
ಅದು ಮನೆಗೆ ಹಣವನ್ನು ಕಳುಹಿಸುವುದಾಗಿರಲಿ, ನಿಮ್ಮ ಚಿಕ್ಕಮ್ಮನ ಜನ್ಮದಿನಕ್ಕಾಗಿ ಕೊಡುವ ಉಡುಗೊರೆಯ ವೆಚ್ಚವನ್ನು ಹಂಚಿಕೊಳ್ಳುವುದಾಗಿರಲಿ ಅಥವಾ ಮದ್ಯಾಹ್ನದ ಊಟಕ್ಕೆ ಸ್ನೇಹಿತರಿಗೆ ಮರುಪಾವತಿ ಮಾಡುವುದಾಗಿರಲಿ, ಎಲ್ಲವನ್ನೂ ಈಗ ಯಾವುದೇ ಫೀ ಇಲ್ಲದೇ WhatsApp ನಲ್ಲಿ ಮಾಡಿ.
ಪ್ರತಿ ಬಾರಿ ನೀವು ಹಣವನ್ನು ಕಳುಹಿಸುವಾಗ ನಿಮ್ಮ UPI PIN ಬಳಸಿ. ನಿಮ್ಮ ಕಾರ್ಡ್ ಅಥವಾ UPI ಪಿನ್ ಮಾಹಿತಿಯನ್ನು WhatsApp ಸಂಗ್ರಹಿಸುವುದಿಲ್ಲ.
UPI ಆಧಾರಿತ ಆ್ಯಪ್‌ಗಳನ್ನು ಬಳಸುವವರಿಗೆ WhatsApp ಮೂಲಕ ಹಣವನ್ನು ಕಳುಹಿಸಲು ಮತ್ತು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯನ್ನು ಒಮ್ಮೆ ಸೇರಿಸಿದರೆ ಸಾಕು.
ಚಾಟ್‌ನಲ್ಲಿ ನಿಮ್ಮ ಟ್ರಾನ್ಸ್‌ಫರ್ ಸ್ಟೇಟಸ್ ಅನ್ನು ಖಚಿತಪಡಿಸಿಕೊಳ್ಳಿ ಹಾಗೂ ಪೇಮೆಂಟ್ ಸೆಟ್ಟಿಂಗ್ಸ್‌ನಲ್ಲಿ ಹಿಂದಿನ ವಹಿವಾಟುಗಳನ್ನು ವೀಕ್ಷಿಸಿ.
ಬ್ಯಾಂಕ್ ಖಾತೆಗಳ ನಡುವೆ ಹಣವನ್ನು ನೇರವಾಗಿ ಟ್ರಾನ್ಸ್‌ಫರ್ ಮಾಡಲಾಗುತ್ತದೆ. WhatsApp ನಲ್ಲಿರುವ ಪೇಮೆಂಟ್ಸ್ ಫೀಚರ್ BHIM UPI ನಿಂದ ಸಂಚಾಲಿತಗೊಂಡಿದ್ದು, ಅದನ್ನು ಭಾರತದಲ್ಲಿರುವ ಪಾವತಿ ಪಾಲುದಾರರು ಪ್ರಕ್ರಿಯೆಗೊಳಿಸುತ್ತಾರೆ.