಮತ್ತು ಚಿತ್ರ ಮತ್ತು "ಕುರಿತು" ಮಾಹಿತಿಯನ್ನು ಬದಲಾಯಿಸುವುದು. ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನೀವು ಬದಲಾಯಿಸಿದರೆ ನೀವು ಅದನ್ನು ನಮ್ಮ ಅಪ್ಲಿಕೇಶನ್‌ನಲ್ಲಿನ ಬದಲಾವಣೆ ಸಂಖ್ಯೆಯ ವೈಶಿಷ್ಟ್ಯವನ್ನು ಬಳಸಿಕೊಂಡು ನವೀಕರಿಸಬೇಕು ಮತ್ತು ನಿಮ್ಮ ಖಾತೆಯನ್ನು ನಿಮ್ಮ ಹೊಸ ಮೊಬೈಲ್ ಫೋನ್ ಸಂಖ್ಯೆಗೆ ವರ್ಗಾಯಿಸಬೇಕು. ನಿಮ್ಮ ಪ್ರೊಫೈಲ್ ಹೆಸರು, ಪ್ರೊಫೈಲ್ ಚಿತ್ರ ಮತ್ತು "ಕುರಿತು" ಮಾಹಿತಿಯನ್ನು ನೀವು ಯಾವ ಸಮಯದಲ್ಲಾದರೂ ಬದಲಾಯಿಸಬಹುದು.
- ನಿಮ್ಮ WhatsApp ಖಾತೆಯನ್ನು ಅಳಿಸುವುದು . ನಮ್ಮ ಇನ್-ಆಪ್ ನನ್ನ ಖಾತೆ ಅಳಿಸು ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವುದೇ ಸಮಯದಲ್ಲಿ ನಿಮ್ಮ WhatsApp ಖಾತೆಯನ್ನು ಅಳಿಸಬಹುದು. ನಿಮ್ಮ ಖಾತೆಗಾಗಿ ನೀವು ಅಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ ನಂತರ, ಆ ಖಾತೆಯನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ (ಅಂದರೆ ನೀವು ಲಾಗ್ ಇನ್ ಮಾಡಲು ಅಥವಾ ಮರು ನೋಂದಾಯಿಸಲು ಸಾಧ್ಯವಿಲ್ಲ).
ನಿಮ್ಮ ಖಾತೆಯನ್ನು ಅಳಿಸಿದಾಗ ನಿಮ್ಮ ಮಾಹಿತಿಗೆ ಏನಾಗುತ್ತದೆ?
ನಿಮ್ಮ WhatsApp ಖಾತೆಯನ್ನು ನೀವು ಅಳಿಸಿದಾಗ, ನಿಮ್ಮ ಬಗ್ಗೆ ನಮ್ಮಲ್ಲಿರುವ ಮಾಹಿತಿಯನ್ನು ನಾವು ಅಳಿಸುತ್ತೇವೆ, ಕೆಳಗೆ ಪಟ್ಟಿ ಮಾಡಲಾದ ಮಾಹಿತಿಯ ಹೊರತಾಗಿ ನಾವು ಸೀಮಿತ ಸಂದರ್ಭಗಳಲ್ಲಿ ಎಲ್ಲಾ ಮಾಹಿತಿಯನ್ನು ಉಳಿಸಿಕೊಳ್ಳುತ್ತೇವೆ.
ಅಳಿಸಲಾದ ಮಾಹಿತಿ. ನಿಮ್ಮ ವಿತರಿಸದ ಸಂದೇಶಗಳು, ನಿಮ್ಮ ಖಾತೆ ಮಾಹಿತಿ ಮತ್ತು ಪ್ರೊಫೈಲ್ ಫೋಟೋವನ್ನು ನಮ್ಮ ಸರ್ವರ್‌ಗಳಿಂದ ಅಳಿಸಲಾಗುವುದು. ನಿಮ್ಮನ್ನು ಎಲ್ಲಾ WhatsApp ಗುಂಪುಗಳಿಂದ ತೆಗೆದುಹಾಕಲಾಗುತ್ತದೆ. ನಿಮ್ಮ WhatsApp ಮಾಹಿತಿಯನ್ನು ಅಳಿಸಲು ಅಳಿಸುವ ಪ್ರಕ್ರಿಯೆಯ ಪ್ರಾರಂಭದ ದಿನದಿಂದ 90 ದಿನಗಳವರೆಗಿನ ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಗಮನಿಸಿ. ವಿಪತ್ತು, ಸಾಫ್ಟ್‌ವೇರ್ ದೋಷ ಅಥವಾ ಇತರ ಡೇಟಾ ನಷ್ಟದ ಸಂದರ್ಭದಲ್ಲಿ ಕಳೆದುಹೋದ ಡೇಟಾವನ್ನು ಮರುಪಡೆಯಲು ನಾವು ಬಳಸುವ ಬ್ಯಾಕಪ್ ಸಂಗ್ರಹಣೆಯಲ್ಲಿ 90 ದಿನಗಳ ನಂತರವೂ ಸಹ ನಿಮ್ಮ ಮಾಹಿತಿಯ ಪ್ರತಿಗಳು ಉಳಿಯಬಹುದು.
ನಾವು ಉಳಿಸಿಕೊಳ್ಳುವ ಮಾಹಿತಿ
- ಕೆಲವು ಸಂದರ್ಭಗಳಲ್ಲಿ, ನಮ್ಮ ಸೇವೆಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳಲು, ಭದ್ರತಾ ಘಟನೆ ಅಥವಾ ದುರ್ಬಲತೆಯನ್ನು ವಿಶ್ಲೇಷಿಸಲು / ತನಿಖೆ ಮಾಡಲು ಸಾಮಾನ್ಯವಾಗಿ ಮಾಹಿತಿ ಉಳಿಸಿಕೊಳ್ಳುವ ಅವಧಿಯನ್ನು ಮೀರಿ ನಾವು ಪರಿಶೀಲಿಸುತ್ತಿರುವ ಕೆಲವು ಲಾಗ್‌ಗಳನ್ನು ನಾವು ಉಳಿಸಿಕೊಳ್ಳುತ್ತೇವೆ.
- ಕೆಲವು ಲಾಗ್ ದಾಖಲೆಗಳಂತಹ ಕೆಲವು ವಸ್ತುಗಳ ವಿಷಯಗಳು ನಮ್ಮ ಡೇಟಾಬೇಸ್‌ನಲ್ಲಿ ಉಳಿದುಕೊಳ್ಳುತ್ತವೆ ಆದರೆ ಅವುಗಳನ್ನು ವೈಯಕ್ತಿಕ ಗುರುತಿಸುವಿಕೆಗಳಿಂದ ಬೇರ್ಪಡಿಸಲಾಗುತ್ತದೆ ಮತ್ತು ಇನ್ನು ಮುಂದೆ ನಿಮ್ಮ ಖಾತೆಗೆ ಲಿಂಕ್ ಮಾಡಲಾಗುವುದಿಲ್ಲ. ನಿಮ್ಮ ಖಾತೆಯಿಂದ ಈ ಡೇಟಾವನ್ನು ಬೇರ್ಪಡಿಸಲು, ನಾವು ಬಳಕೆದಾರ ಗುರುತಿಸುವಿಕೆಯನ್ನು ಯಾದೃಚ್ಛಿಕವಾಗಿ ರಚಿಸಿದ ಬದಲಿಯೊಂದಿಗೆ ಬದಲಾಯಿಸುತ್ತೇವೆ ಆದ್ದರಿಂದ ಅದನ್ನು ನಿಮ್ಮ ಖಾತೆಗೆ ಮತ್ತೆ ಲಿಂಕ್ ಮಾಡಲು ಸಾಧ್ಯವಿಲ್ಲ.
- ಡೇಟಾವನ್ನು ಉಳಿಸಿಕೊಳ್ಳಲು, ನಮ್ಮ ನಿಯಮಗಳ ಉಲ್ಲಂಘನೆಯನ್ನು ಜಾರಿಗೊಳಿಸಲು ಮತ್ತು ತಡೆಗಟ್ಟಲು ಅಥವಾ ನಮ್ಮ ಹಕ್ಕುಗಳು, ಆಸ್ತಿ ಮತ್ತು ಬಳಕೆದಾರರನ್ನು ರಕ್ಷಿಸಲು ಅಗತ್ಯವಿದ್ದರೆ ಕೆಲವು ಮಾಹಿತಿಯಲ್ಲಿನ ಕೆಲವು ವಿಷಯಗಳನ್ನು ಸಹ ಉಳಿಸಿಕೊಳ್ಳಬಹುದು. ನಮ್ಮ "ಕಾನೂನು, ನಮ್ಮ ಹಕ್ಕುಗಳು ಮತ್ತು ರಕ್ಷಣೆ" ವಿಭಾಗವು ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.
ನಮ್ಮ ಅಪ್ಲಿಕೇಶನ್‌ನಲ್ಲಿರುವ ಇನ್-ಆಪ್ ನನ್ನ ಖಾತೆ ಅಳಿಸು ವೈಶಿಷ್ಟ್ಯವನ್ನು ಬಳಸಿಕೊಂಡು ನಿಮ್ಮ ಸಾಧನದಿಂದ ನೀವು WhatsApp ಅಪ್ಲಿಕೇಶನ್ ಅನ್ನು ಮಾತ್ರ ಅಳಿಸಿದರೆ ನಿಮ್ಮ ಮಾಹಿತಿಯನ್ನು ದೀರ್ಘಕಾಲದವರೆಗೆ ನಮ್ಮೊಂದಿಗೆ ಸಂಗ್ರಹಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನದಲ್ಲಿರಿಸಿಕೊಳ್ಳಿ. ನಿಮ್ಮ ಖಾತೆಯನ್ನು ನೀವು ಅಳಿಸಿದಾಗ ಇದು ನೀವು ರಚಿಸಿದ ಗುಂಪುಗಳಿಗೆ ಸಂಬಂಧಿಸಿದ ನಿಮ್ಮ ಮಾಹಿತಿಯ ಮೇಲೆ ಅಥವಾ ಇತರ ಬಳಕೆದಾರರು ನಿಮಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿರುವುದರ ಮೇಲೆ ಉದಾಹರಣೆಗೆ ನೀವು ಅವರಿಗೆ ಕಳುಹಿಸಿದ ಸಂದೇಶಗಳ ನಕಲು ಇವುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ದಯವಿಟ್ಟು ನೆನಪಿನಲ್ಲಿರಿಸಿಕೊಳ್ಳಿ.
ನಮ್ಮ Android, iPhone ಅಥವಾ KaiOS ಸಹಾಯ ಕೇಂದ್ರದ ಲೇಖನಗಳಲ್ಲಿ ನಮ್ಮ ಡೇಟಾ ಅಳಿಸುವಿಕೆ ಮತ್ತು ಉಳಿಸಿಕೊಳ್ಳುವ ಅಭ್ಯಾಸಗಳ ಕುರಿತು ಮತ್ತು ನಿಮ್ಮ ಖಾತೆಯನ್ನು ಅಳಿಸುವುದು ಹೇಗೆ ಎಂಬುದರ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಬಹುದು.
ಮೇಲಕ್ಕೆ ಹಿಂದಿರುಗಿ
ಕಾನೂನು, ನಮ್ಮ ಹಕ್ಕುಗಳು ಮತ್ತು ರಕ್ಷಣೆ
"ನಾವು ಸಂಗ್ರಹಿಸುವ ಮಾಹಿತಿ" ವಿಭಾಗದಲ್ಲಿ ವಿವರಿಸಿದ ನಿಮ್ಮ ಮಾಹಿತಿಯನ್ನು ನಾವು ಪ್ರವೇಶಿಸುತ್ತೇವೆ, ಸಂರಕ್ಷಿಸುತ್ತೇವೆ ಮತ್ತು ಹಂಚಿಕೊಳ್ಳುತ್ತೇವೆ, ನಿಯಂತ್ರಕರು, ಕಾನೂನು ಜಾರಿ, ಇತರ ಸರ್ಕಾರಿ ಸಂಸ್ಥೆಗಳು, ಉದ್ಯಮ ಪಾಲುದಾರರು ಮತ್ತು ಇತರರೊಂದಿಗೆ ಹಂಚಿಕೊಳ್ಳುವುದು ಸೇರಿದಂತೆ" ಡೇಟಾವನ್ನು ಪ್ರಕ್ರಿಯೆಗೊಳಿಸಲು ನಮ್ಮ ಕಾನೂನು ಆಧಾರ "ವಿಭಾಗ, ಒಂದೊಮ್ಮೆ ನಮಗೆ ಅಗತ್ಯವೆಂದು ಉತ್ತಮ ನಂಬಿಕೆ ಇದ್ದರೆ: (ಎ) ಅನ್ವಯವಾಗುವ ಕಾನೂನು ಅಥವಾ ನಿಬಂಧನೆಗಳು, ಕಾನೂನು ಪ್ರಕ್ರಿಯೆ ಅಥವಾ ಸರ್ಕಾರದ ವಿನಂತಿಗಳಿಗೆ ಅನುಸಾರವಾಗಿ ಪ್ರತಿಕ್ರಿಯಿಸುವಿಕೆ; (ಬಿ) ಸಂಭಾವ್ಯ ಉಲ್ಲಂಘನೆಗಳ ತನಿಖೆ ಸೇರಿದಂತೆ ನಮ್ಮ ನಿಯಮಗಳು ಮತ್ತು ಅನ್ವಯವಾಗುವ ಯಾವುದೇ ನಿಯಮಗಳು ಮತ್ತು ನೀತಿಗಳನ್ನು ಜಾರಿಗೊಳಿಸುವಿಕೆ; (ಸಿ) ಪತ್ತೆ, ತನಿಖೆ, ತಡೆಗಟ್ಟುವಿಕೆ ಅಥವಾ ವಂಚನೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆ ಅಥವಾ ಭದ್ರತೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು; ಅಥವಾ (ಡಿ) ನಮ್ಮ ಬಳಕೆದಾರರು, WhatsApp, Facebook ಕಂಪನಿಗಳು ಅಥವಾ ಇತರರ ಹಕ್ಕುಗಳು, ಆಸ್ತಿ ಮತ್ತು ಸುರಕ್ಷತೆಯನ್ನು ರಕ್ಷಿಸುವುದು, ಸಾವು ಅಥವಾ ಸನ್ನಿಹಿತ ದೈಹಿಕ ಹಾನಿಯನ್ನು ತಡೆಗಟ್ಟುವುದು ಒಳಗೊಂಡಿರುತ್ತದೆ.
ಸಂದರ್ಭಗಳನ್ನು ಅವಲಂಬಿಸಿ ಈ ಪ್ರಕ್ರಿಯೆಯನ್ನು ಕೈಗೊಳ್ಳಲು ನಾವು ಅವಲಂಬಿಸಿರುವ ವಿಭಿನ್ನ ಕಾನೂನು ನೆಲೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು "ಡೇಟಾವನ್ನು ಪ್ರಕ್ರಿಯೆಗೊಳಿಸಲು ನಮ್ಮ ಕಾನೂನು ಆಧಾರ" ವಿಭಾಗ, "ನಿಯಮಗಳಿಗೆ ಅನುಗುಣವಾಗಿ ಸೇವೆಗಳ ಪೂರೈಕೆ", "ಕಾನೂನುಬದ್ಧ ಆಸಕ್ತಿಗಳು" ಮತ್ತು "ಪ್ರಮುಖ ಆಸಕ್ತಿಗಳು" ಶೀರ್ಷಿಕೆಗಳ ಅಡಿಯಲ್ಲಿ ತೋರಿಸಿರುವಂತೆ ಉಳಿಸಿಕೊಳ್ಳಲಾಗುವುದು.
ಮೇಲಕ್ಕೆ ಹಿಂದಿರುಗಿ
ನಮ್ಮ ಜಾಗತಿಕ ಕಾರ್ಯಾಚರಣೆಗಳು
WhatsApp ಮಾಹಿತಿಯನ್ನು ಜಾಗತಿಕವಾಗಿ ಹಂಚಿಕೊಳ್ಳಲಾಗುತ್ತದೆ, ಆಂತರಿಕವಾಗಿ Facebook ಕಂಪನಿಗಳ ಒಳಗೆ ಮತ್ತು ಬಾಹ್ಯವಾಗಿ ನಮ್ಮ ಪಾಲುದಾರರೊಂದಿಗೆ ಮತ್ತು ನಮ್ಮ ಗೌಪ್ಯತೆ ನೀತಿಯ ಪ್ರಕಾರವಾಗಿ ಪ್ರಪಂಚದಾದ್ಯಂತ ನೀವು ಸಂಪರ್ಕಿಸುವ ಮತ್ತು ಹಂಚಿಕೊಳ್ಳುವವರೊಂದಿಗೆ ಹಂಚುತ್ತೇವೆ.
WhatsApp ನಿಯಂತ್ರಣದಲ್ಲಿರುವ ಮಾಹಿತಿಯನ್ನು ವರ್ಗಾಯಿಸಲಾಗುತ್ತದೆ ಅಥವಾ ಪ್ರಸಾರ ಮಾಡಲಾಗುತ್ತದೆ ಅಥವಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಥವಾ ಗೌಪ್ಯತೆ ನೀತಿಯಲ್ಲಿ ವಿವರಿಸಿರುವ ಉದ್ದೇಶಗಳಿಗಾಗಿ ನೀವು ನೆಲೆಸಿರುವ ಹೊರಗಿನ ಮೂರನೆಯ ರಾಷ್ಟ್ರಗಳಲ್ಲಿ ಸಂಗ್ರಹಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು. WhatsApp ಯುನೈಟೆಡ್ ಸ್ಟೇಟ್ಸ್ ಸೇರಿದಂತೆ Facebook ನ ಜಾಗತಿಕ ಮೂಲಸೌಕರ್ಯ ಮತ್ತು ಡೇಟಾ ಕೇಂದ್ರಗಳನ್ನು ಬಳಸುತ್ತದೆ.
ನಮ್ಮ ನಿಯಮಗಳಲ್ಲಿ ನಿಗದಿಪಡಿಸಿದ ಸೇವೆಗಳನ್ನು ಒದಗಿಸಲು ಮತ್ತು ಜಾಗತಿಕವಾಗಿ ನಮ್ಮ ಸೇವೆಗಳನ್ನು ನಿಮಗೆ ಕಾರ್ಯಾಚರಣೆಗೊಳಿಸಲು ಮತ್ತು ಒದಗಿಸುವುದಕ್ಕಾಗಿ ಸಕ್ರಿಯಗೊಳಿಸುವಂತೆ ಮಾಡಲು ಈ ವರ್ಗಾವಣೆಗಳು ಅಗತ್ಯ ಮತ್ತು ಅವಶ್ಯಕವಾಗಿವೆ. ಮೂರನೇ ದೇಶಗಳಿಗೆ ವರ್ಗಾವಣೆಗಾಗಿ, ನಾವು ಯುರೋಪಿಯನ್ ಆಯೋಗದಿಂದ ಅನುಮೋದಿಸಲ್ಪಟ್ಟ ಪ್ರಮಾಣಿತ ಒಪ್ಪಂದದ ಷರತ್ತುಗಳನ್ನು ಬಳಸಿಕೊಳ್ಳುತ್ತೇವೆ (ಇವು ಯಾವುವು ಎಂಬುದರ ವಿವರಣೆಯನ್ನು ನೋಡಿ ಇಲ್ಲಿ), ಅಥವಾ ಕೆಲವು ದೇಶಗಳ ಬಗ್ಗೆ ಯುರೋಪಿಯನ್ ಆಯೋಗದ ಸಮರ್ಪಕ ನಿರ್ಧಾರಗಳನ್ನು ಅವಲಂಬಿಸಿ, ಇದರ ಮೂಲಕ ಮೂರನೇ ದೇಶ, ಭೂಪ್ರದೇಶ ಅಥವಾ ಆ ಮೂರನೇ ದೇಶದೊಳಗಿನ ಒಂದು ಅಥವಾ ಹೆಚ್ಚಿನ ನಿರ್ದಿಷ್ಟ ವಲಯಗಳು ಸಾಕಷ್ಟು ಮಟ್ಟದ ರಕ್ಷಣೆ ಅಥವಾ ಅದರಷ್ಟೇ ಸಮಾನವಾದ ತಂತ್ರಗಳನ್ನು ಮಾಹಿತಿಯ ರಕ್ಷಣೆಯ ಕಾನೂನು ಅನ್ವಯವಾಗುವಂತೆ ಅಲ್ಲಿ ಒದಗಿಸಲಾಗಿದೆ. ಯುರೋಪಿಯನ್ ಆರ್ಥಿಕ ಪ್ರದೇಶದಿಂದ ಅಮೆರಿಕಕ್ಕೆ ಡೇಟಾ ವರ್ಗಾವಣೆಗಾಗಿ, ನಾವು ಪ್ರಮಾಣಿತ ಒಪ್ಪಂದದ ಷರತ್ತುಗಳನ್ನು ಅವಲಂಬಿಸಿದ್ದೇವೆ.
ಮೇಲಕ್ಕೆ ಹಿಂದಿರುಗಿ
ನಮ್ಮ ನೀತಿಗೆ ನವೀಕರಣಗಳು
ನಾವು ನಮ್ಮ ಗೌಪ್ಯತೆ ನೀತಿಯನ್ನು ತಿದ್ದುಪಡಿ ಮಾಡಬಹುದು ಅಥವಾ ನವೀಕರಿಸಬಹುದು. ಈ ಗೌಪ್ಯತೆ ನೀತಿಯನ್ನು ಸೂಕ್ತವಾಗಿ ಕಂಡಂತೆ ತಿದ್ದುಪಡಿಯನ್ನು ಮಾಡಿ ಅದರ ಸೂಚನೆಯನ್ನು ನಿಮಗೆ ಒದಗಿಸುತ್ತೇವೆ ಮತ್ತು ಈ ನವೀಕರಣಗಳು "ಕೊನೆಯದಾಗಿ ಮಾರ್ಪಡಿಸಿರುವ" ದಿನಾಂಕವನ್ನು ಗೌಪ್ಯತೆ ನೀತಿಯ ಮೇಲಿನ ಭಾಗದಲ್ಲಿ ನೀಡಲಾಗಿರುತ್ತದೆ. ದಯವಿಟ್ಟು ಕಾಲಕಾಲಕ್ಕೆ ನಮ್ಮ ಗೌಪ್ಯತೆ ನೀತಿಯನ್ನು ಪರಿಶೀಲಿಸಿ.
ಮೇಲಕ್ಕೆ ಹಿಂದಿರುಗಿ
ನಮ್ಮನ್ನು ಸಂಪರ್ಕಿಸಿ
WhatsApp ಗಾಗಿ ಡೇಟಾ ರಕ್ಷಣೆ ಅಧಿಕಾರಿಯನ್ನು ಇಲ್ಲಿ ಸಂಪರ್ಕಿಸಬಹುದು.
ನಮ್ಮ ಗೌಪ್ಯತೆ ನೀತಿಯ ಕುರಿತು ನೀವು ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಅಥವಾ ನಮಗೆ ಇಲ್ಲಿ ಬರೆಯಿರಿ:
WhatsApp Ireland Limited
Attn: ಗೌಪ್ಯತೆ ನೀತಿ
4 Grand Canal Square
Grand Canal Harbour
Dublin 2
Ireland
ಮೇಲಕ್ಕೆ ಹಿಂದಿರುಗಿ